Advertisement

ಶನಿವಾರದ ರಾಶಿಫಲ: ಯಾರಿಗೆ ಶುಭ-ಯಾರಿಗೆ ಲಾಭ?

08:26 AM Dec 04, 2021 | Team Udayavani |

04-12-2021

Advertisement

ಮೇಷ: ಆರೋಗ್ಯ ವೃದ್ಧಿ. ನಿರೀಕ್ಷಿತ ಧನಾಗಮ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಭೂಮಿ ವಾಹನಾದಿ ಆಸ್ತಿ ವಿಚಾರದಲ್ಲಿ ಅಭಿವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ. ಹಿರಿಯರ ಆರೋಗ್ಯ ಗಮನಿಸಿ.

ವೃಷಭ: ಆರೋಗ್ಯದಲ್ಲಿ ಅನುಕೂಲಕರ ಪರಿಸ್ಥಿತಿ. ಧಾರ್ಮಿಕ ಕೆಲಸ ಕಾರ್ಯಗಳಿಗೆ ಧನವ್ಯಯ. ಮಾನಸಿಕ ನೆಮ್ಮದಿ. ಉದ್ಯೋಗದಲ್ಲಿ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗುವುದು.

ಮಿಥುನ: ಆರೋಗ್ಯದಲ್ಲಿ ಉದಾಸೀನತೆ ಮಾಡದಿರಿ. ಪಾಲುದಾರಿಕಾ ವ್ಯವಹಾರದಲ್ಲಿ ಎಚ್ಚರಿಕೆ ತಾಳ್ಮೆ ಅಗತ್ಯ. ಉದ್ಯೋಗ ನಿಮಿತ್ತ ಪ್ರಯಾಣ. ಧನಾಗಮನಕ್ಕೆ ಕೊರತೆ ಇರದು. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ.

ಕರ್ಕ: ಪರರಿಗೆ ಸಹಾಯ ಮಾಡುವಾಗ ಎಚ್ಚರವಿರಲಿ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ ಪ್ರೋತ್ಸಾಹ. ಉದ್ಯೋಗ ವ್ಯವಹಾರದಲ್ಲಿ ಅನಿರೀಕ್ಷಿತ ಧನಾಗಮನ ಅಭಿವೃದ್ಧಿ. ಸಾಂಸಾರಿಕ ಸುಖದಲ್ಲಿ ವೃದ್ಧಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

Advertisement

ಸಿಂಹ: ದೇವತಾ ಸ್ಥಳ ಸಂದರ್ಶನ ದೂರ ಪ್ರಯಾಣ. ಕಾರ್ಯಕ್ಷೇತ್ರದಲ್ಲಿ ಅತೀ ಶ್ರಮ ವಹಿಸಿ ನಿರೀಕ್ಷಿತ ಗುರಿ ಸಾಧನೆ. ಉನ್ನತ ಸ್ಥಾನ ಸುಖಕ್ಕಾಗಿ ಆರ್ಥಿಕ ವ್ಯಯ. ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖ ಉತ್ತಮ.

ಕನ್ಯಾ: ಅನಿರೀಕ್ಷಿತ ಪ್ರಯಾಣ. ದೂರದ ವ್ಯವಹಾರದಲ್ಲಿ ಪ್ರಗತಿ. ಜಲೋತ್ಪನ್ನ ವಸ್ತುಗಳಿಂದ ಅಧಿಕ ಲಾಭ. ಸಾಂಸಾರಿಕ ವಿಚಾರದಲ್ಲಿ ತಾಳ್ಮೆ ಸಹನೆ ಅಗತ್ಯ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ವಿದ್ಯಾರ್ಥಿಗಳಿಗೆ ಕಾರ್ಯ ಸಫ‌ಲತೆ.

ತುಲಾ: ಆರೋಗ್ಯದಲ್ಲಿ ನಿರ್ಲಕ್ಷ್ಯ ಸಲ್ಲದು. ಉತ್ತಮ ಧನಾರ್ಜನೆ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ. ಗೃಹೋಪ ವಸ್ತುಗಳ ಸಂಗ್ರಹ. ಭೂಮಿ, ವಾಹನಾದಿ ವಿಚಾರದಲ್ಲಿ ಪ್ರಗತಿ. ಮನೆಯಲ್ಲಿ ಸಂತಸದ ವಾತಾವರಣ.

ವೃಶ್ಚಿಕ: ನೂತನ ಮಿತ್ರರ ಸಮಾಗಮ. ಗುರುಹಿರಿಯರ ಆಶೀರ್ವಾದ. ಬಹಳ ಸಮಯ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ. ಗೌರವದಿಂದ ಕೂಡಿದ ಧನಾರ್ಜನೆ. ಹಿರಿಯರ ಆರೋಗ್ಯ ವೃದ್ಧಿ.

ಧನು: ಉತ್ತಮ ವ್ಯಕ್ತಿಗಳ ಒಡನಾಟದಿಂದ ಆತ್ಮಸ್ಥೆರ್ಯವೃದ್ಧಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ನಿರೀಕ್ಷಿತ ಧನ ಪ್ರಾಪ್ತಿ. ವಿದ್ಯಾರ್ಥಿಗಳು ಅಧಿಕ ಶ್ರಮ ವಹಿಸಿ ಕಾರ್ಯ ಸಾಧಿಸಿಕೊಳ್ಳಬೇಕಾದ ಪರಿಸ್ಥಿತಿ.

ಮಕರ: ಪರರಿಗೆ ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ. ತಾಳ್ಮೆ ವಿವೇಕತೆಯಿಂದ ಕಾರ್ಯ ಸಾಧಿಸಿ ಕೊಳ್ಳಿ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ಸುಖ. ಉತ್ತಮ ಧನಾಗಮ ವಿದ್ದರೂ ಖರ್ಚಿಗೆ ಹಲವಾರು ದಾರಿ. ಗೃಹದಲ್ಲಿ ಸಂತಸ.

ಕುಂಭ: ಅನ್ಯರ ಸಹಾಯವನ್ನು ಅಪೇಕ್ಷಿಸದೆ ಸ್ವಂತ ಪ್ರಯತ್ನದಿಂದ ನಿರೀಕ್ಷಿತ ಕಾರ್ಯ ಸಾಧಿಸಿಕೊಳ್ಳಿ. ಉತ್ತಮ ಧನಾರ್ಜನೆ. ಭೂಮಿ, ಕಟ್ಟಡಾದಿ ವ್ಯವಹಾರದಲ್ಲಿ ಪ್ರಗತಿ. ಬಂಧುಗಳ ಮಿಲನ. ಸಾಂಸಾರಿಕ. ಸಾಂಸಾರಿಕ ಸುಖ ವೃದ್ಧಿ.

ಮೀನ: ಪಾಲುದಾರಿಕಾ ವ್ಯವಹಾರದಲ್ಲಿ ತಾಳ್ಮೆ ಸಹನೆಯಿಂದ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಆಲೋಚಿಸಿ ನಿರ್ಣಯ ಮಾಡುವುದರಿಂದ ಯಶಸ್ಸು. ಮನೆಯ ವಾತಾವರಣದಲ್ಲಿ ಹೆಚ್ಚಿನ ಚರ್ಚೆಗೆ ಆದ್ಯತೆ ನೀಡದಿರಿ.

 ಜಯತೀರ್ಥ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next