Advertisement

Misbehave!; ಪತ್ರಕರ್ತೆ ಜತೆಗೆ ಸೌದಿ ಅರೇಬಿಯಾದ ಪುರುಷ ರೊಬೋಟ್‌ ಅನುಚಿತ ವರ್ತನೆ

12:35 AM Mar 08, 2024 | Team Udayavani |

ಅಬುಧಾಬಿ: ಸೌದಿ ಅರೇಬಿಯಾದ ಮೊದಲ ಪುರುಷ ರೊಬೋಟ್‌ ಎಂಬ ಖ್ಯಾತಿಗೆ ಪಾತ್ರವಾಗ­ಬೇಕಿದ್ದ ಮೊಹ­ಮ್ಮದ್‌ ಎಂಬ ಹೆಸರಿನ ರೊಬೋಟ್‌, ತನ್ನ ಮೊಟ್ಟ ಮೊದಲ ಪರಿಚಯ­ದಲ್ಲೇ ಸುದ್ದಿ ವರದಿಗಾರ್ತಿ ಒಬ್ಬರೊಂದಿಗೆ ಅನುಚಿತವಾಗಿ ವರ್ತಿಸಿ ಕುಖ್ಯಾತಿಗೆ ಪಾತ್ರವಾಗಿದೆ. ಈ ವಿಚಾರ ಮತ್ತು ವೀಡಿಯೋ ಜಾಲತಾಣದಲ್ಲೀಗ ಭಾರೀ ವೈರಲ್‌ ಆಗಿದೆ.

Advertisement

ರಿಯಾದ್‌ನಲ್ಲಿ ಮೊಹಮ್ಮದ್‌ ರೊಬೋಟ್‌ ಅನ್ನು ಪರಿಚಯಿ­ಸುವುದಕ್ಕೆಂದೇ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವರದಿಗಾರ್ತಿ ರೊಬೋಟ್‌ ಕುರಿತು ಮಾಹಿತಿ ನೀಡುತ್ತಿದ್ದರು. ಇದಕ್ಕಿದ್ದಂತೆ ರೊಬೋಟ್‌ ವರದಿಗಾರ್ತಿಯ ದೇಹವನ್ನು ಸ್ಪರ್ಶಿಸಿ ಅನುಚಿತ­ವಾಗಿ ವರ್ತಿಸಿದೆ. ಈ ವೀಡಿಯೋ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next