Advertisement
ತನ್ನ ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಟ್ಟರ್ ಸಂಪ್ರದಾಯವಾದಿ ಇಸ್ಲಾಂ ದೇಶ ಮಾಡಿಕೊಂಡಿರುವ ನಿಯಮ ಸಡಿಲಿಕೆಗಳೇನು ಎನ್ನುವುದನ್ನು ನೋಡುವುದಾದರೆ..:
ಕಟ್ಟರ್ ಮುಸ್ಲಿಂ ಮೂಲಭೂತವಾದಿ ರಾಷ್ಟ್ರವೆಂದೇ ಕರೆಯಲಾಗುತ್ತಿದ್ದ ಸೌದಿ ಅರೇಬಿಯಾ ಪ್ರಮುಖ ನಿರ್ಣಯ ಕೈಗೊಂಡಿದ್ದು, ಇದೇ ಮೊದಲ ಬಾರಿಗೆ ದೇಶದಿಂದ ಪ್ರವಾಸಿಗರ ವೀಸಾ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದೆ. ಕಳೆದ ತಿಂಗಳಿನಲ್ಲಿ ಅರಬ್ ದೇಶದ ತೈಲ ಸ್ಥಾವರಗಳ ಮೇಲೆ ದಾಳಿ ನಡೆದಿದ್ದು, ಅಲ್ಲಿನ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ಮಹತ್ತರವಾದ ನಿರ್ಧಾರ ಕೈಗೊಂಡಿರುವ ಸೌದಿ ದೇಶ ಆರ್ಥಿಕತೆಯನ್ನು ಪ್ರಬಲಗೊಳಿಸುವ ದೃಷ್ಟಿಯಿಂದ ಪ್ರವಾಸೋದ್ಯಮದತ್ತ ಚಿತ್ತ ನೆಟ್ಟಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿಕೊಂಡಿದೆ. ವಸ್ತ್ರ ಸಂಹಿತೆ ವಿನಾಯಿತಿ
ಈ ಹಿಂದೆ ಬುರ್ಕಾ ಧರಿಸದ ವಿದೇಶಿ ಮಹಿಳೆಯರಿಗೆ ಅರಬ್ ನ ಸಾರ್ವಕಜನಿಕ ಸ್ಥಳಗಳಲ್ಲಿ ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರವೇಶವನ್ನು ನಿಷೇಧಗೊಳಿಸಲಾಗಿತ್ತು. ಆದರೆ ಪರಿಸ್ಥಿತಿಗೆ ತಕ್ಕಂತೆ ಬದಲಾಗಿರುವ ಅರಬ್ ದೇಶ ವಸ್ತ್ರಸಂಹಿತೆಯಲ್ಲಿ ನಿಯಮದಲ್ಲಿ ಸ್ವಲ್ಪ ಸಡಿಲಿಕೆ ಮಾಡಿದ್ದು, ವಿದೇಶಿ ಮಹಿಳೆ ಯಾತ್ರಿಗಳಿಗೆ ಸೌದಿ ಅರೇಬಿಯಾದ ಕಠಿಣ ವಸ್ತ್ರ ಸಂಹಿತೆಯನ್ನು ಸಡಿಲಗೊಳಿಸಲಾಗಿದೆ.
Related Articles
ಪ್ರವಾಸೋದ್ಯಮವನ್ನು ಆರ್ಥಿಕ ವ್ಯವಸ್ಥೆಯ ಪ್ರಮುಖ ಆದಾಯ ಮೂಲವನ್ನಾಗಿ ಮಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಅಂತರಾಷ್ಟ್ರೀಯ ಪ್ರವಾಸಿಗರಿಗೆ ಮುಕ್ತ ಪ್ರವೇಶಅಂತರಾಷ್ಟ್ರೀಯ ಪ್ರವಾಸಿಗರಿಗೆ ಪೂರಕವಾದ ವಾತವಾರಣ ಕಲ್ಪಿಸುವ ಮೂಲಕ ಮುಕ್ತ ಪ್ರವೇಶ ಒದಗಿಸುವ ಉದ್ಧೇಶವನ್ನಿಟ್ಟುಕೊಂಡಿರುವ ಸೌದಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಆನ್ ಲೈನ್ ಅರ್ಜಿಗಳಿಗೆ ಚಾಲನೆ
ನಲವತ್ತೊಂಬತ್ತು ದೇಶಗಳ ನಾಗರಿಕರಿಗೆ ಆನ್ ಲೈನ್ ವೀಸಾ ಅರ್ಜಿಗಳನ್ನು ನೀಡುವ ಪ್ರಕ್ರಿಯೆಗೆ ಈಗಾಗಲೇ ಸೌದಿ ಅರೇಬಿಯಾ ಚಾಲನೆ ನೀಡಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಯಾಕೆ ವಿಶೇಷ ಈ ದೇಶ ?
ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಂಡಿರುವ ಐದು ಪ್ರವಾಸಿ ತಾಣಗಳು ಸೌದಿ ಅರೇಬಿಯಾದಲ್ಲಿದೆ. ಸ್ಥಳೀಯ ಸಂಸ್ಕೃತಿ ಹಾಗೂ ಪ್ರಾಕೃತಿಕ ಸೌಂದರ್ಯಕ್ಕೆ ಸೌದಿ ಅರೇಬಿಯಾ ವಿಶೇಷ ಎನ್ನಿಸಿಕೊಳ್ಳುತ್ತದೆ.