ರಿಯಾದ್: ಸೌದಿಯ ಕರಾವಳಿಯಲ್ಲಿ ಕಟ್ಟಲು ಉದ್ದೇಶಿಸಲಾಗಿರುವ ಸುಸಜ್ಜಿತವಾದ ನಗರ “ಸ್ಕೈ ಸ್ಕ್ರಾಪರ್’ನ ವಿನ್ಯಾಸದ ಬಗ್ಗೆ ಮತ್ತಷ್ಟು ವಿಚಾರಗಳು ಹೊರಬಿದ್ದಿವೆ. “ಮಿರರ್ ಲೈನ್’ ಹೆಸರಿನ ಈ ಯೋಜನೆಯ ಬಗ್ಗೆ ಕೆಲ ದಿನಗಳ ಹಿಂದೆ ಪ್ರಕಟವಾಗಿತ್ತು.
ಅದರಲ್ಲಿ ಸೌದಿ ಅರೇಬಿಯಾದ 75 ಮೈಲು ದೂರದ ಎರಡು ಕಟ್ಟಡಗಳು ನಿರ್ಮಾಣವಾಗಲಿದ್ದು, ಅದರಲ್ಲಿ 50 ಲಕ್ಷ ಜನರು ಜೀವನ ನಡೆಸಬಹುದು ಎಂದು ಹೇಳಲಾಗಿತ್ತು.
ಈಗ, ಈ ಬಗ್ಗೆ ಮತ್ತಷ್ಟು ಮಾಹಿತಿಗಳು ಹೊರಬಿದ್ದಿವೆ. ಅಂದಹಾಗೆ, 1,600 ಅಡಿ ಎತ್ತರವಿರುವ ಈ ಕಟ್ಟಡಗಳಲ್ಲಿ ಜನವಸತಿ ಸಮುಚ್ಚಯಗಳು, ಕಚೇರಿಗಳ ಸಮುಚ್ಚಯಗಳು, ಪಾರ್ಕ್, ಮಾಲ್.. ಹೀಗೆ ಒಂದು ಆಧುನಿಕ ನಗರದಲ್ಲಿ ಏನೇನಿರುತ್ತವೋ ಅದೆಲ್ಲವೂ ಇರುತ್ತವೆ. ಇಷ್ಟು ವಿಸ್ತಾರವಾದ ಕಟ್ಟಡಗಳು ಬೆಟ್ಟ, ಕಣಿವೆ, ಕಂದರ, ಮರುಭೂಮಿ ಮೂಲಕ ಈ ಕಟ್ಟಡಗಳು ಹಾದು ಹೋಗುತ್ತವೆ.
ಈ ಕಟ್ಟಡಗಳ ನಡುವೆ ಹೈ ಸ್ಪೀಡ್ ರೈಲು ಸಂಚಾರ, ವರ್ಟಿಕಲ್ ಕೃಷಿ ಭೂಮಿ, ನೆಲದಿಂದ ಸಾವಿರ ಅಡಿಗಳಷ್ಟು ಮೇಲಿರುವ ಕ್ರೀಡಾಂಗಣ, ಅವಳಿ ಕಟ್ಟಡಗಳ ಕೆಳಭಾಗದಲ್ಲಿ ಸಮುದ್ರ ವಿಹಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿದೆ.