Advertisement

ಮುಂಬರುವ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುನ್ನವೇ ಅಭ್ಯರ್ಥಿಯ ಘೋಷಣೆ: ಸತೀಶ್ ಜಾರಕಿಹೊಳಿ

08:00 PM Jul 28, 2021 | Team Udayavani |

ಬೈಲಹೊಂಗಲ:  ಮುಂಬರುವ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುನ್ನವೇ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು. ಅವರ ನಾಯಕತ್ವದಡಿ ಆಯಾ ಮತಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಜ್ಜಾಗಬೇಕು. ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

Advertisement

ತಾಲೂಕಿನ ನೇಸರಗಿ ಗ್ರಾಮದ ಗ್ರಾಮದೇವತೆ ದೇವಸ್ಥಾನದಲ್ಲಿ ಬುದುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ ಯೋಧರ ಬಗ್ಗೆ ಕಾಳಜಿ ಇತ್ತು. ಆದರೆ ಕೇಂದ್ರದಲ್ಲಿ ಆಡಳಿತ ನಡೆಸುವ ಬಿಜೆಪಿ ಸರಕಾರಯೋಧರನ್ನು ನಿರ್ಲಕ್ಷಿಸುತ್ತಿದೆ. ಬರುವ ಎರಡು ವರ್ಷದಲ್ಲಿ ರಾಜ್ಯದಲ್ಲಿ ಮತ್ತು ಆರು ತಿಂಗಳಲ್ಲಿ ಜಿ.ಪಂತಾ.ಪಅ ಚುನಾವಣೆ ನಡೆಯಯಲಿದ್ದು ಕಾಂಗ್ರೆಸ್‌ನ್ನು ಬಹುಮತದಿಂದ ಆರಿಸಿ ತರಲು ಇಂದಿನಿಂದಲೇ ಪ್ರಯತ್ನಿಸಬೇಕು. ಎದುರಾಳಿ ಪಕ್ಷದವರಿಗೆ ತಕ್ಕ ಉತ್ತರ ನೀಡಲು ಕಾರ್ಯಕರ್ತರು ಸನ್ನದ್ದರಾಗಬೇಕೆಂದರು.

ಇದನ್ನೂ ಓದಿಕೌರಿ ಗ್ರಾಮದಲ್ಲಿ ಮಳೆಯ ರುದ್ರ ನರ್ತನ : ಕೊಚ್ಚಿ ಹೋದ ಮೋರಿ, ಬೆಳೆ ನಾಶ

ಕಳೆದ 7 ವರ್ಷಗಳಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮೋದಿ ಸರ್ಕಾರ ಜನಸಾಮಾನ್ಯರ ಜೀವನ ಸುಧಾರಿಸುವ ಕೆಲಸ ಮಾಡುತ್ತಿಲ್ಲ. ಆದರೂ, ಬಿಜೆಪಿಯವರು ಸುಳ್ಳುಪ್ರಚಾರ ಮಾಡಿ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಯಾವ ಪಕ್ಷ ಉತ್ತಮ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಈಗಿನ ಯುವಕರು ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಯುವಕರಿಗೆ ಮತದಾನದ ಹಕ್ಕನ್ನು ನೀಡಿದ್ದೇ ಕಾಂಗ್ರೆಸ್ ಎಂಬುದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, 21 ವರ್ಷವಿದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದ್ದರು.ಇದರಿಂದ 18 ವರ್ಷ ಮೇಲ್ಪಟ್ಟ ಯುವಕರಿಗೂ ಮತದಾನದ ಹಕ್ಕು ಸಿಗುವಂತಾಯಿತು ಎಂದರು.

Advertisement

ಕಾಅಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ, ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ, ನ್ಯಾಯವಾದಿ ರಾಜಶೇಖರ ಯತ್ತಿನಮನಿ, ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಬಾಳಾಸಾಹೇಬ ದೇಸಾಯಿ,ಮುಖಂಡರಾದ ಹಬೀಬ ಶಿಲೇದಾರ್, ಎಪಿಎಂಸಿ ಅಧ್ಯಕ್ಷ ಭರಮಣ್ಣ ಸತ್ಯಣ್ಣವರ,ನಿಂಗಪ್ಪ ತಳವಾರ, ಬಸವರಾಜ ಚಿಕ್ಕನಗೌಡರ,ವೀರಪಾಕ್ಷ ವಾಲಿ, ಸತಾರ ಮೋಕಾಶಿ , ರಮೇಶರಾಯಪ್ಪಗೋಳ, ಶಂಕರ ತಿಗಡಿ,ಗ್ರಾ.ಪಂ ಅಧ್ಯಕ್ಷೆ ಶೋಭಾ ಮೂಲಿಮನಿ, ಗೀತಾ ಖಂಡ್ರಿ, ಕವಿತಾತೋಟಗಿ, ಶಕುಂತಲಾ ಹಮ್ಮನ್ನವರ,ಯಮನಪ್ಪಪೂಜೇರಿ,ಮಹಾಂತೇಶ ಸತ್ತಿಗೇರಿ,ಮಂಜುನಾಥ ಹುಲಮನಿ  ಸೋಮನ್ನವರ,ಸುರೇಶ ಅಗಶಿಮನಿ, ಸಿದ್ದಿಕ ಬಾಗವಾನ ಇನ್ನಿತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next