ಉಡುಪಿ : ನಗರದ ಬ್ರಹ್ಮ ಗಿರಿ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ವಿವಾದ ತಾರಕಕ್ಕೇರಿದ್ದು, ಇಂದು ಬೆಳಗ್ಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಬಿಜೆಪಿ ಕಾರ್ಯರ್ತರು ಫ್ಲೆಕ್ಸ್ ಗೆ ಮಾಲಾರ್ಪಣೆ ನೆರವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಅವರನ್ನು ವಿರೋಧಿಸುವರ ಮನೆ ಅಂಗಳದಲ್ಲಿ ಭಾವಚಿತ್ರವಿಟ್ಟು ಮಾಲಾರ್ಪಣೆ ಮಾಡುತ್ತೇವೆ.
ದೇಶದಲ್ಲಿ ಅಶಾಂತಿ ವಾತವರಣ ಸೃಷ್ಟಿಸುವುದು, ಕೋಮುಗಲಭೆಗೆ ಹುನ್ನಾರ ಕೊಡುವುದು, ಸಾರ್ವಜನಿಕ ಸೊತ್ತನ್ನು ನಾಶ ಮಾಡುವ ಹಿನ್ನಲೆ ಇರುವ ಪಿ.ಎಫ್.ಐ ಹಾಗು ಎಸ್.ಡಿ.ಪಿ.ಐ ಸಂಘಟನೆಗಳು 75 ನೇ ಸ್ವಾಂತ್ರೋತ್ಸವದ ಸಂದರ್ಭದಲ್ಲಿ ತಮ್ಮ ಚಾಳಿಯನ್ನು ಮುಂದುವರಿಸಿರುವುದು ಖಂಡನಾರ್ಹ ಎಂದರು.
ಪಿ.ಎಫ್.ಐ ಅವರು ಅನಾಗರಿಕರು. ಅನಾಗರಿಕರ ಬಗ್ಗೆ ನಾನು ಮಾತನಾಡುವುದಿಲ್ಲ. ಡೋಂಗಿ ದೇಶಭಕ್ತರನ್ನು ಕಾಂಗ್ರೆಸ್ ಇಟ್ಟುಕೊಂಡಿದೆ. ಕಾಂಗ್ರೆಸಿಗರು ಸ್ವಾತಂತ್ರ್ಯ ಸಂಗ್ರಾಮ ಮನೆ ಬಾಗಿಲಿನಿಂದ ಆರಂಭವಾಗಿದೆ ಎಂದು ಹೇಳುತ್ತಾರೆ. ಸಾರ್ವಕರ್ ಮತ್ತು ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದೇವೆ. ಮುಂದೆ ಸಾರ್ವಕರ್ ಅವರ ಪುತ್ಥಳಿ ನಿರ್ಮಿಸಿ ದಿಟ್ಟ ಉತ್ತರ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಹಾಗೂ ಸಂಘ ಪರಿವಾರದ ವಿವಿಧ ಮುಖಂಡರು ಹಾಜರಿದ್ದರು, ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.