Advertisement

Belagavi: ಒಳ್ಳೆಯ ಕೆಲಸ ಮಾಡುವವರಿಗೆ ಬೆದರಿಕೆಗಳು ಬರುತ್ತಲೇ ಇರುತ್ತವೆ: ಸತೀಶ್ ಜಾರಕಿಹೊಳಿ

12:27 PM Sep 13, 2023 | Team Udayavani |

ಬೆಳಗಾವಿ: ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಜೀವ ಬೆದರಿಕೆಯ ಪತ್ರ ಬಂದಿರುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

Advertisement

ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪಕ್ಕೆ ಭೇಟಿ ನೀಡಿ, ನಿಜಗುಣಾನಂದ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಮಾಜ ಪರಿವರ್ತನೆ ಮಾಡುವವರು, ಪ್ರಗತಿಪರ ಚಿಂತಕರಿಗೆ ಜೀವ ಬೆದರಿಕೆಗಳು ಬರುತ್ತಲೆ ಇವೆ. ಆದರೆ ನನಗೆ ಯಾವುದೇ ಜೀವ ಬೆದರಿಕೆಗಳು ಬಂದಿಲ್ಲ ಎಂದರು. ಈ ರೀತಿಯ ಜೀವ ಬೆದರಿಕೆಗಳು ಬಂದಾಗ, ಸರ್ಕಾರ, ಕಾನೂನು, ಪೋಲೀಸ್ ಇಲಾಖೆ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿಯ ಪರಿಸ್ಥಿತಿ ಎದುರಾಗುತ್ತದೆ. ನಾವು ಜಾಗೃತರಾಗಿರಬೇಕು. ಹೋರಾಟವನ್ನು ಮುಂದುವರೆಸಬೇಕು. ನಿಜಗುಣಾನಂದ ಸ್ವಾಮೀಜಿ ಬಸವತತ್ವಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ನಾವೂ ಬುದ್ದ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಅವರ ಹೋರಾಟ, ನಮ್ಮ ಹೋರಾಟ ಒಂದೇ ಆಗಿರುವುದರಿಂದ ನಾನು ಪದೇ ಪದೇ ಶ್ರೀಗಳನ್ನು‌ ಭೇಟಿ ಆಗುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ: Army Dog: ಸೈನಿಕನ ಪ್ರಾಣ ರಕ್ಷಿಸಿ ಎನ್ ಕೌಂಟರ್ ಗೆ ಬಲಿಯಾದ ಸೇನೆಯ ಶ್ವಾನ

Advertisement

Udayavani is now on Telegram. Click here to join our channel and stay updated with the latest news.

Next