Advertisement

ಭಾರತ ಮಹಿಳಾ ತಂಡಕ್ಕೆ ಆಯ್ಕೆ : ಕನ್ನಡತಿ ತಾನ್ಯ ಆಶಯ

09:06 AM Apr 28, 2019 | keerthan |

ಭಾರತದ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಗಳಿಸುವುದೇ ನನ್ನ ಕ್ರಿಕೆಟ್‌ ಬದುಕಿನ ಹಂಬಲ ಎನ್ನುತ್ತಾರೆ ಸೌರಾಷ್ಟ್ರದ 19ಕ್ಕಿಂತ ಕಿರಿಯರ ಕ್ರಿಕೆಟ್‌ ತಂಡದ ನಾಯಕಿಯಾಗಿದ್ದು, ಈಗ ರಾಜ್ಯದ ಮುಖ್ಯ ತಂಡಕ್ಕೆ ಆಡುತ್ತಿರುವ ತಾನ್ಯ ಎಂ. ರಾವ್‌ ಅವರು. ವಿಶೇಷವೆಂದರೆ ಈಕೆಯ ಕೌಟುಂಬಿಕ ಮೂಲ ಪಡುಬಿದ್ರೆಯ ಸಮೀಪದ ನಂದಿಕೂರು.

Advertisement

19ಕ್ಕಿಂತ ಕಿರಿಯರ ಸೌರಾಷ್ಟ್ರ ತಂಡದ ಆಟಗಾರ್ತಿಯಾಗಿ ಬಳಿಕ ನಾಯಕಿ ಯಾಗಿ ಮಹತ್ವದ ಆಲ್‌ರೌಂಡರ್‌ ಕೊಡುಗೆ ತಾನ್ಯ ನೀಡುತ್ತಾ ಬಂದಿದ್ದಾರೆ. ಸೌರಾಷ್ಟ್ರವನ್ನು ಪ್ರತಿನಿಧಿಸಿ ಜಮ್ಮು ಕಾಶ್ಮೀರ ತಂಡದ ಎದುರು ಗೋವಾದಲ್ಲಿ ಶತಕ ಬಾರಿಸಿ ಈ ಸಾಧನೆ ಮಾಡಿದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ತಂಡದ 185 ರನ್ನುಗಳಲ್ಲಿ ಅವರ ಕೊಡುಗೆ 105 ಮತ್ತು 50 ಓವರ್‌ಗಳ ಈ ಪಂದ್ಯವನ್ನು ಸೌರಾಷ್ಟ್ರ ಭರ್ಜರಿಯಾಗಿ ಜಯಿಸಿತು.

ತಂದೆ ಮಂಜುನಾಥ ರಾವ್‌, ತಾಯಿ ರಾಜಶ್ರೀ ರಾವ್‌ ಅವರ ವಿಶೇಷ ಪ್ರೋತ್ಸಾಹ ತನ್ನ ಪಾಲಿಗೆ ವರದಾನ ಎಂದವರು ವರ್ಣಿಸಿದರು. ಉದ್ಯೋಗ ನಿಮಿತ್ತ ಅವರ ಕುಟುಂಬ ಸೌರಾಷ್ಟ್ರದಲ್ಲಿ ನೆಲೆಸಿದೆ. ಕುಟುಂಬದ, ಶಿಕ್ಷಣ ಸಂಸ್ಥೆಗಳ, ಸೌರಾಷ್ಟ್ರ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಪ್ರೋತ್ಸಾಹವೇ ನನ್ನ ಯಶಸ್ಸಿಗೆ ಕಾರಣ ಎಂದು ಅವರು ಪಡುಬಿದ್ರೆಯ ಸಮೀಪದ ದೇವಸ್ಥಾನವೊಂದರಲ್ಲಿ ಕುಟುಂಬದ ಶುಭಕಾರ್ಯಕ್ಕೆ ಶುಕ್ರವಾರ ಬಂದಿದ್ದಾಗ ಹೇಳಿದರು. ಇಲ್ಲಿ ಕುಟುಂಬಿಕರನ್ನೆಲ್ಲ ಭೇಟಿಯಾಗಿರುವುದು ತನ್ನ ಪಾಲಿಗೆ ಸಂತಸಕರ ಅನುಭವ ಎಂದು ಇನ್ನು 20ರ ಹರೆಯಕ್ಕೆ ಕಾಲಿಡುವ ರಾಜಕೋಟ್‌ನಲ್ಲಿ ನೆಲೆಸಿರುವ ತಾನ್ಯ ಹೇಳಿದರು.

ಮುಂಬಯಿಯಲ್ಲಿ ಜನಿಸಿ ಬಳಿಕ ಸೌರಾಷ್ಟ್ರದ ಶಿಕ್ಷಣ ಸಂಸ್ಥೆಗಳಲ್ಲಿ ಓದಿರುವ ಅವರು ಈಗ ಎಂಜಿನಿಯರಿಂಗ್‌ ವಿದ್ಯಾರ್ಥಿನಿ. ಆರಂಭಿಕ ವರ್ಷಗಳಲ್ಲಿ ಭರತನಾಟ್ಯವನ್ನು 6 ವರ್ಷಗಳ ಕಾಲ ಅಭ್ಯಾಸ ಮಾಡಿದ ಅವರು ಕ್ರಿಕೆಟ್‌ ಆಯ್ದುಕೊಂಡದ್ದು ಅನಿರೀಕ್ಷಿತ. ಶಾಲಾ ಕ್ರಿಕೆಟ್‌ ತಂಡಕ್ಕೆ ಆಸಕ್ತಿಯಿರುವವರು ಸೇರಿಕೊಳ್ಳಬಹುದು ಎಂದು ಶಿಕ್ಷಕರು ಹೇಳಿದ ಒಂದೇ ಅವಕಾಶವನ್ನು ತಾನ್ಯ ಬಳಸಿಕೊಂಡರು.

ಬಲಗೈ ಆಟಗಾರ್ತಿಯಾಗಿ ಮತ್ತು ಬಲಗೈ ಮಧ್ಯಮ ವೇಗದ ಬೌಲರ್‌ ಆಗಿ ಗಮನ ಸೆಳೆದರು. ವಿವಿಧ ವಯೋಮಾ ನಗಳ ತಂಡದಲ್ಲಿ ಅವಕಾಶಗಳನ್ನು ಪಡೆಯುತ್ತಾ ಯಶಸ್ಸು ಸಾಧಿಸಿದರು. ಸೀನಿಯರ್‌ ಮಹಿಳಾ ತಂಡದಲ್ಲಿ ಪಂದ್ಯಗಳನ್ನು ಆಡುತ್ತಿದ್ದು ಬ್ಯಾಟಿಂಗಗೂ ಹೆಚ್ಚು ಗಮನ ನೀಡುತ್ತಿದ್ದಾರೆ.

ಮನೋಹರ ಪ್ರಸಾದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next