Advertisement

ಸೆ.21ರಿಂದ ಸೌದಿ ಇಂಟರ್‌ನೆಟ್‌ ಫೋನ್‌ ಕಾಲ್‌ ನಿಷೇಧ ತೆರವು

03:52 PM Sep 20, 2017 | udayavani editorial |

ರಿಯಾಧ್‌ : ಸೌದಿ ಅರೇಬಿಯಾ ನಾಳೆ ಗುರುವಾರ ಸೆ.21ರಂದು ಇಂಟರ್‌ನೆಟ್‌ ಫೋನ್‌ ಕಾಲ್‌ಗ‌ಳ ಮೇಲಿನ ನಿಷೇಧವನ್ನು ತೆರವುಗೊಳಿಸಲಿದೆ ಎಂದು ಸರಕಾರಿ ವಕ್ತಾರ ತಿಳಿಸಿದ್ದಾರೆ.

Advertisement

ಸೌದಿ ಅರೇಬಿಯ ತೈಲೇತರ ಆದಾಯದ ಮೇಲೆ ಕಣ್ಣಿಟ್ಟಿರುವುದರಿಂದ ಆನ್‌ಲೈನ್‌ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಇಂಟರ್‌ನೆಟ್‌ ಮೇಲಿನ ನಿಷೇಧವನ್ನು ತೆರವುಗೊಳಿಸಲು ನಿರ್ಧರಿಸಿರುವುದಾಗಿ ವಕ್ತಾರ ಹೇಳಿದ್ದಾರೆ. 

ಇಂದು ಮಧ್ಯರಾತ್ರಿಯಿಂದ (ಜಿಎಂಟಿ ಕಾಲಮಾನ 2100), ನಿಯಂತ್ರಣ ಆವಶ್ಯಕತೆಗಳನ್ನು ಪೂರೈಸುವ, ಮೈಕ್ರೋಸಾಫ್ಟ್ ಸ್ಕೈಪ್‌ ಮತ್ತು ಫೇಸ್‌ ಬುಕ್‌ ನ ವಾಟ್ಸಾಪ್‌ ವಿಡಿಯೋ ಮತ್ತು ವಾಯ್ಸ ಕಾಲ ಸೇವೆಗಳು ಗ್ರಾಹಕರ ಬಳಕೆಗೆ ಲಭ್ಯವಾಗಲಿವೆ ಎಂದು ಸಿಐಟಿಸಿ ಟೆಲಿಕಾಂ ನಿಯಂತ್ರಣ ಸಂಸ್ಥೆಯ ವಕ್ತಾರ ಅದೆಲ್‌ ಅಬು ಹಮೀದ್‌ ಇಂದು ಬುಧವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಇಂಟರ್‌ನೆಟ್‌ ಫೋನ್‌ ಕಾಲ್‌ ನಿಷೇಧ ತೆರವಿನ ಈ ಕ್ರಮದಿಂದಾಗಿ ಸೌದಿ ಅರೇಬಿಯದ ಮೂರು ಮುಖ್ಯ ಟೆಲಿಕಾಂ ನಿರ್ವಾಹಕ ಸಂಸ್ಥೆಗಳಾಗಿರುವ ಸೌದಿ ಟೆಲಿಕಾಂ ಕಂಪೆನಿ (ಎಸ್‌ಟಿಸಿ), ಎತಿಹಾದ್‌ಎಟಿಸಲಾತ್‌ (ಮೊಬಿಲಿ) ಮತ್ತು ಝೈನ್‌ ಸೌದಿ ಸಂಸ್ಥೆಗೆ ತೀವ್ರ ಹೊಡೆತ ಬೀಳಲಿದೆ. ಈ ಸಂಸ್ಥೆಗಳು ಪ್ರಕೃತ ಸೌದಿಯಲ್ಲಿ ನೆಲೆಸಿರುವ ಲಕ್ಷಾಂತರ ವಲಸಿಗರಮಾಡುವ ಅಸಂಖ್ಯ ಅಂತಾರಾಷ್ಟ್ರೀಯ ಫೋನ್‌ ಮತ್ತು ಟೆಕ್ಸ್‌ಟ್‌ ಕರೆಗಳಿಂದ ಗರಿಷ್ಠ ಆದಾಯವನ್ನು ಪಡೆಯುತ್ತಿವೆ. 

Advertisement

Udayavani is now on Telegram. Click here to join our channel and stay updated with the latest news.

Next