Advertisement

ಸಸಿಹಿತ್ಲುವಿನ ಅಭಿವೃದ್ಧಿಗೆ ಮುಖ್ಯಮಂತ್ರಿಗೆ ನಿಯೋಗ : ಉಮಾನಾಥ ಕೋಟ್ಯಾನ್

06:49 PM Aug 08, 2019 | Sriram |

ಹಳೆಯಂಗಡಿ: ಸಸಿಹಿತ್ಲುವಿನ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಹತ್ತಿರ ಕರಾವಳಿಯ ಎಲ್ಲಾ ಶಾಸಕರೊಂದಿಗೆ ವಿಶೇಷ ನಿಯೋಗದ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ವಿಶೇಷ ಮನವಿಯನ್ನು ಸಲ್ಲಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

Advertisement

ಅವರು ಸಸಿಹಿತ್ಲುವಿನ ಪ್ರದೇಶಕ್ಕೆ ಗುರುವಾರ ವಿಶೇಷ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿ, ಸಮುದ್ರ ಕೊರೆತವು ಅಲ್ಲಲ್ಲಿ ಕಂಡು ಬಂದಿದೆ, ವಿವಿಧ ಇಲಾಖೆಗಳಿಂದ ಏನೆಲ್ಲಾ ಸಾಧ್ಯವಿರುವ ಯೋಜನೆಯನ್ನು ಬಳಸಿಕೊಳ್ಳಲಿದ್ದೇನೆ, ಹಾಕಿರುವ ಶಾಶ್ವತ ತಡೆಗೋಡೆಯನ್ನೇ ಬೇಧಿಸುತ್ತಿರುವ ಸಮುದ್ರ ಪ್ರಕ್ಷಬ್ದಗೊಂಡಿರುವುದು ಕಂಡು ಬಂದಿದೆ. ಎಲ್ಲೆಲ್ಲಿ ಶಾಶ್ವತ ಗೋಡೆಗಳಿಲ್ಲ ಅಲ್ಲೇಲ್ಲ ಬಳಸಲು ಪ್ರಯತ್ನ ನಡೆಸಲಿದ್ದೇನೆ ಜಿಲ್ಲಾಧಿಕಾರಿಯಲ್ಲಿ ಚರ್ಚಿಸಿದ್ದೇನೆ ಎಂದರು.

ಹಳೆಯಂಗಡಿ ಗ್ರಾಮ ಪಂಚಾಯಿತಿಯಿಂದ ದ್ವಿಚಕ್ರ, ಕಾರು ಮತ್ತಿತರ ವಾಹನಗಳಿಗೆ ಪಡೆಯುತ್ತಿರುವ ಪ್ರವೇಶ ಶುಲ್ಕಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು, ಸಸಿಹಿತ್ಲು ಅಳಿವೆ ಕೊಡಿಯ ನಿವಾಸಿ ಲಲಿತಾ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಹಾನಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಮುಂಡ ಬೀಚ್ ಹಾಗೂ ಸಮುದ್ರ ಕೊರೆತ ಪ್ರದೇಶದಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಪಂಚಾಯಿತಿಯ ಪಿಡಿಒ ಪರಮೇಶ್ವರ್, ಕಾರ್ಯದರ್ಶಿ ಶ್ರಿಶೈಲ ಹಾಗೂ ಗ್ರಾಮ ಕರಣಿಕ ಮೋಹನ್, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲ್ಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್ ಬಂಗೇರ, ಚಿತ್ರಾ ಸುಕೇಶ್, ವಿನೋದ್ ಕುಮಾರ್ ಕೊಳುವೈಲು, ಸುಕೇಶ್ ಪಾವಂಜೆ, ಪಿಸಿಎ ಬ್ಯಾಂಕ್‌ನ ನಿರ್ದೇಶಕ ಹಿಮಕರ್ ಕದಿಕೆ, ಮೀನುಗಾರಿಕಾ ಮುಖಂಡ ಶೋಭೇಂದ್ರ ಸಸಿಹಿತ್ಲು, ವಿನೋದ್ ಮಾಸ್ಟರ್, ನಾರಾಯಣ ಕರ್‌ಕೇರ ಉದಯ ಸುವರ್ಣ, ಅನಿಲ್ ಸಸಿಹಿತ್ಲು, ಮನೋಜ್‌ ಕುಮಾರ್‌ ಕೆಲಸಿಬೆಟ್ಟು, ಸಂತೋಷ್ ಶೆಟ್ಟಿ, ಎಚ್.ರಾಮಚಂದ್ರ ಶೆಣೈ, ನಾಗರಾಜ್, ಮಹಾಬಲ ಅಂಚನ್, ಆನಂದ ಸುವರ್ಣ, ಸೂರ್ಯ ಕಾಂಚನ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next