Advertisement

ಸೌರಾಷ್ಟ್ರ ಪ್ರೀಮಿಯರ್‌ ಲೀಗ್‌ ಆಡಲಿರುವ ಪೂಜಾರ

02:10 AM May 09, 2019 | Sriram |

ರಾಜ್‌ಕೋಟ್: ಭಾರತ ಟೆಸ್ಟ್‌ ಕ್ರಿಕೆಟಿಗ ಚೇತೇಶ್ವರ ಪೂಜಾರ ಮೇ14ರಿಂದ ಆರಂಭವಾಗಲಿರುವ ಮೊದಲ ಆವೃತ್ತಿ ಸೌರಾಷ್ಟ್ರ ಪ್ರೀಮಿಯರ್‌ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

ಸ್ವತಃ ಈ ವಿಷಯವನ್ನು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಬುಧವಾರ ಪ್ರಕಟಪಡಿಸಿದೆ. ಮೊದಲ ಆವೃತ್ತಿಯಲ್ಲಿ 5 ತಂಡಗಳು ಪಾಲ್ಗೊಳ್ಳುತ್ತಿವೆ. ಹೊಸ ಕೂಟ ಹೊಸ ಉತ್ಸಾಹ ತಂದಿದ್ದು ಎಲ್ಲ ಆಟಗಾರರು ಸಿಡಿಯಲು ರೆಡಿಯಾಗಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಪೂಜಾರ ಇತ್ತೀಚಿಗೆ ಕೌಂಟಿ ಕ್ರಿಕೆಟ್ ಕೂಟದಲ್ಲಿ ಆಡಿದ್ದಾರೆ. ಪೂಜಾರ ಒಟ್ಟು 68 ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ ಆಡಿ 5,426 ರನ್‌ ಸಿಡಿಸಿದ್ದಾರೆ. ಅಜೇಯ 206 ರನ್‌ ವೈಯಕ್ತಿಕ ಗರಿಷ್ಠ ಎನ್ನುವುದು ವಿಶೇಷ. ಐಪಿಎಲ್ ಮಾದರಿಯ ಟಿ20 ಕ್ರಿಕೆಟ್ ಅನ್ನು ರಾಜ್ಯವಾರು ಅಳವಡಿಸಿಕೊಂಡಿರುವುದರಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next