Advertisement

ಪಿಡಿಒ-ಅಧ್ಯಕ್ಷ-ಸದಸ್ಯರೊಂದಿಗೆ ಮಾಮನಿ ವಿಡಿಯೋ ಸಂವಾದ

05:30 PM Apr 12, 2020 | Naveen |

ಸವದತ್ತಿ: ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ ಇಲ್ಲಿನ ತಾಪಂ ಸಭಾಭವನದಲ್ಲಿ ಶನಿವಾರ ಗ್ರಾಪಂ ಪಿಡಿಒ, ಅಧ್ಯಕ್ಷ ಹಾಗೂ ಸದಸ್ಯರೊಂದಿಗೆ ವಿಡಿಯೋ ಸಂವಾದ ನಡೆಸಿದರು.

Advertisement

ಈ ವೇಳೆ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಆಲಿಸಿದ ಅವರು, ಕೋವಿಡ್ ಸೋಂಕು ತಡೆಗೆ ಆರೋಗ್ಯ, ಪೊಲೀಸ್‌ ಮತ್ತು ಇತರೆ ಇಲಾಖೆಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಎಲ್ಲ ಪಂಚಾಯತಗಳ ಆಹಾರ, ಪಡಿತರ, ನೀರು ಮತ್ತು ಇನ್ನಿತರೆ ಸೌಲಭ್ಯಗಳ ಕುರಿತು ಚರ್ಚಿಸಿತು. ಕೆಲವೆಡೆ ಸೋಂಕಿತ ವ್ಯಕ್ತಿಗಳು ಕ್ವಾರಂಟೇನ್‌ ಹಾಗೂ ಮನೆಗಳಲ್ಲಿರದೇ ಗ್ರಾಮಗಳಲ್ಲಿ ಸುತ್ತಾಡಿಕೊಂಡಿದ್ದಾರೆ. ಯಾರ ಮಾತೂ ಕೇಳುತ್ತಿಲ್ಲವೆಂದು ಶಿರಸಂಗಿ ಮತ್ತು ಹೂಲಿ ಗ್ರಾಮಗಳ ಪಿಡಿಒಗಳು ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಪೊಲೀಸ್‌ ರಿಂದ ಅವರನ್ನು ಕರೆ ತಂದು ನೇರವಾಗಿ ಮೊರಾರ್ಜಿ ಶಾಲೆಯಲ್ಲಿ ಇರಿಸಿ. ಹೆಚ್ಚಿನ ಅನಾಹುತ ತಪ್ಪಿಸಿ ಎಂದರು.

ಹೀರೆಕುಂಬಿ ಪಿಡಿಒ ಆನೂರಗೆ ಗ್ರಾಮದಲ್ಲಿದ್ದುಕೊಂಡೆ ನಿರ್ವಹಿಸಬೇಕು. ನಿಮ್ಮಿಂದ ಸ್ವತ್ಛತಾ ಕಾರ್ಯ ನಡೆಯದಿದ್ದಲ್ಲಿ ತಾಲೂಕಾಡಳಿತವೇ ಬಂದು ಸ್ವತ್ಛಗೊಳಿಸುತ್ತದೆ ಎಂದರು. ತಹಶೀಲ್ದಾರ್‌ ಪ್ರಶಾಂತ ಪಾಟೀಲ ಮಾತನಾಡಿ, ತಾಲೂಕಿನಾದ್ಯಂತ ಪಡಿತರ ಸರಿಯಾಗಿ ವಿತರಣೆಯಾಗುತ್ತಿಲ್ಲ. ಜನಸಾಮಾನ್ಯರಿಗೆ ತೊಂದರೆಯಾಗುವುದು ಕಂಡು ಬರುತ್ತಿದೆ. ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಪಡಿತರ ವಿತರಿಸಬೇಕಿದೆ. ಸಮಯಕ್ಕೆ ಸರಿಯಾಗಿ ಕೊಡದೇ ಇದ್ದಲ್ಲಿ ಆ ಕೇಂದ್ರಗಳ ಪರವಾನಗಿ ರದ್ದುಪಡಿಸಲಾಗುವುದು. ಇಲ್ಲಿಯವರೆಗೆ ಕೇವಲ 65 ಪಡಿತರ ಹಂಚಿಕೆಯಾಗಿದೆ. ಉಳಿದದ್ದು ಸರಳವಾಗಿ ಹಂಚಿಕೆಯಾಗಬೇಕು. ಇಲ್ಲದಿದ್ದಲ್ಲಿ ಕ್ರಮ ಅನಿವಾರ್ಯ ಎಂದರು.

ಸಿಪಿಐ ಮಂಜುನಾಥ ನಡುವಿನಮನಿ ಮುರಗೋಡ, ಸವದತ್ತಿ, ಯರಗಟ್ಟಿ ಭಾಗಗಳ ಪೊಲೀಸ್‌ ಅ ಧಿಕಾರಿಗಳ ದೂರವಾಣಿ ಸಂಖ್ಯೆ ನೀಡಿದರಲ್ಲದೇ ಅವಶ್ಯವಿದ್ದಲ್ಲಿ ನೇರವಾಗಿ ಸಂಪರ್ಕಿಸಿ, ಇಲಾಖೆ ನಿಮ್ಮೊಂದಿಗಿದೆ ಎಂದರು. ಕೋವಿಡ್‌ ಟಾಸ್ಕ್ಪೋರ್ಸ್‌ ಅಧಿಕಾರಿಗಳು ಹಾಗೂ ತಾಪಂ ಸಿಬ್ಬಂದಿ ವರ್ಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next