Advertisement

ಜನಪದ ಸಂಸ್ಕೃತಿ ಉಳಿಸಿ-ಬೆಳೆಸಿ

04:18 PM Mar 12, 2020 | Team Udayavani |

ಮುಧೋಳ: ಜನಪದ ಅರಿಯದವರಿಗೆ ಭಾರತೀಯ ಸಂಸ್ಕೃತಿ ಪರಿಚಯವಾಗಲು ಸಾಧ್ಯವಿಲ್ಲ. ಜನಪದ ನಮ್ಮ ತಾಯಿ ಸಂಸ್ಕೃತಿ. ಇದನ್ನು ಉಳಿಸಿ ಬೆಳೆಸಬೇಕಾಗಿರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಬಿ.ಎಚ್‌. ಪಂಚಗಾಂವಿ ಹೇಳಿದರು.

Advertisement

ನಗರದ ರನ್ನ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಜನಪದ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಹಿರಿಮೆ ಗ್ರಾಮೀಣ ಭಾಗದ ಜನರಿಗೆ ಸಲ್ಲುತ್ತದೆ. ಈ ಕಲೆಗೆ ಪ್ರೋತ್ಸಾಹ ಅಗತ್ಯ. ಕಲಾವಿದನಿಗೆ ಪ್ರೇಕ್ಷಕರ ಚಪ್ಪಾಳೆ ದೊಡ್ಡ ಪ್ರಶಸ್ತಿ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಶಿರೂರ ಮಾತನಾಡಿ, ಗ್ರಾಮೀಣ ಸೊಡಗಿನ ಜನಪದ ವನ್ನು ದೇಶದಾದ್ಯಂತ ಪಸರಿಸಲು ಸರ್ಕಾರದ ಕಾರ್ಯಕ್ರಮ ವಿವರಿಸಿದರು.

ರೂಗಿ ಅಡವಿ ಮಠದ ನಿತ್ಯಾನಂದ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಿಪಂ ಸದಸ್ಯ ಭೀಮನಗೌಡ ಪಾಟೀಲ, ಅರುಣ ಕಾರಜೋಳ, ಬಯಲಾಟ ಅಕಾಡೆಮಿ ಸದಸ್ಯ ಶಿವಾನಂದ ಶೆಲ್ಲಿಕೇರಿ, ಕುಮಾರ ಹುಲಕುಂದ, ಕಲ್ಲಪ್ಪಣ್ಣ ಸಬರದ, ಸಿದ್ದು ದಿವಾನ, ಸಂಗಮೇಶ ನೀಲಗುಂದ, ಗುರುರಾಜ ಕಟ್ಟಿ, ಮಹಾಂತೇಶ ನರಸನಗೌಡ್ರ ಉಪಸ್ಥಿತರಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಭಜಂತ್ರಿ ಅವರಿಂದ ಶಹನಾಯಿ, ಶ್ರೀಮಂತ ಮಾಳಿ ತಂಡದಿಂದ ಭಜನೆ ಪದ, ಹನುಮಾನ ನೃತ್ಯ ರೂಪಕ ತಂಡದಿಂದ ಜನಪದ ನೃತ್ಯ ರೂಪಕ, ಯಶೋಧಾ ವಜ್ಜರಮಟ್ಟಿ ಅವರಿಂದ ಜನಪದ ಸಂಗೀತ, ಪೂಜಾ ಗುಣದಾಳದಿಂದ ಜನಪದ ನೃತ್ಯ, ಅಕ್ಕಮಹಾದೇವಿ ಸೋಬಾನಿ ತಂಡದಿಂದ ಕೋಲಾಟ, ಗಣಪತಿ ಗೊಂಧಳಿ ಅವರಿಂದ ಗೊಂಧಳಿ ಹಾಡು, ಲಲಿತಾ ಬಾಗವ್ವಗೋಳ ತಂಡದಿಂದ ಚೌಡಕಿ ಪದ, ಚಂದ್ರಕಾಂತ ಆಲೂರ ಹಾಗೂ ಸಂಗಡಿಗರಿಂದ ಜನಪದ ಹಾಡು, ಭೀಮಪ್ಪ ಮಾದರ ಹಾಗೂ ಸಂಗಡಿಗರಿಂದ ಹಂತಿ ಪದ, ಬೋರವ್ವ ಬಾಗನ್ನವರ ಹಾಗೂ ಸಂಗಡಿಗರಿಂದ ಚೌಡಕಿ ಪದ, ವಿಠಲ ಬಾಗವ್ವಗೋಳ ತಂಡದಿಂದ ಭಜನಾಪದಗಳು ನಡೆದವು.

Advertisement

ಜಡಗಾ ಬಾಲಾ ವೃತ್ತದಿಂದ ಹೊರಟ ಜನಪದ ಜಾತ್ರೆಯ ಮೆರವಣಿಗೆಯಲ್ಲಿ 15ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. ಸಂಸ್ಥೆಯ ಅಧ್ಯಕ್ಷ ಗಾಯಕ ಹಣಮಂತ ಮೇತ್ರಿ ಸ್ವಾಗತಿಸಿದರು. ರಮೇಶ ಬಿಳ್ಳೂರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next