Advertisement

ಸೌದಿ ಅರೇಬಿಯಾ:10 ಮಂದಿ ಸಾಧಕರಿಗೆ ವಿಶ್ವ ಮಾನ್ಯ ಪ್ರಶಸ್ತಿ ಪ್ರದಾನ

12:33 PM Mar 09, 2024 | Team Udayavani |

ಸೌದಿ ಅರೇಬಿಯಾ:ಸೌದಿ ಅರೇಬಿಯಾದ ದಮಾಮ್‌ನಲ್ಲಿ 17ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನವು ಅದ್ದೂರಿಯಾಗಿ ಸಂಪನ್ನಗೊಂಡಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್‌, ಪೌರಾಡಳಿತ ಮತ್ತು ಹಜ್‌ ಖಾತೆ ಸಚಿವ ರಹೀಮ್‌ ಖಾನ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಪ್ರೊ| ಎಸ್‌.ಜಿ. ಸಿದ್ದರಾಮಯ್ಯ, ಕರ್ನಾಟಕ ಸರಕಾರದ ಅನಿವಾಸಿ ಕನ್ನಡಿಗರ ಕೋಶದ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ, ಪುತ್ತೂರು ಶಾಸಕ ಅಶೋಕ್‌ ರೈ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌. ಶುಭಾಶಂಸನೆಗೈದರು.

Advertisement

ಸಾಮಾಜಿಕ ಬಂಧು, ಓಮಾನ್‌ ದೇಶದ ಮಸ್ಕತ್‌ನಲ್ಲಿರುವ ಅನಿವಾಸಿ ಭಾರತೀಯ ಶಿವಾನಂದ ಕೋಟ್ಯನ್‌ ಕಟಪಾಡಿ ಸಹಿತ ಹತ್ತು ಮಂದಿ ಸಾಧಕರಿಗೆ ವಿಶ್ವ ಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾಡಿನ ಕಲೆ, ಸಾಹಿತ್ಯ, ಚಲನಚಿತ್ರಗಳ ಆಯೋಜನೆ, ಸಹಾಯ, ಸಹಕಾರ ಹೀಗೆ ಹಲವು ಕ್ಷೇತ್ರಗಳ ಸಾಧನೆಯನ್ನು ಗುರುತಿಸಿ ಸಮಾರಂಭಕ್ಕಾಗಿ ಸೌದಿ ದೇಶಕ್ಕೆ ವಿಶೇಷವಾಗಿ ಆಹ್ವಾನಿಸಿ ಪ್ರಶಸ್ತಿ ನೀಡಲಾಯಿತು.

ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕಾಧ್ಯಕ್ಷ ಮಂಜುನಾಥ ಸಾಗರ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೌದಿ ಅರೇಬಿಯಾದಲ್ಲಿ ಪ್ರಥಮ ಬಾರಿಗೆ ನಡೆದ ಸಮ್ಮೇಳನದಲ್ಲಿ ಕನ್ನಡ ಭಾಷೆ, ನಡೆ ನುಡಿಯ ಬಗೆಗಿನ ಮನರಂಜನೆ ಸೇರಿದಂತೆ ಅನೇಕ ಚರ್ಚೆ, ಕವಿಗೋಷ್ಠಿಗಳು ಹಾಗೂ ಕನ್ನಡ, ತುಳು ಗಾಯನ, ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.

ಆಯೋಜಕರಾದ ಝಕರಿಯಾ ಬಜ್ಪೆ, ಶೇಖ್‌ ಕರ್ನಿರೆ ಮತ್ತು ಸತೀಶ್‌ ಕುಮಾರ್‌ ಬಜಾಲ್‌ ನೇತೃತ್ವದ ತಂಡವು ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next