Advertisement
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಜನವಸತಿಯಿಲ್ಲದ ಜಾಗದಲ್ಲಿ ಅಂದಾಜು 38 ಲಕ್ಷ ಕೋಟಿ ರೂ.ಗಳ ವೆಚ್ಚದಲ್ಲಿ ಇವನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಅವರ ಕನಸಿನ ಕೂಸಾದ “ನೆಯಾಮ್’ ಎಂಬ ಅಭಿವೃದ್ಧಿ ಯೋಜನೆಯಡಿ ಈ ಕಾಮಗಾರಿ ಜಾರಿಗೊಳ್ಳಲಿದೆ.
ಪ್ರತಿ ಕಟ್ಟಡ, 1,640 ಅಡಿ ಎತ್ತರದಲ್ಲಿರಲಿದ್ದು, ಹಲವು ಕಿಲೋಮೀಟರ್‌ಗಳವರೆಗೆ ವಿಸ್ತಾರವಾಗಿರಲಿವೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಈ ಬೃಹತ್ ಕಟ್ಟಡಗಳಲ್ಲಿ ವಸತಿ ಸಮುತ್ಛಯ, ವಾಣಿಜ್ಯ ಸಂಕೀರ್ಣ, ಕಚೇರಿಗಳು ಇವೆಲ್ಲವೂ ಅಡಕವಾಗಿರಲಿವೆ. ಇವು, ಕೆಂಪು ಸಮುದ್ರಕ್ಕೆ ಹೊಂದಿಕೊಂಡಿರುವ ಜೆಡ್ಡಾದ ಬೀಚ್‌ನಿಂದ ಕೆಲವು 800 ಮೀಟರ್ (ಸುಮಾರು ಮುಕ್ಕಾಲು ಕಿ.ಮೀ.) ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿವೆ. ಡಿಸೈನರ್‌ಗಳಿಗೆ ಸೂಚನೆ
ಈ ಕಟ್ಟಡಗಳ ವಿನ್ಯಾಸ ಹಾಗೂ ನಿರ್ಮಾಣದ ಹೊಣೆಯನ್ನು ಕ್ಯಾಲಿಫೋರ್ನಿಯಾದ ವಾಸ್ತುಶಿಲ್ಪ ಕಂಪನಿಯಾದ ಮೋಫೋìಸಿಸ್‌ಗೆ ವಹಿಸಲಾಗಿದೆ. ಅಲ್ಲಿನ ಕೆಲಸಗಾರರಿಗೆ, ಹೊಸದಾಗಿ ನಿರ್ಮಾಣಗೊಳ್ಳಲಿರುವ ಒಂದೊಂದು ಕಟ್ಟಡದ ವಿಸ್ತೀರ್ಣವು ಕನಿಷ್ಟ ಅರ್ಧ ಮೈಲು ಇರಬೇಕೆಂದು ಸೂಚಿಸಲಾಗಿದೆ. ಈ ವಿಸ್ತೀರ್ಣದಲ್ಲಾಗಲೀ, ಎತ್ತರದಲ್ಲಾಗಲೀ ಈ ಕಟ್ಟಡಗಳು ಜಗತ್ತಿನಲ್ಲಿ ಪ್ರಸ್ತುತ ಅತಿ ದೊಡ್ಡ ಕಟ್ಟಡಗಳೆಂಬ ಖ್ಯಾತಿ ಗಳಿಸಿರುವ ಎಲ್ಲಾ ಕಟ್ಟಡಗಳನ್ನೂ ಮೀರಿಸುವಂತಿರಬೇಕು ಎಂಬ ಷರತ್ತನ್ನೂ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement