Advertisement

ಇನ್ ಸ್ಟಾಗ್ರಾಂನಲ್ಲಿ ಬ್ಯೂಟಿ ಕ್ಲಿನಿಕ್ ಕುರಿತು ನಿಂದನೆ ಪೋಸ್ಟ್ : ಮಹಿಳೆಗೆ ದಂಡ!

10:06 AM Dec 25, 2019 | Team Udayavani |

ದುಬಾಯಿ: ಇಲ್ಲಿನ ಜನಪ್ರಿಯ ಸೌಂದರ್ಯವರ್ಧಕ ಚಿಕಿತ್ಸಾಲಯ ಒಂದರ ಕುರಿತಾಗಿ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮಾನಹಾನಿಕರ ಪೋಸ್ಟನ್ನು ಹಾಕಿದ್ದ ಯುವತಿಗೆ ಇಲ್ಲಿನ ನ್ಯಾಯಾಲಯವು 5000 ಧಿರ್ಹಾಮ್ ದಂಡ ವಿಧಿಸಿದೆ. 20 ವರ್ಷ ಪ್ರಾಯದ ಯುವತಿ ಇಲ್ಲಿನ ಬ್ಯೂಟಿ ಕ್ಲಿನಿಕ್ ಗೆಂದು ಹೋಗಿ ತನ್ನ ಮುಖದ ಸೌಂದರ್ಯವರ್ಧನೆ ಮಾಡಿಕೊಂಡಿದ್ದರು. ಆದರೆ ಇದರಿಂದ ಆ ಮಹಿಳೆಗೆ ತೃಪ್ತಿಯಾಗಿರಲಿಲ್ಲ.

Advertisement

ಆದರೆ ಅಷ್ಟಕ್ಕೇ ಸುಮ್ಮನಾಗದ ಆ ಅರಬ್ ಮಹಿಳೆ ಕ್ಲಿನಿಕ್ ಕುರಿತಾಗಿ ಹಾಗೂ ವೈದ್ಯರ ಕುರಿತಾಗಿ ತನ್ನ ಸಾಮಾಜಿಕ ಜಾಲತಾಣ ಅಕೌಂಟ್ ನಲ್ಲಿ ಮಾನಹಾನಿಕರ ಪೋಸ್ಟ್ ಅನ್ನು ಹಾಕಿದ್ದರು ಮಾತ್ರವಲ್ಲದೇ ಈ ಮೂಲಕ ಆ ಬ್ಯೂಟಿ ಕ್ಲಿನಿಕ್ ನ ಹೆಸರು ಕೆಡಿಸುವ ಪ್ರಯತ್ನವನ್ನೂ ಸಹ ಮಾಡಿದ್ದರು ಎಂದು ಪಬ್ಲಿಕ್ ಪ್ರಾಸಿಕ್ಯೂಸರ್ ನ್ಯಾಯಲಯದಲ್ಲಿ ವಾದಿಸಿದ್ದರು. ಈ ರೀತಿಯ ವರ್ತನೆಗಳು ಸೈಬರ್ – ಅಪರಾಧ ಕಾನೂನಿನಡಿಯಲ್ಲಿ ಶಿಕ್ಷಾರ್ಹವಾಗಿದೆ.

ಆರೋಪಿ ಮಹಿಳೆಯನ್ನು ನ್ಯಾಯಾಲಯಕ್ಕೆ ಕರೆಯಿಸಿಕೊಳ್ಳುವ ಮುನ್ನ ನ್ಯಾಯಾಲಯವು ಆಕೆಯ ಈ ಪೋಸ್ಟ್ ಗಳನ್ನು ಪರಿಶೀಲಿಸಿತ್ತು. ಮಾತ್ರವಲ್ಲದೇ ಈ ಮಹಿಳೆಯು ಹೊಸ ವಿನ್ಯಾಸದ ಬಟ್ಟೆಗಳನ್ನು ಧರಿಸಿಕೊಳ್ಳುವುದರಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು ಮತ್ತು ಇದೆಲ್ಲದಕ್ಕೂ ಆಕೆಯ ತಾಯಿಯ ಬೆಂಬಲವೂ ಇತ್ತು ಎಂಬ ವಿಚಾರವನ್ನು ಪ್ರಾಸಿಕ್ಯೂಶನ್ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಗಮನಕ್ಕೆ ತಂದಿತ್ತು.

ಮತ್ತು ಯಾರಿಗಾದರೂ ತಾವು ಪಡೆದುಕೊಂಡ ಸೇವೆಗಳ ಕುರಿತಾಗಿ ತೃಪ್ತಿ ಇಲ್ಲದೇ ಇದ್ದಲ್ಲಿ ಅದನ್ನು ಖಂಡಿಸಲು ಸಾಮಾಜಿಕ ಜಾಲತಾಣಗಳನ್ನು ಮಾಧ್ಯಮವಾಗಿ ಬಳಸಿಕೊಳ್ಳುವಂತಿಲ್ಲ ಮತ್ತು ಬದಲಿಗೆ ನೇರವಾಗಿ ಇಂತಹ ಸಮಸ್ಯೆಗಳನ್ನು ಪರಿಹರಿಸಲೆಂದೇ ಇರುವ ಅಧಿಕಾರಿಗಳಿಗೆ ದೂರು ನೀಡಬೇಕು ಎಂಬ ಕಠಿಣ ಕಾನೂನು ಸೌದಿ ಅರೇಬಿಯಾದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next