Advertisement

ಗಣೇಶ ಹುಕ್ಕೇರಿ ತಮಾಷೆಮಾಡಿದ್ದಾರೆ: ಜಾರಕಿಹೊಳಿ

06:38 AM Jan 14, 2019 | |

ಬೆಳಗಾವಿ: ಬಿಜೆಪಿ ಸೇರ್ಪಡೆ ಬಗ್ಗೆ ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಮೊಬೈಲ್‌ನಲ್ಲಿ ತಮಾಷೆಗಾಗಿ ಮಾತನಾಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅರಣ್ಯ ಹಾಗೂ ಪರಿಸರ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾರಣಿಗಳು ಆಗಾಗ ತಮಾಷೆ ಮಾಡುತ್ತಾರೆ. ಅದನ್ನೇ ಸೀರಿಯಸ್‌ ಆಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ. ಬಹಳಷ್ಟು ಜನ ಚೇಷ್ಟೆ ಮಾಡುತ್ತಿರುತ್ತಾರೆ. ಇದು ನಿಜ ಆಗುವುದಿಲ್ಲ. ಗಣೇಶ ಹುಕ್ಕೇರಿಯೂ ಅದೇ ರೀತಿ ಮಾತನಾಡಿದ್ದಾರೆ. ಅವರಿಗೆ ಯಾವುದೇ ಅಸಮಾಧಾನವಿಲ್ಲ. ಕಾಂಗ್ರೆಸ್‌ನ ಯಾವೊಬ್ಬ ಶಾಸಕರೂ ಪಕ್ಷ ಬಿಡುವುದಿಲ್ಲ. ರಮೇಶ ಜಾರಕಿಹೊಳಿ ವಿಷಯಕ್ಕೂ ಹಾಗೂ ಗಣೇಶ ಹುಕ್ಕೇರಿ ವಿಷಯಕ್ಕೂ ವ್ಯತ್ಯಾಸವಿದೆ. ಅದಕ್ಕೂ, ಇದಕ್ಕೂ ಹೋಲಿಕೆ ಮಾಡುವುದು ಬೇಡ. ಗಣೇಶ ಅವರ ತಂದೆ ಸಂಸದರಿದ್ದಾರೆ. ಗಣೇಶಗೂ ಪಕ್ಷದಲ್ಲಿ ಉನ್ನತ ಸ್ಥಾನ ನೀಡಲಾಗಿದೆ. ಹೀಗಾಗಿ, ಪಕ್ಷ ಬಿಡುವ ಪ್ರಶ್ನೆಯೇ ಬರುವುದಿಲ್ಲ. ಕಡೋಲಿಯಲ್ಲಿ ಗಣೇಶ ಹಾಗೂ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವು ಎಂದರು.

ಬಿಜೆಪಿಯವರು ಏಳು ತಿಂಗಳಿಂದ ಇದನ್ನೇ ಹೇಳುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರು ಅಮಿತ್‌ ಶಾ ಜೊತೆಗಿದ್ದಾರೆ, ಮೋದಿ ಜೊತೆಗಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರಾದರೂ ದೊಡ್ಡ ಮೊತ್ತ ಕೊಡುತ್ತಾರೆ ಎಂದಾಗ ಕೆಲವು ಯೋಚನೆ ಮಾಡುತ್ತಾರೆ. ಇನ್ನೂ ಯಾರೂ ಹೋಗಿಲ್ಲ. ಪಕ್ಷ ಬಿಟ್ಟು ಯಾರಾದರೂ ಹೋದಾಗ ನೋಡೋಣ. ನಮ್ಮ ಪಕ್ಷವಂತೂ ಸುಭದ್ರವಾಗಿದೆ ಎಂದರು.

ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲ್ಲ: ತುಕಾರಾಮ
ತಾಳಿಕೋಟೆ: ಕಾಂಗ್ರೆಸ್‌ನ ಯಾವ ಶಾಸಕರೂ ಬಿಜೆಪಿ ಸೇರಲ್ಲ. ಎಲ್ಲ ಶಾಸಕರೂ ಒಂದಾಗಿದ್ದೇವೆ. ದೇಶದಲ್ಲಿ ಕಾಂಗ್ರೆಸ್‌ ಅಲೆಯಿದೆ. ಯಾರೋ ನಾಲ್ವರು ಶಾಸಕರು ಮುಂಬೈಗೆ ಹೋದರೆ ಅದು ಬಿಜೆಪಿ ಸೇರಲು ಅಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಮ ಹೇಳಿದರು.

ಭಾನುವಾರ ಮೂಕಿಹಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಯಕರಿಗೆ ಸಂಕ್ರಾಂತಿ ಶುಭಾಶಯ ಹೇಳಲು ಹೋಗಿರಬೇಕು. ಅದಕ್ಕೆ ಬೇರೆ ಅರ್ಥ ಕಲ್ಪಿಸಬಾರದು. ರಾಜ್ಯದ ಅಭಿವೃದ್ಧಿಗೆ ಹಗಲಿರುಳೆನ್ನದೇ ಮುಖ್ಯಮಂತ್ರಿಗಳು ದುಡಿಯುತ್ತಿದ್ದಾರೆ. ಅವರನ್ನು ಪ್ರಧಾನ ಮಂತ್ರಿಗಳು ಟೀಕಿಸುತ್ತಿರುವುದು ತರವಲ್ಲ. ಮೋದಿ ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next