Advertisement

ಪುಣೆ  ಸೌರಭ ದಾಸ ಸಾಹಿತ್ಯ ವಿದ್ಯಾಲಯದಿಂದ ದಾಸಸಾಹಿತ್ಯ ಪರೀಕ್ಷೆ

03:25 PM Jan 27, 2019 | |

ಪುಣೆ: ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರ ಕೃಪಾಶೀರ್ವಾದದಿಂದ ಸೌರಭ ದಾಸ ಸಾಹಿತ್ಯ ವಿದ್ಯಾಲಯ ಪುಣೆ ಪಿಂಪ್ರಿ-ಚಿಂಚಾÌಡ್‌ ಕೆಂದ್ರವು ಜ. 13ರಂದು ದಾಸ ಹಾಗೂ ದಾಸಶ್ರೀ ವರ್ಗದ ಪರಿಕ್ಷೆ ನಡೆಸಲಾಯಿತು.

Advertisement

ಶ್ರೀ ವರದೇಂದ್ರ ಮಠ ಪುಣೆ ಹಾಗೂ ರಮೇಶ ಕಾತರಕಿ ಅವರ ನಿವಾಸ ಚಿಂಚಾÌಡ್‌  ಈ ಎರಡು ಕೇಂದ್ರಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಜನ ಪರಿಕ್ಷೆ ಬರೆದರು. ಪಂಡಿತ್‌ ರುಚಿರಾಚಾರ ಬುರ್ಲಿ, ವರದೇಂದ್ರ ಮಠದ ವ್ಯವಸ್ಥಾಪಕರಾದ ಪಂಡಿತ್‌ ವೇಣುಗೋಪಾಲ್‌ ಆಚಾರ್‌ ಹಾಗೂ ಹಿರಿಯ ಜ್ಞಾನಿಗಳಾದ ಸಂಗೂರಾಮ ಅವರು ಪ್ರಶ್ನೆ ಪತ್ರಿಕೆಯನ್ನು ಉದ್ಘಾಟಿಸಿದರು.

ಪುಣೆ ಕೇಂದ್ರದ ವ್ಯವಸ್ಥಾಪಕರಾದ ಗೋಪಾಲ ಕಟಗೇರಿ ಅವರು ಮಾತನಾಡಿ, ದಾಸ ಸಾಹಿತ್ಯವು ಜೀವನಾನುಭವದ  ಸಾಹಿತ್ಯವಾಗಿದೆ. ದಾಸ ಸಾಹಿತ್ಯದಿಂದ ಭಕ್ತಿ ಮಾರ್ಗದಿಂದ  ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬಹುದಾಗಿದೆ. ನಾವೆಲ್ಲರೂ ಗುರುಗಳ ದಾಸರಾದರೆ ಮಾತ್ರ ಭಗವಂತನು ಒಲಿಯುತ್ತಾನೆ ಎಂದರು. ವಿದ್ಯಾಲಯದ ಕಾರ್ಯಕರ್ತರಾದ ವೀಣಾ ಕಾವೇರಿ, ವಿಜಯ ಖಾಸನೀಸ್‌, ರಾಮಚಂದ್ರ ಸವದತ್ತಿ. ಯಜುರ್ವೇದಿ, ಪೂಜಾರ  ಹಾಗೂ ರಮಾ ಕಾತರಕಿ ಎಲ್ಲರೂ ಯಶಸ್ವಿಯಾಗಿ ಪರಿಕ್ಷೆ ನಡೆಯಲು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next