Advertisement

Saturn; ಇನ್ನು 6 ತಿಂಗಳಲ್ಲೇ ಶನಿ ಗ್ರಹದ ಉಂಗುರ ಮಾಯ!

11:13 PM Sep 03, 2024 | Team Udayavani |

ಲಂಡನ್‌: ಹಲವು ಶತಮಾನಗಳಿಂದಲೂ ಖಗೋಳಾಸಕ್ತರ ಕೌತುಕವನ್ನು ಕೆರಳಿಸಿರುವ ಶನಿ ಗ್ರಹದ ಉಂಗುರವು ಇನ್ನು ಕೇವಲ 6 ತಿಂಗಳಲ್ಲೇ ಕಣ್ಮರೆಯಾಗಲಿದೆ!

Advertisement

ಅರೆ, ಶನಿ ತನ್ನ ಉಂಗುರವನ್ನೇ ಕಳೆದುಕೊಳ್ಳುತ್ತಾನಾ ಎಂದು ಯೋಚಿಸುತ್ತಿದ್ದೀರಾ? ವಾಸ್ತವದಲ್ಲಿ ಶನಿಯ ಉಂಗುರವೇನೂ ಕಳಚಿ ಬೀಳುವುದಿಲ್ಲ. ಆದರೆ ಅದು ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ ಅಷ್ಟೆ. ಇದು ಕೂಡ ಖಗೋಳ ಕೌತುಕಗಳಲ್ಲಿ ಒಂದು.

2025ರ ಮಾರ್ಚ್‌ನಲ್ಲಿ ಶನಿಯ ಸುಂದರ ಉಂಗುರಗಳು ಭೂಮಿಯಿಂದ ನೋಡುವವರ ಕಣ್ಣಿಗೆ ಗೋಚರಿಸುವುದಿಲ್ಲ. ಶನಿಯ ಅಕ್ಷದ ವಿಶಿಷ್ಟ ವಾಲುವಿಕೆ(26.7 ಡಿಗ್ರಿ)ಯಿಂದಾಗಿ ಈ ವಿದ್ಯಮಾನ ಸಂಭವಿಸುತ್ತದೆ. ಗ್ರಹದ ಅಕ್ಷವು ವಾಲುವಾಗ ಶನಿಯ ಉಂಗುರಗಳು ನಮ್ಮ ದೃಷ್ಟಿಯಿಂದ ಮರೆಯಾಗುತ್ತವೆ. ಹಾಗಂತ ಇದು ಶಾಶ್ವತವಾದ ಬದಲಾವಣೆಯಲ್ಲ. ಶನಿಯು ಸೂರ್ಯನ ಸುತ್ತ ಸುತ್ತುವ ಕಾರಣ ಪ್ರತೀ 29.5 ವರ್ಷಗಳಿಗೆ ಒಮ್ಮೆ ಇಂಥ ವಿದ್ಯಮಾನ ಮರುಕಳಿಸುತ್ತದೆ. 2025ರ ಮಾರ್ಚ್‌ನ ಬಳಿಕ ಉಂಗುರ ಮತ್ತೆ ಕಾಣಿಸಿ, ನವೆಂಬರ್‌ನಲ್ಲಿ ಮತ್ತೂಮ್ಮೆ ಮರೆಯಾಗುತ್ತದೆ. ಶನಿಯ ಉಂಗುರಗಳು ಮತ್ತೆ ಪೂರ್ಣಪ್ರಮಾಣದಲ್ಲಿ ಕಾಣಿಸಬೇಕೆಂದರೆ 2032ರ ವರೆಗೆ ಕಾಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next