Advertisement
ಕೆಂಪು ಸಮುದ್ರದ ತಟದಲ್ಲಿ ನಿರ್ಮಾಣವಾಗಲಿರುವ ನಗರದ ಮಾಹಿತಿಯನ್ನು ಸೌದಿ ಭಾವೀ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಸೋಮವಾರ ನೀಡಿದ್ದಾರೆ. ಅವರ ಕನಸಿನ ಯೋಜನೆ ಇದಾಗಿದ್ದು, ಅದು ಹೇಗೆ ಜಾರಿಯಾಗಬೇಕು ಎಂಬ ಬಗ್ಗೆ ಅವರೇ ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅಂದ ಹಾಗೆ ಈ ಪ್ರಾಜೆಕ್ಟ್ಗೆ “ನಿಯಾಮ್’ (NಉOM) ಎಂಬ ಹೆಸರು ಇರಿಸಲಾಗಿದೆ. ಸೌದಿಯು ತೈಲ ಕ್ಷೇತ್ರ ಹೊರತು ಪಡಿಸಿದ ಉದ್ದಿಮೆಗಳತ್ತ ಹೊರಳಿಕೊಳ್ಳುತ್ತಿರುವುದಕ್ಕೆ ಪೂರಕ ವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಯೋಜನೆ ಬಗ್ಗೆ ಮಾತನಾಡಿದ ಸಲ್ಮಾನ್, “ಸಾಂಪ್ರಾದಾಯಿಕ ನಗರ ಎಂಬ ಹಣೆಪಟ್ಟಿಯಿಂದ ಭಿನ್ನವಾಗಿ ನಾವು ಯೋಚಿಸಬೇಕಾಗಿದೆ. ಹೊಸ ನಗರದಲ್ಲಿ 10 ಲಕ್ಷ ಮಂದಿ ವಾಸಿಸಲಿದ್ದಾರೆ. ಅಲ್ಲಿ ಕಾರುಗಳು, ರಸ್ತೆಗಳು, ಇಂಗಾಲ ಹೊರಸೂಸುವಿಕೆಗೆ ಅವಕಾಶವೇ ಇಲ್ಲ. ನಗರ ಒಟ್ಟು 170 ಕಿ.ಮೀ. ವ್ಯಾಪ್ತಿಯಲ್ಲಿ ಇರಲಿದೆ. ಅದರಲ್ಲಿ ಶೇ.95ರಷ್ಟು ವ್ಯವಸ್ಥೆಗಳು ಪರಿಸರಕ್ಕೆ ಪೂರಕವಾಗಿರಲಿವೆ’ ಎಂದು ಹೇಳಿದ್ದಾರೆ. 2050ರ ಒಳಗಾಗಿ ಅಲ್ಲಿಗೆ ತೆರಳಬೇಕು. ಅದರ ನಿರ್ಮಾಣ ಕಾರ್ಯ ಪ್ರಸಕ್ತ ವರ್ಷದ ಮೊದಲ ತ್ತೈಮಾಸಿಕದಲ್ಲೇ ಶುರುವಾಗಲಿದೆ ಎಂದಿದ್ದಾರೆ.
Related Articles
Advertisement
200 ಶತಕೋಟಿ ಡಾಲರ್- ಮೂಲ ಸೌಕರ್ಯಕ್ಕೆ ತಗಲುವ ವೆಚ್ಚ
3,80,000 -ಯೋಜನೆ ಪೂರ್ಣಗೊಳ್ಳುವವೇಳೆ ಸೃಷ್ಟಿಯಾಗುವ ಉದ್ಯೋಗ
5.86 ಶತಕೋಟಿ ಡಾಲರ್- ಏರಿಕೆಯಾಗಲಿರುವ ಜಿಡಿಪಿ
2022- ಮೊದಲ ಹಂತದ ಕಾಮಗಾರಿ ಪೂರ್ಣವಾಗುವ ನಿರೀಕ್ಷೆ