Advertisement

ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಸಾವಳಗಿ ಬಂದ್‌ ಯಶಸ್ವಿ

09:44 AM Feb 13, 2019 | |

ಸಾವಳಗಿ: ಸಾವಳಗಿ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ಮಂಗಳವಾರ ಕರೆ ನೀಡಿದ್ದ ಸಾವಳಗಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ವ್ಯಾಪಾರಸ್ಥರು ಅಂಗಡಿ, ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿ ಬೆಂಬಲ ವ್ಯಕ್ತಪಡಿಸಿದ್ದರು. ಸಾವಳಗಿ ಹೋಬಳಿ ಕೇಂದ್ರವನ್ನು ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಸುಮಾರು 70 ವರ್ಷಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ. ಪ್ರತಿ ಬಾರಿ ಸರ್ಕಾರ ಸಾವಳಗಿಯನ್ನು ನಿರ್ಲಕ್ಷ್ಯ ಮಾಡುವುದರ ಜೊತೆಗೆ ಸಾವಳಗಿ ಜನತೆಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಸುಮಾರು 24 ಹಳ್ಳಿಗಳನ್ನು ಒಳಗೊಂಡು ಹಾಗೂ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಭೌಗೋಳಿಕ ವಿಸ್ತೀರ್ಣ, ಸರ್ಕಾರಿ ಕಚೇರಿಗಳು ಸೇರಿದಂತೆ ಮೂಲಭೂತ ಸೌಕರ್ಯಗಳಿದ್ದರೂ ಕಡೆಗಣಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸದ್ಯ ನಡೆಯುತ್ತಿರುವ ಅಧಿವೇಶನದಲ್ಲಿ ಸಾವಳಗಿ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಗ್ರಾಮದ ಚುನಾಯಿತ ಪ್ರತಿನಿಧಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿ, ಮುಂಬರುವ ಲೋಕಸಭೆ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಪ್ರಶಾಂತ ಚನ್ನಗೊಂಡ ಅವರಿಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ಭೂಪಾಲ ಬಾಗೇವಾಡಿ, ಬಾಪುಗೌಡ ಬುಲಗೌಡ, ಸುಭಾಸ ಪಾಟೋಳಿ, ಅಪ್ಪುಗೌಡ ಪಾಟೀಲ, ಶಿವಾನಂದ ಪಾಟೀಲ, ವಿಠ್ಠಲ ಉಮರಾಣಿ, ಬಸವರಾಜ ಮಾಳಿ, ರಾಜು ಮೇಲಿನಕೇರಿ, ಸುಶೀಲಕುಮಾರ ಬೆಳಗಲಿ, ಬಸವರಾಜ ಪರಮಗೊಂಡ, ಪಾರ್ಶ್ವನಾಥ ಉಪಾದ್ಯ, ರಾಜುಗೌಡ ಪಾಟೀಲ, ಸುಜೀತಗೌಡ ಪಾಟೀಲ, ಸಿದ್ದು ಬಂಡಿವಡ್ಡರ, ಅಮಿತ್‌ ಸೂರಗೊಂಡ ಸೇರಿದಂತೆ ಮತ್ತಿತರರು ಇದ್ದರು.

ಕಳೆದ ಬಾರಿ ಸಿದ್ದರಾಮಯ್ಯನವರು ಮುಂದಿನ ಬಜೆಟ್‌ನಲ್ಲಿ ಸಾವಳಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವ ಭರವಸೆ ನೀಡಿದ್ದರು. ಆದರೆ ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಾವಳಗಿ ಕಡೆಗಣಿಸಲಾಗಿದೆ.
• ವಿಠ್ಠಲ ಉಮರಾಣಿ, ಹೋರಾಟ ಸಮಿತಿ ಮುಖಂಡ.

Advertisement

ಫೆ. 14ರಂದು ಗ್ರಾಮದ ನಿಯೋಗ ಸಿಎಂ ಭೇಟಿ ಮಾಡಲಿದೆ. ಮುಖ್ಯಮಂತ್ರಿಗಳು ಸ್ಪಂದಿಸದಿದ್ದರೆ ಚಿಕ್ಕಲಕಿ ಕ್ರಾಸ್‌ ಮುಖ್ಯ ರಸ್ತೆ ಬಂದ್‌ ಮಾಡಿ ಅನಿರ್ದಿಷ್ಟಾವದಿ ಧರಣಿ ನಡೆಸಲಾಗುವುದು.
• ಅಪ್ಪ್ಪುಗೌಡ ಪಾಟೀಲ, ಹೋರಾಟ ಸಮಿತಿ ಮುಖಂಡ.

Advertisement

Udayavani is now on Telegram. Click here to join our channel and stay updated with the latest news.

Next