Advertisement
ಶಾಲಾ ಆವರಣಗಳ ಹಸುರೀಕರಣದ ಜತೆಗೆ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಮೂಡಿಸಲು ಶಿಕ್ಷಣ ಹಾಗೂ ಅರಣ್ಯ ಇಲಾಖೆ ಈ ಯೋಜನೆಯನ್ನು ಅನುಷ್ಠಾನ ಗೊಳಿಸುವ ಹೊಣೆ ಹೊತ್ತಿದ್ದವು. ವರ್ಷಕ್ಕೆ 50 ಲಕ್ಷ ಸಸಿಗಳಂತೆ 5 ವರ್ಷಗಳಲ್ಲಿ 2.5 ಕೋಟಿ ಸಸಿ ನೆಡುವ ಈ ಯೋಜನೆ ಮೊದಲ ವರ್ಷವೇ ಯೋಜನೆ ವಿಫಲವಾಗಿದೆ.
ರಾಜ್ಯಾದ್ಯಂತ ಸರಿಮಾರು 49 ಸಾವಿರ ಶಾಲೆಗಳಿದ್ದು, ಪ್ರತಿ ಶಾಲೆ ಆವರಣದಲ್ಲಿ ಗರಿಷ್ಠ 50 ಸಸಿ ನೆಡಬೇಕು. ಉತ್ತರ ಕರ್ನಾ ಟಕದ 17 ಜಿಲ್ಲೆಗಳಲ್ಲಿ ಗರಿಷ್ಠ 100 ಸಸಿ ನೆಡುವ ಗುರಿ ಕೊಡಲಾಗಿತ್ತು. ಅಲ್ಲದೆ ಪ್ರತಿ ಗಿಡಕ್ಕೂ ಜಿಯೋ ಟ್ಯಾಗ್ ಮಾಡಬೇಕು, 5 ವರ್ಷಗಳ ಬಳಿಕ ಆಡಿಟ್ ಮಾಡಬೇಕು ಅಂದರೆ ಯಾವ್ಯಾವ ಶಾಲೆಗಳ ಆವರಣದಲ್ಲಿ ಎಷ್ಟೆಷ್ಟು ಗಿಡ ನೆಡಲಾಗಿದೆ? ನೆಟ್ಟವುಗಳ ಪೈಕಿ ಉಳಿದವು ಎಷ್ಟು? ಪೋಷ ಣೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಇತ್ಯಾದಿ ಮಾಹಿತಿಯನ್ನು ಡಿಡಿಪಿಐಗಳಿಂದ ಕೇಳಲಾಗಿತ್ತು. ಎಲ್ಲಿ ಹೋದವು 60 ಸಾವಿರ ಸಸಿ?
ನೆಟ್ಟ ಗಿಡಗಳ ಬಗೆಗಿನ ಪ್ರತಿಯೊಂದು ಮಾಹಿತಿಯನ್ನೂ ಸಸ್ಯ ಶ್ಯಾಮಲಾ ಪೋರ್ಟ ಲ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಡಿಡಿಪಿಐಗಳಿಗೆ ಸೂಚಿಸಲಾಗಿತ್ತಾದರೂ ಪೂರ್ಣವಾಗಿ ಮಾಡಿಲ್ಲ. ಪ್ರೌಢಶಾಲೆಗಳ ಆವರಣದಲ್ಲಿ ನೆಡುವ ಸಲುವಾಗಿ ಅರಣ್ಯ ಇಲಾಖೆಯಿಂದ 4,39,310 ಸಸಿ ಪಡೆದಿ ರುವುದಾಗಿ ಪೋರ್ಟಲ್‌ನಲ್ಲಿ ಇಂಡೀಕರಿಸಿದ್ದು, ಈ ಪೈಕಿ 3,79,109 ಸಸಿ ಗಳನ್ನು ನೆಟ್ಟಿರುವುದಾಗಿ ಅಪ್‌ಲೋಡ್ ಮಾಡಲಾಗಿದೆ. ಹಾಗಿದ್ದರೆ ಅರಣ್ಯ ಇಲಾಖೆ ಯಿಂದ ಪಡೆದ 60,201 ಸಸಿಗಳು ಏನಾ ದವು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
Related Articles
Advertisement
ಯೋಜನೆಗೆ ಹಿನ್ನಡೆ ಆಗಿದ್ದೇಕೆ?ಬಜೆಟ್‌ನಲ್ಲಿ ಘೋಷಣೆಯಾದ ಕೆಲವೇ ಸಮಯದಲ್ಲಿ ಶಿಕ್ಷಣ ಮತ್ತು ಅರಣ್ಯ ಇಲಾಖೆಗಳಲ್ಲಿ ಕ್ರಮ ತೆಗೆದುಕೊಳ್ಳಲಿಲ್ಲ. ಎರಡೂ ಇಲಾಖೆಗಳು ಸಸ್ಯಶ್ಯಾಮಲಾ ಯೋಜನೆಗೆ ಮಾರ್ಗಸೂಚಿ ರೂಪಿಸಿದ್ದೇ ಸೆಪ್ಟಂಬರ್ ತಿಂಗಳಲ್ಲಿ. ಆ ವೇಳೆಗಾಗಲೇ ರಾಜ್ಯಾದ್ಯಂತ ಬರಗಾಲ ಆವರಿಸಿತ್ತು. ಅಲ್ಲದೆ, ಶಾಲೆಗಳ ಆವರಣದಲ್ಲಿ ಗಿಡ ನೆಡಲು ಸ್ಥಳಗಳನ್ನೂ ಗುರುತಿಸದೆ ಯೋಜನೆ ಘೋಷಿಸಿದ್ದು ಹಿನ್ನಡೆಗೆ ಕಾರಣವಾಗಿದೆ ಎಂದು ಇಲಾಖೆ ಉನ್ನತಾಧಿಕಾರಿಗಳು ತಿಳಿಸುತ್ತಾರೆ. ಪ್ರತಿ ಶಾಲೆ ಆವರಣದಲ್ಲಿ ಎಷ್ಟು ಸಸಿ ನೆಡಲಾಗಿದೆ ಎನ್ನುವ ಪ್ರಗತಿ ಕುರಿತು ಸಸ್ಯಶ್ಯಾಮಲಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವಂತೆ ರಾಜ್ಯದ ಎಲ್ಲ ಡಿಡಿಪಿಐಗಳಿಗೆ ಹಲವು ಬಾರಿ ಸೂಚಿಸಲಾಗಿದೆ. ಸಾಧಿಸಿರುವ ಪ್ರಗತಿಯನ್ನು ವಿಳಂಬ ಮಾಡದೇ ಅಪ್‌ಲೋಡ್ ಮಾಡುವಂತೆ ಆಯುಕ್ತರ ಆದೇಶದ ಮೇರೆಗೆ ತಿಳಿಸಿದೆ.
– ಕೃಷ್ಣಾಜೀ ಕರಿಚನ್ನಣ್ಣವರ್, ಪ್ರೌಢಶಿಕ್ಷಣ ನಿರ್ದೇಶಕ ಶೇಷಾದ್ರಿ ಸಾಮಗ