Advertisement
ಈಗ ಕಡಬ ತಾಲೂಕಿಗೆ ಸೇರಿರುವ ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬ ಕೂಗು ಕಡಬ ತಾಲೂಕು ಆಗುವುದಕ್ಕೂ ಮೊದಲೇ ಈ ವಲಯದಿಂದ ಕೇಳಿ ಬಂದಿತ್ತು. ಸವಣೂರು ಎಂದರೆ ಈಗ ತಾಲೂಕು ಕಡಬ. ವಿಧಾನಸಭೆ ಸುಳ್ಯ, ಕಂದಾಯ ಹೋಬಳಿ ಕಡಬ, ಪೊಲೀಸ್ ಠಾಣೆ ಬೆಳ್ಳಾರೆ ಹೀಗೆ ಅದರದ್ದೇ ಆದ ವಿಶೇಷತೆ ಇದೆ; ಸಮಸ್ಯೆಗಳೂ ಇವೆ.
Related Articles
Advertisement
ಸಚಿವರಿಗೆ ಮನವಿ :
ಸವಣೂರನ್ನು ಹೋಬಳಿ ಕೇಂದ್ರ ಮಾಡಬೇಕೆಂಬ ನಿಟ್ಟಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಈ ಭಾಗದ ಜನರು ಪುತ್ತೂರು ಶಾಸಕ ಸಂಜೀವ ಮಠಂದೂರು, ಸುಳ್ಯ ಶಾಸಕ ಎಸ್.ಅಂಗಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಮನವಿಗೆ ಪೂರಕ ಉತ್ತರ ಬಾರದ ಕಾರಣ ಜನತೆಯ ಬೇಡಿಕೆ ಸದ್ಯಕ್ಕೆ ಗಗನ ಕುಸುಮವಾಗಿಯೇ ಉಳಿಯುವಂತಾಗಿದೆ.
ಈಗ ಕನಿಷ್ಠ ಸವಣೂರು ಹೋಬಳಿ ಕೇಂದ್ರವಾದರೆ ಬೆಳಂದೂರು, ಕುದ್ಮಾರು, ಕಾçಮಣ, ಪಾಲ್ತಾಡಿ, ಸವಣೂರು, ಪುಣcಪ್ಪಾಡಿ, ಕಾಣಿಯೂರು, ಚಾರ್ವಾಕ, ದೋಳ್ಪಾಡಿ ಹಾಗೂ ಸವಣೂರಿನ ಇನ್ನೊಂದು ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.
ನಿವೇಶನ ನೀಡಲು ನಿರ್ಣಯ :
ಪ್ರಸ್ತುತ ಈ ಭಾಗದ ಗ್ರಾಮದ ಜನರಿಗೆ ಕಂದಾಯ ಹೋಬಳಿ ಹಾಗೂ ತಾಲೂಕು ಕೇಂದ್ರ ಕಡಬ. ಇಲ್ಲಿಗೆ ಸಂಪರ್ಕ ಬಹಳ ತ್ರಾಸದಾಯಕ. ಒಂದೇ ಕೆಲಸಕ್ಕೆ ಹಲವು ಬಾರಿ ತೆರಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸವಣೂರಿನಲ್ಲಿ ಕಂದಾಯ ಹೋಬಳಿ ಕೇಂದ್ರ (ನಾಡ ಕಚೇರಿ) ತೆರೆಯುವುದು ಆವಶ್ಯಕ. ಸಂಬಂಧಿಸಿದವರು ಈ ಕುರಿತು ಗಮನಹರಿಸುವುದು ಅಗತ್ಯವಾಗಿದೆ ಎಂಬುದು ಜನರ ಆಗ್ರಹ. ಹೋಬಳಿ ಕೇಂದ್ರ ರಚನೆಗೆ ಅವಶ್ಯವಿರುವ ನಿವೇಶನವನ್ನು ನೀಡಲು ಸವಣೂರು ಗ್ರಾ.ಪಂ.ನ ಆಡಳಿತ ಮಂಡಳಿಯಲ್ಲಿ ಈ ಹಿಂದೆಯೇ ನಿರ್ಣಯಿಸಲಾಗಿತ್ತು.
ಕಡಬ ತಾಲೂಕಿನ ಸವಣೂರಿನಲ್ಲಿ ಹೋಬಳಿ ಕೇಂದ್ರ ಆಗಬೇಕು ಎಂಬ ಬೇಡಿಕೆ ಇರುವುದು ನಿಜ. ಸದ್ಯ ಹೊಸ ಹೋಬಳಿ ಕೇಂದ್ರಗಳ ರಚನೆ ಸರಕಾರದ ಮುಂದೆ ಇಲ್ಲ. –ಎಸ್. ಅಂಗಾರ, ಶಾಸಕರು, ಸುಳ್ಯ.