Advertisement

ರಾಣಿ ಎಲಿಜಬೆತ್‌ಗೆ ಸ್ವರ್ಗ ಪ್ರಾಪ್ತಿಯಾಗಲೆಂದು ಮೆಕ್ಕಾಗೆ ʼಉಮ್ರಾ ಯಾತ್ರೆʼ ಕೈಗೊಂಡಾತನ ಬಂಧನ

04:12 PM Sep 14, 2022 | Team Udayavani |

ಸೌದಿಅರೇಬಿಯಾ: ರಾಣಿ ಎಲಿಜಬೆತ್ II ಅವರ ಆತ್ಮಕ್ಕೆ ಶಾಂತಿ ಸಿಗಬೇಕು, ಅವರಿಗೆ ಸ್ವರ್ಗ ಪ್ರಾಪ್ತಿಯಾಗಬೇಕೆಂದು ಮೆಕ್ಕಾಗೆ ʼಉಮ್ರಾ ಯಾತ್ರೆʼ ಯನ್ನು ಕೈಗೊಳ್ಳುವುದಾಗಿ ವ್ಯಕ್ತಿಯೋರ್ವ  ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದು, ಆತನನ್ನು ಸೌದಿ ಪೊಲೀಸರು ಬಂಧಿಸಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಪಂಜಾಬ್:ಆಮ್ ಆದ್ಮಿ ಪಕ್ಷದ 10 ಶಾಸಕರನ್ನು ಬಿಜೆಪಿ ಸಂಪರ್ಕಿಸಿ, ಆಫರ್ ನೀಡಿತ್ತು: ಕೇಜ್ರಿವಾಲ್

ಯೆಮೆನ್ ಎಂಬಾತ  ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಬಳಿ ದಿವಂಗತ ರಾಣಿಯ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಉಮ್ರಾ ಯಾತ್ರೆ ಕೈಗೊಂಡಿದ್ದೇನೆ ಎಂದು ಬರೆದಿರುವ ಬ್ಯಾನರ್ ಅನ್ನು ಹಿಡಿದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದನು.

ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದಂತೆ ಯೆಮೆನ್ ಬಂಧನಕ್ಕೆ ಆಗ್ರಹಗಳು ಕೇಳಿಬಂದಿದ್ದವು. ಪವಿತ್ರ ಸ್ಥಳಗಳು ರಾಜಕೀಯ ವಿಮರ್ಶೆಯ ಅಖಾಡವಲ್ಲ, ಕೂಡಲೇ ಆತನನ್ನು ಬಂಧಿಸಿ ಶಿಕ್ಷೆ ನೀಡಿ ಎಂದು ನೆಟ್ಟಿಗರು ಆಗ್ರಹಿಸಿದ್ದರು.

Advertisement

ಯೆಮೆನ್‌ ಕಾನೂನು ಉಲ್ಲಂಘಿಸಿ ಗ್ರ್ಯಾಂಡ್ ಮಸೀದಿಯೊಳಗೆ ಬ್ಯಾನರ್ ಹಿಡಿದುಕೊಂಡು ಬಂದ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವುದಾಗಿ ಸೌದಿ ಸಾರ್ವಜನಿಕ ಭದ್ರತಾ ನಿರ್ದೇಶನಾಲಯವು ಈ ಕುರಿತು ತನ್ನ ಟ್ವಿಟ್ಟರ್‌ನಲ್ಲಿ ತಿಳಿಸಿದೆ.

ಸೌದಿ ಅರೇಬಿಯಾದಲ್ಲಿ ಮೆಕ್ಕಾ ಯಾತ್ರಿಕರು ಬ್ಯಾನರ್‌ಗಳನ್ನು ಅಥವಾ ಘೋಷಣೆಗಳನ್ನು ಹಾಕುವುದನ್ನು ನಿಷೇಧಿಸಿದೆ . ಅಷ್ಟೇ ಅಲ್ಲದೇ , ಇಲ್ಲಿ ನಿಧನ ಹೊಂದಿದ ಮುಸ್ಲಿಮರ ಪರವಾಗಿ ಉಮ್ರಾ ಮಾಡುವುದು ಸ್ವೀಕಾರಾರ್ಹವಾಗಿದ್ದರೂ , ಇದು ರಾಣಿಯಂತಹ ಮುಸ್ಲಿಮೇತರರಿಗೆ ಅನ್ವಯಿಸುವುದಿಲ್ಲ. ಅವರು ಚರ್ಚ್ ಆಫ್ ಇಂಗ್ಲೆಂಡ್‌ನ ಸರ್ವೋಚ್ಚ ಗವರ್ನರ್ ಆಗಿದ್ದರೂ ಮಸೀದಿಗೆ ಸಂಬಂಧಿಸಿದ ನಿಯಮಗಳಿಗೆ ಇದು ವಿರುದ್ಧವಾಗಿದೆ . ಹೀಗಾಗಿ ಈ ನಿಯಮಗಳನ್ವಯ ಬ್ಯಾನರ್ ಹಿಡಿದು ಬಂದಿದ್ದ ಯೆಮನ್ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next