Advertisement

ಭಾರಿ ಮಳೆ: ದ.ಕನ್ನಡ ಜಿಲ್ಲಾ ಶಾಲೆಗಳಿಗೆ ಶನಿವಾರ ರಜೆ ಘೋಷಣೆ

09:16 AM Jul 20, 2019 | keerthan |

ಮಂಗಳೂರು: ಕರ್ನಾಟಕ  ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಶನಿವಾರ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಆದೇಶ ಹೊರಡಿಸಿದ್ದಾರೆ.

ಶನಿವಾರದಿಂದ ಸೋಮವಾರದವರೆಗೆ ಪ್ರತಿದಿನ 200 ಮಿಲಿ ಮೀಟರ್ ಗಿಂತ ಮೇಲ್ಪಟ್ಟು ಮಳೆಯಾಗುವ ನಿರೀಕ್ಷೆಯಿದ್ದು, ಮೀನುಗಾರರು ಕಡ್ಡಾಯವಾಗಿ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನಲೆಯಲ್ಲಿ ತುರ್ತು ಸೇವೆಗಾಗಿ ಟೋಲ್‌ ಫ್ರೀ ಸಂಖ್ಯೆ ನೀಡಲಾಗಿದೆ.  ತುರ್ತು ಸೇವೆಯ ಕಂಟ್ರೋಲ್‌ ರೂಮ್‌ 24*7 ಕಾರ್ಯನಿರ್ವಹಿಸಲಿದೆ.

ಕಂಟ್ರೋಲ್‌ ರೂಮ್‌ – 1077

Advertisement

ವ್ಯಾಟ್ಸಪ್‌ ಸಂಖ್ಯೆ; 9483908000

Advertisement

Udayavani is now on Telegram. Click here to join our channel and stay updated with the latest news.

Next