Advertisement

ಅಮೆರಿಕ ನಾಗರಿಕನಿಗೆ ಸೌದಿಯಲ್ಲಿ ಜೈಲು: ಅಮೆರಿಕ ಕೆಂಡ

07:19 PM Oct 19, 2022 | Team Udayavani |

ವಾಷಿಂಗ್ಟನ್‌: ತನ್ನ ನಾಗರಿಕನನ್ನು ಸೌದಿ ಅರೇಬಿಯದಲ್ಲಿ 16 ವರ್ಷ ಜೈಲಿಗೆ ತಳ್ಳಿರುವುದರ ವಿರುದ್ಧ ಅಮೆರಿಕ ಕಿಡಿಕಾರಿದೆ.

Advertisement

ಕೇವಲ ಸೌದಿ ರಾಜ ಮನೆತನವನ್ನು ಟೀಕಿಸಿದ್ದಕ್ಕೆ, 16 ವರ್ಷ ಜೈಲುಶಿಕ್ಷೆ ವಿಧಿಸಿದ್ದು ಅಮೆರಿಕವನ್ನು ಕೆರಳಿಸಿದೆ.

ಎರಡೂ ದೇಶಗಳ ನಡುವೆ ಮತ್ತೆ ಸಂಬಂಧ ಹಳಸುವ ಸಾಧ್ಯತೆಗಳು ಹೆಚ್ಚಾಗಿವೆ. ಸೌದಿ ಮೂಲದ ಅಮೆರಿಕ ನಾಗರಿಕ ಸಾದ್‌ ಅಲ್ಮಾದಿ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲೆಂದು ಕಳೆದ ನವೆಂಬರ್‌ನಲ್ಲಿ ಸೌದಿಗೆ ತೆರಳಿದ್ದರು. ಆಗ ವಿಮಾನ ನಿಲ್ದಾಣದಲ್ಲೇ ಅವರನ್ನು ಬಂಧಿಸಲಾಗಿತ್ತು.

ಹಿಂದಿನ ಏಳು ವರ್ಷಗಳಲ್ಲಿ ಅವರು ಸೌದಿ ರಾಜ ಮನೆತನದ ವಿರುದ್ಧ 14 ಟ್ವೀಟ್‌ ಮಾಡಿದ್ದರು ಎನ್ನುವುದೇ ಇಂತಹ ಉಗ್ರಕ್ರಮಕ್ಕೆ ಕಾರಣ! ಅವರಿಗೆ ಇತ್ತೀಚೆಗೆ ಅ.3ರಂದು 16 ವರ್ಷ ಜೈಲುಶಿಕ್ಷೆ ಹೇರಿದ್ದಲ್ಲದೇ, 16 ವರ್ಷ ಪ್ರಯಾಣಕ್ಕೂ ನಿರ್ಬಂಧ ವಿಧಿಸಲಾಗಿದೆ.

ಸೌದಿ ಆಡಳಿತದ ಭ್ರಷ್ಟಾಚಾರ ಮತ್ತು ಪತ್ರಕರ್ತ ಜಮಾಲ್‌ ಖಶೊಗ್ಗಿ ಹತ್ಯೆಯನ್ನು ವಿರೋಧಿಸಿ ಸಾದ್‌ ಟ್ವೀಟ್‌ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next