Advertisement
ಬೇಗೂರು ಕೆರೆ ಅಭಿವೃದ್ಧಿಗೆ 2018 ರ ಮಾರ್ಚ್ 17 ರಂದು ಅಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದ್ದರು. ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಸಲು ಸೂಚನೆ ನೀಡಲಾಗಿತ್ತು. ಆದರೆ ಕೆರೆ ಅಭಿವೃದ್ದಿ ಬದಲು ಕೆರೆಯ ಮಧ್ಯದಲ್ಲಿ ಕೃತಕ ದ್ವೀಪ ನಿರ್ಮಾಣ ಮಾಡಿ ಅಲ್ಲಿ ಶಿವನ ವಿಗ್ರಹ ಸ್ಥಾಪಿಸಲು ಬಿಬಿಎಂಪಿ ಮುಂದಾಗಿತ್ತು. ಇದು ಕೆರೆಯ ಸ್ವರೂಪವನ್ನು ಹಾಳು ಮಾಡುವುದಲ್ಲದೆ, ಕೆರೆಯ ವಿಸ್ತೀರ್ಣ ಮತ್ತು ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂಬ ಆತಂಕದಿಂದ ಕೆಲ ಪರಿಸರ ಹೋರಾಟಗಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
Related Articles
Advertisement
ಇದೇ ವೇಳೆ ಮಧ್ಯಪ್ರವೇಶಿಸಿದ್ದ ಶಾಸಕ ಸತೀಶ್ ರೆಡ್ಡಿ,ಹಿಂದೂಗಳ ಭಾವನೆಯನ್ನು ಅನ್ಯ ಕೋಮಿನವರು ಗೌರವಿಸಿ ಸಹಕಾರ ನೀಡಬೇಕು. ದೇಶದ ಎಲ್ಲ ನದಿ ತೀರದಲ್ಲಿ ಶಿವನ ದೇಗುಲಗಳು ಎದ್ದು ನಿಂತಿವೆ. ಇದರಿಂದಾಗಿ ಆ ಪ್ರದೇಶಕ್ಕೆ ಹೆಸರು ಬರುತ್ತದೆ. ಹೀಗಾಗಿ ನಾಗನಾಥೇಶ್ವರ ದೇವಸ್ಥಾನ ಇತಿಹಾಸ ಅರಿತು ಈ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದರು. ಅದಲ್ಲದೆ ಪೊಲೀಸ್ ವಶದಲ್ಲಿದ್ದ ಹುಡುಗರನ್ನೂ ಬಿಡುಗಡೆ ಮಾಡಿಸಿದ್ದರು ಎನ್ನಲಾಗಿದೆ.