ಸಾವಳಗಿ: ಸಾವಳಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಡಿ. 22ರಂದು ನಡೆಯಲಿರುವ ಗ್ರಾಮ ಪಂಚಾಯತ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.
31 ಸದಸ್ಯ ಬಲದ ಸಾವಳಗಿ ಗ್ರಾಮ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಆದರೆ,ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.ಗ್ರಾಮಸ್ಥರು ಹಾಗೂ ತಾಲೂಕು ಹೋರಾಟಸಮಿತಿ ಮುಖಂಡರು ಚುನಾವಣೆಬಹಿಷ್ಕರಿಸುವ ನಿರ್ಧಾರಕ್ಕೆ ಮನ್ನಣೆ ನೀಡಿ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಸಾವಳಗಿ ಹೋಬಳಿ ಕೇಂದ್ರವೂ ಲಕ್ಷಕೂ ಅಧಿಕ ಜನಸಂಖ್ಯೆಯಿದೆ. 23 ಹಳ್ಳಿಗಳನ್ನು ಹೊಂದಿರುವ ದೊಡ್ಡ ಹೋಬಳಿ ಕೇಂದ್ರವಾಗಿದೆ. ರಾಜ್ಯ ಹಾಗೂ ದೇಶಕ್ಕೆ ಕೊಡುಗೆ ನೀಡಿರುವ ಸುಧಾಮೂರ್ತಿಹಾಗೂ ಬಿ.ಡಿ. ಜತ್ತಿಯವರಿಗೆ ಜನ್ಮ ನೀಡಿದ ಪುಣ್ಯಭೂಮಿ ಸಾವಳಗಿ ಗ್ರಾಮ.ಅಧಿಕಾರಿಗಳು ಗ್ರಾಮಸ್ಥರ ಹಾಗೂತಾಲೂಕು ಹೋರಾಟ ಸಮಿತಿ ಸದಸ್ಯರಮನವೊಲಿಕೆ ಕಾರ್ಯ ಶುಕ್ರವಾರದವರೆಗೆ ನಡೆದಿತ್ತು. ತಾಲೂಕು ಕೇಂದ್ರ ಘೋಷಣೆಯಾಗುವವರೆಗೆ ಚುನಾವಣೆ ಬಹಿಷ್ಕರಿಸಲಾಗಿದೆ ಎಂದು ಹೋರಾಟ ಸಮಿತಿಯ ಮುಖಂಡ ಅಪ್ಪುಗೌಡ ಪಾಟೀಲ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಆರಂಭ ದಿನದಿಂದ ತಾಲೂಕು ಹೋರಾಟ ಸಮಿತಿ ಹಾಗೂ ಗ್ರಾಮಸ್ಥರು ಗ್ರಾಪಂ ಕಾರ್ಯಾಲಯದ ಧರಣಿ ನಡೆಸಿದ್ದರು. ಧರಣಿ ಮುಂದುವರಿದಿದ್ದು, ಜಿಲ್ಲಾಡಳಿತ ಸಂಧಾನ ವಿಫಲವಾಗಿದೆ. ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಚುನಾವಣಾ ಬಹಿಷ್ಕಾರ ಹಾಕಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಶುಕ್ರವಾರವೂ ಸಹ ಮಂದುವರೆಯಿತು. ಧರಣಿಯಲ್ಲಿಪಾಲ್ಗೊಂಡಿದ್ದ ಮುಖಂಡ ರಾಜು ಮೇಲಿನಕೇರಿ, ಸುಮಾರು ವರ್ಷಗಳಿಂದ ರಸ್ತೆ ತಡೆ, ಗ್ರಾಮ ಸಂಪೂರ್ಣ ಬಂದ್, ಧರಣಿ ಸತ್ಯಾಗ್ರಹ, ಆಮರಣ ಉಪವಾಸ ಸತ್ಯಾಗ್ರಹ ಹಾಗೂ ಬೆಂಗಳೂರಿಗೆ ನಿಯೋಗ ಸೇರಿ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಸರ್ಕಾರ ಸಾವಳಗಿ ಗ್ರಾಮಸ್ಥರೊಂದಿಗೆ ಚೆಲ್ಲಾಟವಾಡುತ್ತಿದೆ. ನಮ್ಮ ತಾಳ್ಮೆಗೆ ಇತಿಮಿತಿ ಇದೆ ಎಂದು ಹೇಳಿದರು.
ನ್ಯಾಯುತವಾಗಿ ನಮ್ಮ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡು ಮುಂಬರುವ ತಾಪಂ, ಜಿಪಂ, ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನುಬಹಿಷ್ಕರಿಸುವುದಾಗಿ ಹೇಳಿದರು.
ಸಾಮೂಹಿಕ ರಾಜೀನಾಮೆ: ಸಾವಳಗಿ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ತಾಪಂ ಸದಸ್ಯ ಬಸವರಾಜ ಮಾಳಿ, ಪಿಕೆಪಿಎಸ್ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಸುಶೀಲಕುಮಾರ ಬೆಳಗಲಿ, ರಾಜು ಮೇಲಿನಕೇರಿ, ವಿಠuಲ ಉಮರಾಣಿ,ರಾಮಣ್ಣಾ ಬಂಡಿವಡ್ಡರ, ಜನಕರಾಜ ನಾಂದ್ರೇಕರ್, ಉಮೇಶ ಜಾಧವ,ರಾಜು ಕರಾಬೆ, ಮಹಾದೇವ ಮಾಳಿ ಉಪಸ್ಥಿತರಿದ್ದರು
ಸುಮಾರು ದಶಕಗಳಿಂದ ತಾಲೂಕು ಕೇಂದ್ರಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಹೋರಾಟದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ.ಇದಕ್ಕೆ ನಾವೂ ಸಹ ಸೂಕ್ತ ಪ್ರತಿಫಲ ನೀಡುತ್ತಿದ್ದೇವೆ.
-ಅಪ್ಪುಗೌಡ ಪಾಟೀಲ, ಹೋರಾಟ ಸಮಿತಿಯ ಮುಖಂಡ