ಅಮೆರಿಕ, ಭಾರತದ ಜತೆಗೆ ಬಾಂಧವ್ಯ ಹಳಸಿರುವ ಸಂದರ್ಭ ದಲ್ಲಿಯೇ ಚೀನ ಈಗ ಕೊಲ್ಲಿ ಸಹಕಾರ ಒಕ್ಕೂಟವನ್ನು ನೆಚ್ಚಿ ದಂತೆ ಕಾಣುತ್ತಿದೆ. ಅಮೆರಿಕದ ಜತೆಗೆ ಸೌದಿ ಅರೇಬಿಯಾ ಹೊಂದಿರುವ ರಾಜತಾಂತ್ರಿಕ ಬಾಂಧವ್ಯವೂ ಈಗ ಒಡೆದ ಕನ್ನಡಿಯಂತೆ ಆಗಿದೆ.
ಅದಕ್ಕೆ ಪೂರಕವಾಗಿಯೇ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, 3 ದಿನಗಳ ಕಾಲ ಸೌದಿ ಪ್ರವಾಸ ಮುಗಿಸಿದ್ದಾರೆೆ. ಜಗತ್ತಿಗೇ ಕೊರೊನಾ ರೋಗವನ್ನು ಹಂಚಿದ ಬಳಿಕ ಆ ಬಲೆಯಲ್ಲಿಯೇ ಸಿಲುಕಿ ಕೊಂಡು ಒದ್ದಾಡುತ್ತಿರುವ ಆ ದೇಶದ ಸರಕಾರಕ್ಕೆ ಕುಸಿದು ಹೋಗಿರುವ ಅರ್ಥ ವ್ಯವಸ್ಥೆ ಯನ್ನು ಮೇಲೆತ್ತಲು ಹೊಸ ದಾರಿಯನ್ನು ಕಂಡು ಕೊಳ್ಳಬೇಕಾಗಿದೆ ಎನ್ನುವುದಂತೂ ಸತ್ಯ.
ಹೀಗಾಗಿಯೇ ಬರೋಬ್ಬರಿ 7 ವರ್ಷಗಳ ಬಳಿಕ ಚೀನ ಅಧ್ಯಕ್ಷರು ಅತ್ಯಂತ ಮಹತ್ವದ ಪ್ರವಾಸ ಕೈಗೊಂಡಿ ದ್ದಾರೆ. ಈ ಅವಧಿಯಲ್ಲಿ ಮೊದಲ ಬಾರಿಗೆ ಚೀನ- ಸೌದಿ ಮಾತುಕತೆ, ಕೊಲ್ಲಿ ಸಹಕಾರ ಒಕ್ಕೂಟ (ಜಿಸಿಸಿ)ದ ಮುಖ್ಯಸ್ಥರ ಜತೆಗೆ ಸಭೆಯನ್ನೂ ನಡೆಸಿ ದ್ದಾರೆ. ಆ ದೇಶದಿಂದ ಕಚ್ಚಾ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಲು ಮುಂದಾಗಿದೆ.
ಚೀನದ ಕಚ್ಚಾ ತೈಲದ ಹೆಚ್ಚಿನ ಪ್ರಮಾಣದ ಬೇಡಿಕೆಯನ್ನು ಪೂರೈಸು ವುದು ಸೌದಿ ಅರೇಬಿಯಾ. ಕಳೆದ ವರ್ಷದ ಲೆಕ್ಕಾಚಾರ ನೋಡಿದರೆ ತೈಲ ಬಾಂಧವ್ಯ ಶೇ. 30ರಷ್ಟು ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿ ಯಾವುದೇ ರೀತಿ ಯಲ್ಲಿ ಚೀನದ ಪ್ರಭಾವ ವೃದ್ಧಿ ಯಾಯಿತು ಎಂದಾದರೆ ದಕ್ಷಿಣ ಏಷ್ಯಾಕ್ಕೆ ವಿಶೇಷ ವಾಗಿ ಭಾರತಕ್ಕೆ ಚುಚ್ಚಲಿ ರುವ ಮುಳ್ಳು ಬೆಳೆಯ ಲಾರಂಭಿಸಿದೆ ಎಂದೇ ತಿಳಿದು ಕ ೊಳ್ಳ ಬೇಕಾಗುತ್ತದೆ. ಸೌದಿ ಅರೇ ಬಿ ಯಾದಿಂದ ಚೀನ ಬಳಿಕ ಭಾರತ ಕಚ್ಚಾ ತೈಲ ಖರೀದಿ ಮಾಡುವಲ್ಲಿ 2ನೇ ಸ್ಥಾನದಲ್ಲಿ ಇದೆ ಎನ್ನುವುದನ್ನು ಮರೆಯುವಂತೆ ಇಲ್ಲ.
ಕೆಂಪು ಸಮುದ್ರ ಪ್ರದೇಶ ಮತ್ತು ಹಿಂದೂ ಮಹಾಸಾಗರದ ಪಶ್ಚಿಮ ಪ್ರದೇಶ ವ್ಯಾಪ್ತಿಯಲ್ಲಿ ಚೀನದ ಕರಾಳ ಬಾಹು ವಿಸ್ತರಣೆಯಾಗುತ್ತಿದೆ. ಇನ್ನು ಆಫ್ರಿಕಾ ಖಂಡದ ರಾಷ್ಟ್ರ ವಾಗಿರುವ ಡಿಜಿ ಬೌತಿ ಮತ್ತು ಸೌದಿ ಅರೇಬಿಯಾ ನಡುವೆ ಇರುವ ದೂರ 1,563 ಕಿಮೀ. ಈಗಾಗಲೇ ಅಲ್ಲಿ ದೊಡ್ಡ ಪ್ರಮಾಣದ ಸೇನಾ ನೆಲೆಯನ್ನು ಚೀನ ಸೇನೆ ಸ್ಥಾಪಿ ಸಿದೆ. ಅಲ್ಲಿ ಬೃಹತ್ ಪ್ರಮಾಣದ ಯುದ್ಧ ನೌಕೆ, ಯುದ್ಧ ವಿಮಾನಗಳನ್ನು ತಂಗು ವಂತೆ ಮಾಡುವ ಏರ್ಪಾಡುಗಳೂ ಅದ ರಲ್ಲಿ ಇವೆ.
ಜಗತ್ತಿನ ಯಾವುದೇ ದೇಶದ ಜತೆಗೆ ಯುದ್ಧ ಉಂಟಾದರೂ ಸಮರ್ಥ ವಾಗಿ ಎದುರಿಸುವ ಶಕ್ತಿ ಅದಕ್ಕೆ ಮಧ್ಯ ಪ್ರಾಚ್ಯದ ವ್ಯಾಪ್ತಿಯಲ್ಲಿ ಬರಲಿದೆ.
ಏಕೆಂದರೆ, ಈ ಪ್ರದೇಶದ ರಾಷ್ಟ್ರಗಳ ಜತೆಗೆ ಹಾಗೂ ಭಾರತಕ್ಕೆ ವ್ಯಾಪಾರ- ವಾಣಿಜ್ಯ ಬಾಂಧವ್ಯ ಇದೆ. ಸದ್ಯಕ್ಕೆ ಸೌದಿ ಅರೇಬಿಯಾ ಜತೆಗೆ ಚೀನ ಮಾಡಿ ಕೊಂಡ ಒಪ್ಪಂದ “ದ್ವಿಪಕ್ಷೀಯ’ ಎಂದು ಹೇಳಿಕೆಯನ್ನು ಕೊಡಬಹುದು. ಆದರೆ ಸೂಕ್ಷ್ಮವಾಗಿ ನೋಡುವುದಿದ್ದರೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವವರಿಗೆ ತಲೆನೋವಿನ ವಿಚಾರವಾಗಿ ಪರಿಣಮಿ ಸಲಿದೆ ಎನ್ನುವುದು ಸತ್ಯ. ಹೀಗಾಗಿ ಈ ವಿಚಾರದಲ್ಲಿ ಜಾಗರೂಕವಾಗಿರಬೇಕು.