Advertisement

ಸನಾತನ ಧರ್ಮ-ಸಂಸ್ಕೃತಿ ಉಳಿಸಿ ಬೆಳೆಸಿ

03:39 PM May 17, 2022 | Team Udayavani |

ಹೊನ್ನಾಳಿ: ಬಂಜಾರ ಸಮುದಾಯದಲ್ಲಿ ಯುವಕರು ಮತಾಂತರವಾಗುತ್ತಿರುವ ಬಗ್ಗೆ ವದಂತಿ ಇದ್ದು, ಅಂತಹವರನ್ನು ಮರಳಿ ಕರೆತರುವ ಬಗ್ಗೆ ಸಮಾಜದ ಮುಖಂಡರು ಚಿಂತನೆ ಮಾಡಬೇಕಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ನ್ಯಾಮತಿ ತಾಲೂಕು ಸಂತ ಸೇವಾಲಾಲ್‌ರ ಜನ್ಮಸ್ಥಾನ ಸೂರಗೊಂಡನಕೊಪ್ಪ ಭಾಯಾಗಡ್‌ನ‌ಲ್ಲಿ ಸೋಮವಾರ ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್‌ ಮತ್ತು ಮರಿಯಮ್ಮದೇವಿ ದೇಗುಲ ಪ್ರತಿಷ್ಠಾಪನಾ ರಜತ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಸನಾತನ ಧರ್ಮ ಸಂಸ್ಕೃತಿ ಉಳಿದು ಬೆಳೆಯಬೇಕಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಪುಣ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದರಲ್ಲದೇ ಬಂಜಾರಾ ನಿಗಮ ಸ್ಥಾಪನೆ ಮಾಡಿದರು ಎಂದು ಹೇಳಿದರು.

ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಂಜಾರಾ ಸಮು ದಾಯದ ಮುಖಂಡರು ಯಾವುದೇ ಪಕ್ಷದಲ್ಲಿದ್ದರೂ ಪಕ್ಷಾತೀತವಾಗಿ ಸಮುದಾಯದ ಅಭಿವೃದ್ಧಿಗೆ ಸಮಯ ಮೀಸಲಿಡಬೇಕು ಎಂದು ಹೇಳಿದರು.

ಸುಮಾರು ಎರಡುವರೆ ದಶಕಗಳ ಹಿಂದೆ ಸೇವಾಲಾಲ್‌ ಮತ್ತು ಮರಿಯಮ್ಮ ದೇಗುಲ ಸಣ್ಣಗುಡಿಯಲ್ಲಿ ಪೂಜಿಸಲ್ಪಡುತ್ತಿದ್ದು, ಇಂದು ದೊಡ್ಡಯಾತ್ರ ಸ್ಥಳವಾಗಿದೆ. ಬಂಜಾರಾ ಸಮುದಾಯಕ್ಕೆ 9 ಸಾವಿರ ವರ್ಷದ ಇತಿಹಾಸವಿದೆ. ಸಮುದಾಯ ಶೈಕ್ಷಣಿಕವಾಗಿ ಬೆಳೆಯಬೇಕಿದೆ ಎಂದರು.

ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ ನಾಯ್ಕ ಮಾತನಾಡಿ, ಬಂಜಾರ ಸಮುದಾಯ ಉಡಿಗೆ ತೊಡಿಗೆ ಸೀಮಿತವಾಗದೆ, ಸಂಸ್ಕೃತಿ ಕಲೆ ವಿಚಾರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳೆಯುವಂತೆ ಮಾಡಬೇಕು ಎಂದರು.

Advertisement

ಮಾಜಿ ಸಚಿವ ಶಿವಮೂರ್ತಿನಾಯ್ಕ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ ಉಪಾಧ್ಯಕ್ಷ ಡಾ| ಎಲ್.ಈಶ್ವರನಾಯ್ಕ ಮಾತನಾಡಿದರು. ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮತಿ ಅಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟ್ರದ ಪೋಹರಾದೇವಿಘಡ ಶ್ರೀ ಬಾಬುಸಿಂಗ್‌ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ.ರಾಜೀವ್, ನಿರ್ದೇಶಕ ಮಾರುತಿನಾಯ್ಕ, ಬಿ.ಬಾಲರಾಜ, ರಾಮನಾಯ್ಕ, ಆರ್‌.ವಿನಾಯ್ಕ, ಚೂಡನಾಯ್ಕ, ಎಸ್‌.ಎನ್‌.ಗೋಪಾಲನಾಯ್ಕ, ಸವಿತಾಬಾಯಿ, ಶಿವರಾಮನಾಯ್ಕ, ಓಂಕಾರನಾಯ್ಕ, ಸುರೇಂದ್ರನಾಯ್ಕ, ಜಯದೇವನಾಯ್ಕ, ಜಲಜಾನಾಯ್ಕ, ಅನಸೂಯಾ, ಆರ್ಚಕ ಸೇವ್ಯಾನಾಯ್ಕ, ಓಂಕಾರನಾಯ್ಕ ಇದ್ದರು. ಕರ್ನಾಟಕ ಬೌದ್ಧ ಸಮಾಜದ ರಾಜ್ಯಾಧ್ಯಕ್ಷ ಪ್ರೊ| ಹ.ರಾ. ಮಹೇಶ ಉಪನ್ಯಾಸ ನೀಡಿದರು. ಮಹಾಮಠ ಸಮತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next