Advertisement

ನಮ್ಮದು ಬನಾನಾ ರಿಪಬ್ಲಿಕ್‌ ಅಲ್ಲ!

06:00 AM Sep 29, 2018 | |

ನ್ಯೂಯಾರ್ಕ್‌: ನಮ್ಮದು ಬನಾನಾ ರಿಪಬ್ಲಿಕ್‌ ಅಲ್ಲ. ಮಹಿಳಾ ಪರ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಒತ್ತಡ ಹೇರಿದ್ದಕ್ಕೆ ಕ್ಷಮೆ ಕೇಳಿ ಎಂದು ಕೆನಡಾ ವಿರುದ್ಧ ಸೌದಿ ಅರೇಬಿಯಾ ಗುಡುಗಿದೆ. ಕಳೆದ ಆಗಸ್ಟ್‌ನಲ್ಲಿ ಮಹಿಳಾ ಪರ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಕೆನಡಾ ಒತ್ತಡ ಹೇರಿದ್ದಕ್ಕಾಗಿ ಕೆನಡಾ ಜತೆಗಿನ ವ್ಯಾಪಾರ ವಹಿವಾಟುಗಳನ್ನು ಸೌದಿ ನಿಲ್ಲಿಸಿತ್ತು. ಅಲ್ಲದೆ ಧಾನ್ಯ ಆಮದು ಸ್ಥಗಿತಗೊಳಿಸಿ, ಕೆನಡಾದ ರಾಯಭಾರಿಯನ್ನು ವಾಪಸ್‌ ಕಳುಹಿಸಿತ್ತು. ಅಷ್ಟೇ ಅಲ್ಲ, ಕೆನಡಾದಲ್ಲಿರುವ ಎಲ್ಲ ವಿದ್ಯಾರ್ಥಿ ಗಳನ್ನೂ ವಾಪಸ್‌ ಕರೆಸಿಕೊಳ್ಳಲಾಗಿತ್ತು.

Advertisement

ಈ ಬಗ್ಗೆ ನ್ಯೂಯಾರ್ಕ್‌ನಲ್ಲಿ ಮಾತನಾಡಿದ ಸೌದಿ ವಿದೇಶಾಂಗ ಸಚಿವ ಅದೆಲ್‌ ಅಲ್‌ ಜುಬೇರ್‌, ಯಾವುದೇ ದೇಶ ನಮಗೆ ಬುದ್ಧಿ ಹೇಳಲು ಬರುವುದು ಸರಿಯಲ್ಲ. ಕೆನಡಾದಲ್ಲಿ ರುವ ಭಾರತೀಯರಿಗೆ ಸಮಾನ ಹಕ್ಕುಗಳನ್ನು ನೀಡಿ ಎಂದು ನಾವು ಪ್ರತಿಯಾಗಿ ಕೇಳುತ್ತೇವೆ. ಕ್ಯೂಬೆಕ್‌ ಸ್ವಾತಂತ್ರ್ಯ ಹೋರಾಟಗಾರರನ್ನು ಬಿಡುಗಡೆ ಮಾಡಿ, ಆ ಪ್ರಾಂತ್ಯವನ್ನು ಸ್ವತಂತ್ರ ದೇಶವನ್ನಾಗಿ ಘೋಷಿಸಿ ಎಂದು ಕೇಳುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next