Advertisement

ಶನಿವಾರದ ರಾಶಿಫಲ : ಇಲ್ಲಿದೆ ನಿಮ್ಮ ಗ್ರಹಬಲ

08:06 AM Sep 18, 2021 | Team Udayavani |

ಮೇಷ: ವಿದ್ಯಾ ಜ್ಞಾನ ವೃದ್ಧಿ. ನಾಯಕತ್ವ ಗುಣಗಳಿಂದ ಕಾರ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಂದ ಗೌರವ. ಭಾೃತೃ, ಮಾತೃ ಸಮಾನರಿಂದ ಪ್ರೋತ್ಸಾಹ. ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ. ಪ್ರಯಾಣ ಸುಖಕರ. ಭೂ ವ್ಯವಹಾರಕ್ಕೆ ಯೋಗ್ಯ.

Advertisement

ವೃಷಭ: ಉದ್ಯೋಗದಲ್ಲಿ ಉತ್ತಮ ಬದಲಾವಣೆಗೆ ಅವಕಾಶ. ಸ್ವಾವಲಂಬಿಗಳಾಗಿ ಕಾರ್ಯ ಸಾಧಿಸುವ ಕಾಲ. ನೂತನ ಮಿತ್ರರ ಸಮಾಗಮ. ಗೃಹೋಪವಸ್ತು ಸಂಗ್ರಹ. ವಿದ್ಯಾರ್ಥಿಗಳಿಗೆ, ದಂಪತಿಗಳಿಗೆ, ಕೃಷಿ ಹೈನುಗಾರರಿಗೆ ಶುಭ ಫ‌ಲ.

ಮಿಥುನ: ಸಂಚಾರದಿಂದ ನಿರೀಕ್ಷಿತ ಸಫ‌ಲತೆ. ಉತ್ತಮ ಧನಾರ್ಜನೆ. ದಂಪತಿಗಳಲ್ಲಿ ಅನುರಾಗ ಪ್ರೋತ್ಸಾಹ. ಉದಾರತೆಯಿಂದ ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪರಾಕ್ರಮ ಪ್ರದರ್ಶನದಿಂದ ಜನಮನ್ನಣೆ ಗೌರವ ಪ್ರಾಪ್ತಿ.

ಕರ್ಕ: ಧಾರ್ಮಿಕ ಸಾಮಾಜಿಕ ಆರ್ಥಿಕ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡದೇ ತಾಳ್ಮೆ ಸಮಾಧಾನದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಆರೋಗ್ಯದ ಕಡೆಗೆ ಗಮನ ಹರಿಸಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ.

ಸಿಂಹ: ದೈಹಿಕ ಮಾನಸಿಕ ಒತ್ತಡವಿದ್ದರೂ ಕಾರ್ಯಕ್ಷೇತ್ರದಲ್ಲಿ ಸಫ‌ಲತೆ. ನಿರೀಕ್ಷಿತ ಧನಾಗಮ, ಸಹೋದರಾದಿ ಸಮಾನರಿಂದಲೂ, ಕಾರ್ಮಿಕರಿಂದಲೂ ಸುಖ ಲಭಿಸುವ ದಿನ. ಸಹಾಯ ಮಾಡುವಾಗ ಎಚ್ಚರಿಕೆ. ವಿದ್ಯಾರ್ಥಿಗಳಿಗೆ ಅನುಕೂಲಕರ.

Advertisement

ಕನ್ಯಾ: ಉತ್ತಮ ಅಭಿವೃದ್ಧಿ ಇದ್ದರೂ ಆರ್ಥಿಕ ವಿಚಾರದಲ್ಲಿ ಹಿಡಿತವಿರಲಿ. ದಾಕ್ಷಿಣ್ಯ ಪ್ರವೃತ್ತಿಯಿಂದ ಧನ ನಷ್ಟವಾಗುವ ಸಂಭವ. ಪಾಲುದಾರಿಕೆ ವ್ಯವಹಾರಸ್ಥರಿಗೆ ಉತ್ತಮ ಫ‌ಲಿತಾಂಶ ಲಭಿಸುವ ಅವಕಾಶ. ಸಾಂಸಾರಿಕ ಸುಖ.

ತುಲಾ: ಆರೋಗ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ವ್ಯಾಪಾರಸ್ಥರಿಗೆ, ಉದ್ಯೋಗಸ್ಥರಿಗೆ ಸರಿಯಾದ ಮನ್ನಣೆ ದೊರೆತು ಸುಖ ಸಂತೋಷದಿಂದ ಸಂಭ್ರಮಿಸುವ ಸಮಯ. ನೂತನ ಮಿತ್ರರ ಸಮಾಗಮ. ಅವಿವಾಹಿತರಿಗೆ ಕಂಕಣಭಾಗ್ಯ.

ವೃಶ್ಚಿಕ: ಉದಾರತೆ ದೈರ್ಯ ವಿವೇಚನೆ ಪರಾಕ್ರಮ ನಾಯಕತ್ವ ಗುಣದಿಂದ ಜನಮನ್ನಣೆ. ಉದ್ಯೋಗಸ್ಥರಿಗೆ ವ್ಯವಹಾರಸ್ಥರಿಗೆ ಪ್ರಗತಿ. ಎಲ್ಲರ ಪ್ರೀತಿ ಸಂಪಾದಿಸುವ ಸಮಯ. ನಿರೀಕ್ಷಿತ ಧನ ಸಂಪಾದನೆ. ಅಧ್ಯಯನಶೀಲರಿಗೆ ಅನುಕೂಲ.

ಧನು: ಆರೋಗ್ಯ ವಿಚಾರದಲ್ಲಿ ಗಮನಿಸಿ. ಗುರುಹಿರಿಯರೊಂದಿಗೆ ತಾಳ್ಮೆ ಸಮಾಧಾನದಿಂದ ವ್ಯವಹರಿಸಿ ಪ್ರಯಾಣದಿಂದ ಶುಭ ಫ‌ಲ. ಗೃಹೋಪಕರಣಗಳಿಗೆ ಧನ ವ್ಯಯ. ವ್ಯಾಪಾರಿಗಳಿಗೆ, ಉದ್ಯೋಗಸ್ಥರಿಗೆ ತೃಪ್ತಿದಾಯಕ.

ಮಕರ: ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ತಿಳಿದು ಕಾರ್ಯ ನಿರ್ವಹಿಸಿ. ದೂರ ಪ್ರಯಾಣ ಅನಾನುಕೂಲ. ಖರ್ಚಿನಲ್ಲಿ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫ‌ಲತೆ. ವಿದೇಶದಲ್ಲಿ ವ್ಯವಹರಿಸುವಾಗ ಜಾಗ್ರತೆ.

ಕುಂಭ: ನಿರೀಕ್ಷಿತ ಧನಾಗಮವಿದ್ದರೂ ಖರ್ಚಿಗೆ ಹಲವಾರು ದಾರಿಗಳು ತೋರೀತು. ನೂತನ ಮಿತ್ರರ ಸಂಪರ್ಕವನ್ನು ಸರಿಯಾಗಿ ಉಪಯೋಗಿಸಿದರೆ ಪ್ರಗತಿ. ಪ್ರಯಾಣ ಲಾಭಕರ. ಆಹಾರೋದ್ಯಮಕ್ಕೆ ಅನುಕೂಲಕರ ಸಮಯ.

ಮೀನ: ಮಾನಸಿಕ ಆರೋಗ್ಯ ಸದೃಢವಾಗಿದ್ದರೂ ದೈಹಿಕ ಆರೋಗ್ಯದ ಬಗ್ಗೆ ಗಮನವಿರಲಿ. ದಾಂಪತ್ಯದಲ್ಲಿ ಸುಖ, ತೃಪ್ತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ನಿರಂತರ ಧನಾರ್ಜನೆ, ಆಲೋಚನೆಗೆ ತಕ್ಕಂತೆ ಕಾರ್ಯ ನಿರ್ವಹಿಸಿ ಸಫ‌ಲತೆ.

Advertisement

Udayavani is now on Telegram. Click here to join our channel and stay updated with the latest news.

Next