Advertisement

ಪ್ರವಾಹ ಭೀತಿ ಸೃಷ್ಟಿಸಿದ ಮಲಪ್ರಭೆ ರೌದ್ರನರ್ತನ

11:54 AM Aug 08, 2019 | Team Udayavani |

ಸವದತ್ತಿ: ಕ್ಷಣ-ಕ್ಷಣಕ್ಕೂ ಹೆಚ್ಚುತ್ತಿರುವ ಮಲಪ್ರಭೆಯ ಒಳಹರಿವು ಆತಂಕ ಸೃಷ್ಟಿಸಿದ್ದು, ಹಗಲಿರುಳೆನ್ನದೇ ಅಧಿಕಾರಿಗಳು ಹೊರ ಹರಿವಿಗೆ ದಾರಿ ಮಾಡಿಕೊಟ್ಟು ಅಣೆಕಟ್ಟಿನ ಭದ್ರತೆ ಜೊತೆಗೆ ಜನರ ಸುರಕ್ಷತೆ ಬಗ್ಗೆ ಲಕ್ಷ್ಯ ವಹಿಸಬೇಕಾಗಿದೆ.

Advertisement

ಸದ್ಯ 80 ಸಾವಿರ ಕ್ಯೂಸೆಕ್‌ ಅಧಿಕ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, 60 ಸಾವಿರ ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದ ನೀರು ಬರಬಹುದೆಂದು ಅಂದಾಜಿಸಲಾಗಿದೆ. ಸತತ ಬರಗಾಲ ಅನುಭವಿಸಿದ ಈ ಭಾಗದ ಜನತೆ ಪ್ರವಾಹ ಭೀತಿಯಿಂದ ಮಳೆ ಸಾಕಪ್ಪ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುವಂತೆ ಆಗಿದೆ. ಮುಂಜಾಗ್ರತಾ ಕ್ರಮ ವಹಿಸಿದ್ದರಿಂದ ಯಾವುದೇ ಅನಾಹುತವಿಲ್ಲದೇ ಜನತೆ ಸುರಕ್ಷತೆಯಲ್ಲಿದ್ದಾರೆ.

ಶಾಲಾ-ಕಾಳೇಜುಗಳಿಗೆ ರಜೆ ಘೋಷಿಸಲಾಗಿದೆ. ಬುಧವಾರವೂ ಮಳೆ ಸತತ ಸುರಿದಿದ್ದರಿಂದ ಸವದತ್ತಿ ಸಂತೆ, ವ್ಯಾಪಾರ ವಹಿವಾಟು ನಡೆಯಲಿಲ್ಲ. ಮಹಾಮಳೆಗೆ ಮನೆ ಕಂಪೌಂಡ್‌ಗಳು ನೆಲಸಮಗೊಂಡು, ಅಲ್ಪ ಸ್ವಲ್ಪದರಲ್ಲೇ ಕೆಲವರು ಅಪಾಯದಿಂದ ಪಾರಾದರೆ, ಇನ್ನು ಕೆಲವರ ಮೇಲೆ ಗೋಡೆಗಳು ಬಿದ್ದಿವೆ. ಅದೃಷ್ಟವಶಾತ ಪ್ರಾಣಹಾನಿ ಸಂಭವಿಸಿಲ್ಲ. ನಿಧಾನಗತಿಯಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಭಾಗಶಃ ಮನೆಗಳು ಸೋರಿಕೆಯಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next