Advertisement

ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ ಈಗ ಅಪ್ರಸ್ತುತ : ಸತೀಶ ಜಾರಕಿಹೊಳಿ 

05:56 PM Jan 01, 2021 | Team Udayavani |

ಬೆಳಗಾವಿ :  ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ ಈಗ  ಅಪ್ರಸ್ತುತ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ  ಹೇಳಿದರು.

Advertisement

ಕಾಂಗ್ರೆಸ್ ಭವನದಲ್ಲಿ  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಸಾಮೂಹಿಕ  ನಾಯಕತ್ವದಲ್ಲಿ  ಮುಂದಿನ  ಚುನಾವಣೆ ಎದುರಿಸಿ ಪಕ್ಷ ಅಧಿಕಾರಕ್ಕೆ ತರಲಾಗುವುದು ನಂತರ ಶಾಸಕಾಂಗ ಸಭೆಯಲ್ಲಿ  ಹಾಗೂ ಹೈಕಮಾಂಡ್ ನಲ್ಲಿ ಮುಂದಿನ ಸಿಎಂ ಯಾರಾಗಬೇಕು ಎಂದು ನಿರ್ಧರಿಸಲಾಗುತ್ತದೆ ಎಂದರು.

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಭಿನ್ನಾಭಿಪ್ರಯವಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ಅವರಲ್ಲಿ ಏನೇ ಬಿನ್ನಾಬಿಪ್ರಾಯ ಇದ್ದರೂ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಕಾರ್ಯಕರ್ತರ ಮೇಲೆ ಪಕ್ಷ ನಡೆಯುತ್ತದೆ ಎಂದು ಸ್ಪಷ್ಟವಾಗಿ ಹೇಳಿದರು.

ಸಿಎಂ ಇಬ್ರಾಹಿಂ ಅವರೊಂದಿಗೆ ನಾನು  ಈಗಾಗಲೇ ಚರ್ಚೆ ಮಾಡಿದ್ದೇನೆ. ಅವರು ಪಕ್ಷ ಬಿಟ್ಟು ಎಲ್ಲಿಯೂ ಹೋಗಲ್ಲ. ನಮ್ಮ ಜತೆಯೇ ಇರಲಿದ್ದಾರೆ.  ಸಿಎಂ ಇಬ್ರಾಹಿಂ ಅವರು ಪಕ್ಷದೊಳಗಿನ  ಕೆಲವು ಸಮಸ್ಯೆಗಳು  ಬಗ್ಗೆ ಹೇಳಿದ್ದಾರೆ. ಅವುಗಳನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಪಕ್ಷದ ಚಿಹ್ನೆ ಮೇಲೆ   ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಎದುರಿಸುವ ಸಂಬಂಧ ಕಮಿಟಿ ರಚನೆ ಮಾಡಲಾಗಿದೆ.  ಈಗಾಗಲೇ ಒಂದು ಬಾರಿ ಸಭೆ ನಡೆಸಲಾಗಿದ್ದು,  ಕೆಲವರು  ಪಕ್ಷದ ಚಿಹ್ನೆ ಬೇಕು ಎಂದರೆ ಇನ್ನು ಕೆಲವರು ಬೇಡ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಚಾರದಲ್ಲಿ ಗೊಂದಲವಿದ್ದು, ಹೈಕಮಾಂಡ್ ನಿರ್ಧಾರ ಏನು ಬರಲಿದೆ ಎಂದು ಕಾಯ್ದು ನೋಡೋಣ.  ಸದ್ಯ ನಮ್ಮ ಚುನಾವಣೆ ತಯಾರಿ ನಡೆಯುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next