Advertisement

ಪಾದೂರಿನಲ್ಲಿ ತೈಲ ಶೇಖರಣೆಗೆ ಮುಂದಾದ ಸೌದಿ ಅರಾಮ್ಕೋ

10:04 AM Nov 01, 2019 | Team Udayavani |

ರಿಯಾಧ್‌: ದೇಶದಲ್ಲೇ ಅತಿ ದೊಡ್ಡ ಪೆಟ್ರೋಲಿಯಂ ದಾಸ್ತಾನು ಕೇಂದ್ರ, ಉಡುಪಿ ಜಿಲ್ಲೆಯ ಪಾದೂರಿನ ಸಂಗ್ರಹಾಗಾರದಲ್ಲಿ ಸೌದಿ ಅರೇಬಿಯಾದ ಪೆಟ್ರೋಲಿಯಂ ತಯಾರಿಕೆ ಕಂಪೆನಿ ಸೌದಿ ಅರಾಮ್ಕೋ ಪೆಟ್ರೋಲಿಯಂ ದಾಸ್ತಾನು ಮಾಡಲಿದೆ.

Advertisement

ಸುಮಾರು 46 ಲಕ್ಷ ಬ್ಯಾರೆಲ್‌ನಷ್ಟು ತೈಲವನ್ನು ಅದು ಪಾದೂರಿನಲ್ಲಿ ಶೇಖರಣೆ ಮಾಡಲಿದೆ. ಇದರಿಂದ ವ್ಯೂಹಾತ್ಮಕವಾಗಿ ಮತ್ತು ತುರ್ತು ಸಂದರ್ಭಗಳಲ್ಲಿಯೂ ಭಾರತಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ಅಡೆತಡೆ ಇಲ್ಲದೆ ಲಭ್ಯವಾಗಲಿದೆ.

ಪಾದೂರು ತೈಲ ಶೇಖರಣೆ ಘಟಕದಲ್ಲಿ ಒಂದು ಕಂಪಾರ್ಟ್‌ಮೆಂಟ್‌ನಲ್ಲಿ ತೈಲ ಶೇಖರಣೆಗೆ ಸೌದಿ ಅರಾಮ್ಕೋ ಒಪ್ಪಂದ ಮಾಡಿಕೊಂಡಿದೆ. ಪಾದೂರಿನಲ್ಲಿ ಸುಮಾರು 3.6 ಕೋಟಿ ಬ್ಯಾರೆಲ್‌ ತೈಲ ಶೇಖರಣೆ ಮಾಡಬಹುದು. ಹೆಚ್ಚುವರಿ ತೈಲವನ್ನು ಸೌದಿ ಅರಾಮ್ಕೋ ಅಲ್ಲಿ ಶೇಖರಣೆ ಮಾಡಿದರೂ, ಅವುಗಳನ್ನು ಭಾರತೀಯ ತೈಲ ಕಂಪೆನಿಗಳಿಗೆ ಮಾರಾಟ ಮಾಡಲಿದೆ. ತನ್ನ ಬೇಡಿಕೆಯ ಶೇ.80ರಷ್ಟು ತೈಲವನ್ನು ಭಾರತ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಪಾದೂರಿನಲ್ಲಿ ತೈಲ ಶೇಖರಣೆಗೆ ಮೊದಲ ಒಪ್ಪಂದ ಮಾಡಿದ ಕಂಪೆನಿ ಸೌದಿಯ ಸೌದಿ ಅರಾಮ್ಕೋ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next