Advertisement
ದಸರಾ ವೇಳೆ ಯಲ್ಲಮ್ಮ ದೇವಸ್ಥಾನಕ್ಕೆ ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿಂದ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಅ. 31ರ ವರೆಗೆ ಸಾರ್ವಜನಿಕ ದರ್ಶನದ ನಿರ್ಬಂಧ ಮುಂದುವರಿಸಿ ಆದೇಶ ಹೊರಡಿಸಿದ್ದಾರೆ.
Related Articles
ಲಾಕ್‌ಡೌನ್ ಸಡಿಲಿಕೆ ಬಳಿಕ ಕ್ಷೇತ್ರದತ್ತ ಭಕ್ತರ ಆಗಮನ ಪ್ರಾರಂಭವಾಗಿದ್ದು, ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧ ಹಿನ್ನೆಲೆಯಲ್ಲಿ ಮಹಾದ್ವಾರದ ಮುಂದಿನ ರಸ್ತೆ ಮೇಲೆ ಹಣ್ಣು-ಕಾಯಿ ಮಾಡುತ್ತಿದ್ದರು. ಆದರೆ ಇದೀಗ ದೇವಸ್ಥಾನದ ಸುತ್ತಲಿನ 3-4 ಕಿಮೀ ಆಚೆಗೆ ಎಲ್ಲ ರಸ್ತೆಗಳನ್ನು ಬ್ಯಾರಿಕೇಡ್‌ಗಳಿಂದ ಬಂದ್ ಮಾಡಿದ್ದರೂ ಬ್ಯಾರಿಕೇಡ್ ಮುಂದೆ, ರಸ್ತೆ ಬದಿ, ಬಯಲು ಪ್ರದೇಶಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುವ ಪದ್ಧತಿ ಆಚರಣೆ ಬಂದಿದೆ.
Advertisement
ಸರ್ಕಾರದ ಕಟ್ಟುಪಾಡು ಕೇಳುವವರಿಲ್ಲಸುತ್ತಲಿನ ಗ್ರಾಮಗಳ ಬೀದಿ ವ್ಯಾಪಾರಸ್ಥರು ಭಕ್ತರ ಆಗಮನ ಕಂಡು ಸಾಗಿಬರುತ್ತಿದ್ದಾರೆ. ಜೋಗುತಿಯರು ಭಕ್ತರಿಂದ ಪಡ್ಡಲಗಿ ತುಂಬಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಕೊರೊನಾ ಬಂದರೂ ಸರಿಯೇ
ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ ಎಂಬ ಮಾತುಗಳು ವ್ಯಾಪಾರಸ್ಥರದ್ದಾಗಿದೆ. ಸರ್ಕಾರದ ಕಟ್ಟುಪಾಡುಗಳನ್ನು ಜನ ಗಾಳಿಗೆ ತೂರಿದ್ದು, ಪೊಲೀಸ್ ಸಿಬ್ಬಂದಿ ಏನೇ ಕ್ರಮಗಳನ್ನು ಜರುಗಿಸಿದರೂ ತಲೆಕೆಡಿಸಿಕೊಳ್ಳದೆ ತಮ್ಮದೇ ಪ್ರಪಂಚದಲ್ಲಿ ತಲ್ಲೀನರಾಗಿದ್ದಾರೆ. ದೇವಸ್ಥಾನದ ಸುತ್ತಮುತ್ತಲಿನ ಗ್ರಾಪಂಗಳಿಂದ ಧ್ವನಿವರ್ಧಕಗಳ ಮೂಲಕ ಎಷ್ಟೇ ಜಾಗೃತಿ ಅಭಿಯಾನ ಕೈಗೊಂಡರೂ ಭಕ್ತರಾಗಲಿ, ವ್ಯಾಪಾರಸ್ಥರಾಗಲಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ಯಾವ ಮುನ್ನೆಚ್ಚರಿಕಾ
ಕ್ರಮಗಳನ್ನೂ ಪಾಲಿಸುತ್ತಿಲ್ಲ.