ರಿಯಾದ್: ಒಂದು, ಎರಡು, ಐದು ವಿವಾಹವಾಗಿರುವ ಸುದ್ದಿ ಬಹುತೇಕ ಎಲ್ಲರಿಗೂ ತಿಳಿದ ವಿಚಾರವೇ, ಆದರೆ ಸೌದಿ ಮೂಲದ ವ್ಯಕ್ತಿಯೊಬ್ಬ 53 ಮಹಿಳೆಯರನ್ನು ವಿವಾಹವಾಗಿರುವ ವಿಷಯ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.
ಸೌದಿ ಮೂಲದ ಅಬು ಅಬ್ದುಲ್ಲಾ ಎಂಬ ವ್ಯಕ್ತಿ ʼಶತಮಾನದ ಬಹುಪತ್ನಿತ್ವಾವಾದಿʼ ಎಂಬ ಅಡ್ಡ ಹೆಸರನ್ನು ಹೊಂದಿದ್ದಾನೆ. ಕಾರಣ ಈತ ಮದುವೆಯಾಗಿದ್ದು ಒಂದಲ್ಲ, ಎರಡಲ್ಲ ಬರೋಬ್ಬರೀ 53 ಮದುವೆ.!
ಈ ಬಗ್ಗೆ ಸ್ವತಃ ಅಬು ಅಬ್ದುಲ್ಲಾ ಅವರೇ ಮಾತಾನಾಡಿಕೊಂಡಿದ್ದಾರೆ, ಸ್ಥಳೀಯ ಮಾಧ್ಯಮದ ಸಂದರ್ಶನವೊಂದಲ್ಲಿ 63 ವರ್ಷದ ವ್ಯಕ್ತಿ, ನಾನು 20 ವರ್ಷದವನಿದ್ದಾಗ ಮೊದಲ ಮದುವೆಯಾದೆ. ನನ್ನ ಹೆಂಡತಿ ನನಗಿಂತ 6 ವರ್ಷ ದೊಡ್ಡವಳಾಗಿದ್ದಳು. ಆ ಸಮಯದಲ್ಲಿ ನಾನು ಮದುವೆಯಾಗಿ ಮಕ್ಕಳೊಂದಿಗೆ ಖುಷಿಯಾಗಿದ್ದೆ. ಆಗ ನನಗೆ ಮತ್ತೊಂದು ಮದುವೆಯಾಗುವ ಯೋಚನೆ ಇರಲಿಲ್ಲ. ಆದರೆ ಸಮಸ್ಯೆಗಳು ಕಾಣಿಸಿಕೊಂಡಾಗ, 23 ನೇ ವಯಸ್ಸಿನಲ್ಲಿ 2ನೇ ಮದುವೆಯಾಗಲು ನಿರ್ಧರಿಸಿ ಈ ವಿಷಯವನ್ನು ಮೊದಲ ಹೆಂಡತಿಗೆ ಹೇಳಿದೆ. ಬಳಿಕ ಎರಡನೇ ಹೆಂಡತಿಯೊಂದಿಗೂ ಜಗಳವಾಗಿ ಮೂರನೇ ಮದುವೆ, ನಾಲ್ಕನೇ ಮದುವೆಯಾದೆ. ಮೊದಲ ಇಬ್ಬರಿಗೆ ವಿಚ್ಚೇದನವನ್ನು ಕೊಟ್ಟೇ ನಾನು ಬೇರೆ ಮದುವೆಯಾದದ್ದು ಎಂದು ಅಬ್ದುಲ್ಲಾ ಹೇಳಿದ್ದಾರೆ.
ನಾನು 43 ವರ್ಷದಲ್ಲಿ 53 ಮಹಿಳೆಯರನ್ನು ಮದುವೆಯಾಗಿದ್ದೇನೆ. ಎಲ್ಲಾ ಗಂಡಸರು ಒಂದು ಮದುವೆಯಾಗಿ ಖುಷಿಯಾಗಿ ಇರಲು ಬಯಸುತ್ತಾರೆ. ನಾನು ಇಷ್ಟು ಮದುವೆಯಾದದ್ದು ಏಕೆಂದರ ನನಗೆ ಸಂತೋಷ ಪಡಿಸುವ ಮಹಿಳೆ ಸಿಗದ ಕಾರಣ ಎಂದು ಹೇಳಿದ್ದಾರೆ.
ನಾನು ಮದುವೆಯಾದ ಬಹುತೇಕ ಮಹಿಳೆಯರು ಸೌದಿ ಮೂಲದವರಾಗಿದ್ದಾರೆ. ಪ್ರವಾಸ ವೇಳೆ ವೀದೇಶಿ ಮಹಿಳೆಯೊಬ್ಬರನ್ನು ಮದುವೆಯಾಗಿದ್ದರು. ನೆಮ್ಮದಿ ಹಾಗೂ ಮಾನಸಿಕ ಶಾಂತಿ ಹುಡುಕಲು ಅವರು ಇಷ್ಟು ಮದುವೆ ಆಗಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ತಿಳಿಸಿದೆ.
ಸದ್ಯ ನಾನು ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ಬೇರೊಬ್ಬ ಮಹಿಳೆಯನ್ನು ಮದುವೆಯಾಗುವ ಯೋಚನೆ ಸದ್ಯಕ್ಕಿಲ್ಲ ಎಂದು ಅಬ್ದುಲ್ಲಾ ಹೇಳಿದ್ದಾರೆ.