Advertisement
ಸೌದಿ ಪುರಾತತ್ವ ಇಲಾಖೆಯು ತನ್ನ ಟ್ವಿಟರ್ ಖಾತೆ ಮೂಲಕ ಈ ವಿಚಾರವನ್ನು ಜಗಜ್ಜಾಹೀರು ಮಾಡಿದೆ. ಮದೀನಾದ ಅಬಾ ಅಲ್-ರಹಾದ ಗಡಿಯೊಳಗೆ ಚಿನ್ನದ ಅದಿರುಗಳು ಪತ್ತೆಯಾಗಿದ್ದರೆ, ಅಲ್-ಮದೀಖ್ ಪ್ರದೇಶದ 4 ಕಡೆ ತಾಮ್ರದ ಅದಿರುಗಳು ಸಿಕ್ಕಿವೆ. ಈ ಆವಿಷ್ಕಾರವು ಹೆಚ್ಚಿನ ಪ್ರಮಾಣದ ಹೂಡಿಕೆಯ ಅವಕಾಶಗಳನ್ನು ಮುಕ್ತವಾಗಿಸಿದಂತಾಗಿದೆ ಎಂದೂ ಪುರಾತತ್ವ ಇಲಾಖೆ ಬರೆದುಕೊಂಡಿದೆ.
ಚಿನ್ನ-ತಾಮ್ರದ ಅದಿರುಗಳ ಆವಿಷ್ಕಾರದಿಂದಾಗಿ ಮದೀನಾಗೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆಗಳು ಹರಿದುಬರಲಿದ್ದು, ರಾಷ್ಟ್ರೀಯ ಆರ್ಥಿಕತೆಗೂ ಶಕ್ತಿ ತುಂಬಲಿದೆ. ಅದಿರು ಇರುವ ಪ್ರದೇಶಗಳಲ್ಲಿ 533 ದಶಲಕ್ಷ ಡಾಲರ್ ಹೂಡಿಕೆ ಬರುವ ನಿರೀಕ್ಷೆಯಿದ್ದು, 4 ಸಾವಿರದಷ್ಟು ಉದ್ಯೋಗಾವಕಾಶಗಳೂ ಸೃಷ್ಟಿಯಾಗುವ ಸಾಧ್ಯತೆಯಿದೆ. ಸೌದಿ ಅರೇಬಿಯಾವು ಸುಮಾರು 5,300ರಷ್ಟು ಖನಿಜ ಪ್ರದೇಶಗಳ ತವರಾಗಿದೆ.