Advertisement

ವಿದೇಶದಲ್ಲಿ ಕಾಲೇಜು ಸೇರ್ಪಡೆಗಾಗಿ ಎಸ್‌ಎಟಿ ಪರೀಕ್ಷೆ

01:20 PM Apr 03, 2019 | Naveen |

ಇತ್ತೀಚಿನ ದಿನಗಳಲ್ಲಿ ಕಾಲೇಜು ಸೇರಲು, ವಿವಿಧ ಕಾಲೇಜುಗಳ ಆಯ್ಕೆ, ವಿಷಯಗಳ ಆಯ್ಕೆ ಸೇರಿದಂತೆ ಇನ್ನಿತರ ಪ್ರಕ್ರಿಯೆಗಳಿಗೆ ವಿವಿಧ ಪರೀಕ್ಷೆ ನಡೆಯುತ್ತಿದೆ. ಕಾಲೇಜು ಬೋರ್ಡ್‌ ನಡೆಸುವ ಪ್ರಮುಖ ಪರೀಕ್ಷೆಗಳ ಪೈಕಿ ಪದವಿ ಪೂರ್ವ ಪ್ರವೇಶ ಪರೀಕ್ಷೆ ಕೂಡ ಒಂದು. ಇದನ್ನು ಎಸ್‌ಎಟಿ ಪರೀಕ್ಷೆ ಎಂದು ಕರೆಯಲಾಗುತ್ತದೆ.

Advertisement

ವಿದೇಶದ ಕಾಲೇಜುಗಳಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುವ ಉದ್ದೇಶದಿಂದ ಈ ಪರೀಕ್ಷೆಯನ್ನು ದೇಶ- ವಿದೇಶಗಳಲ್ಲಿ ನಡೆಸಲಾಗುತ್ತದೆ. ಎಸ್‌ ಎಟಿ ಪರೀಕ್ಷೆಯು ಆನ್‌ಲೈನ್‌ ಮುಖೇನ ನಡೆಯುತ್ತಿದ್ದು, ಮಂಗಳೂರಿನಿಂದಲೂ ಅನೇಕ ಮಂದಿ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಈ ಪರೀಕ್ಷೆಯು ಒಟ್ಟು 1,600 ಅಂಕಗಳಿಗೆ ನಡೆಯುತ್ತದೆ. ಆಂಗ್ಲ ಭಾಷೆ- 800 ಅಂಕ ಮತ್ತು ಗಣಿತ ಭಾಷೆಯಲ್ಲಿ 800 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಇದರಲ್ಲಿ 1,300 ಅಂಕ ಗಳಿಸಿದರೆ ವಿದೇಶದ ಉತ್ತಮ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯ.

ಈ ಪರೀಕ್ಷೆಯನ್ನು ವಿದೇಶಗಳಲ್ಲಿರುವ ವಿವಿಧ ಸ್ನಾತಕೋತ್ತರ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೂ ನಡೆಸಲಾಗುತ್ತದೆ. ಈ ರೀತಿಯ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಅಲ್ಲದೆ, ವಿದ್ಯಾರ್ಥಿಯ ಬುದ್ಧಿಮತ್ತೆ ತಿಳಿಯಲು ಕೂಡ ಸಹಕಾರಿಯಾಗುತ್ತದೆ. ಎಸ್‌ಎಟಿ ಪರೀಕ್ಷೆಯನ್ನು ನಡೆಸಲು ಅಮೆರಿಕದ ಎಲ್ಲ ವಿ.ವಿ.ಗಳು ಈಗಾಗಲೇ ಒಪ್ಪಿಕೊಂಡಿವೆ.

ಅದೇ ರೀತಿ ಭಾರತದ ನೂರಾರು ವಿ.ವಿ.ಗಳು, ಕಾಲೇಜುಗಳು ಕೂಡ ಸಮ್ಮತಿ ಸೂಚಿಸುತ್ತಿದ್ದು, ಅದರ ಪ್ರಕಾರ ಪರೀಕ್ಷೆ ನಡೆಸಲಾಗುತ್ತಿದೆ. ಎಸ್‌ಎಟಿ ಪರೀಕ್ಷೆಯ ನೋಂದಣಿ ದಿನಾಂಕವು ವಿವಿಧ ದೇಶಗಳ ವಿದ್ಯಾರ್ಥಿಗಳಿಗೆ ಭಿನ್ನವಾಗಿರುತ್ತದೆ.

Advertisement

ಅಂತಾರಾಷ್ಟ್ರೀಯ ವಿ.ವಿ., ಶಿಕ್ಷಣ ಸಂಸ್ಥೆಗಳು ಎಸ್‌ಎಟಿ ಪರೀಕ್ಷೆಯನ್ನು ಒಂದು ವರ್ಷದಲ್ಲಿ ಅಕ್ಟೋಬರ್‌, ಡಿಸೆಂಬರ್‌, ಮಾರ್ಚ್‌ ಮತ್ತು ಮೇ ತಿಂಗಳಿನಲ್ಲಿ ಒಟ್ಟಾರೆಯಾಗಿ ನಾಲ್ಕು ಬಾರಿ ನಡೆಸಲಾಗುತ್ತದೆ. ಎಸ್‌ಎಟಿ ಅಕ್ಟೋಬರ್‌ ಮತ್ತು ಡಿಸೆಂಬರ್‌ ತಿಂಗಳಿನ ಪರೀಕ್ಷೆಗೆ ಎ. 18ರಿಂದ ನೋಂದಣಿ ಆರಂಭಗೊಳ್ಳಲಿದೆ. ಮೇ ತಿಂಗಳ ಎಸ್‌ಎಟಿ ಪರೀಕ್ಷೆಗಳು ಮೇ 4ರಂದು ನಡೆಯಲಿದ್ದು, ಎ. 5ರ ಒಳಗಾಗಿ https://account.collegeboard. org/login/login ಆನ್‌ಲೈನ್‌ ಮುಖೇನ ನೋಂದಣಿ ಮಾಡಿಕೊಳ್ಳಬೇಕಿದೆ.

ವಿದ್ಯಾರ್ಥಿಗಳು ಎಸ್‌ಎಟಿ ಪರೀಕ್ಷೆ ಬರೆದ ಬಳಿಕ https:tudentscores.collegeboard.org ಅಂತರ್ಜಾಲ ತಾಣದಲ್ಲಿ ಪರೀಕ್ಷಾ ಅಂಕಗಳನ್ನು ನೋಡಬಹುದು. ಸಾಮಾನ್ಯವಾಗಿ ಪರೀಕ್ಷೆ ಬರೆದ ಎರಡು ವಾರಗಳ ಬಳಿಕ ಫಲಿತಾಂಶ ಹೊರಬರುತ್ತದೆ. ಎಸ್‌ಎಟಿ ಪರೀಕ್ಷೆ ಬರೆಯುವವರು ಇಂಗ್ಲಿಷ್‌ ಭಾಷೆಯ ಮೇಲೆ ಹೆಚ್ಚಿನ ಪರಿಣತಿ ಹೊಂದಿರಬೇಕಾಗುತ್ತದೆ.

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next