Advertisement

ಸಸಿಹಿತ್ಲು ಬೀಚ್‌ ಅಭಿವೃದ್ಧಿಗೆ 10 ಕೊ. ರೂ. ಯೋಜನೆ :ಕೋಟ ಶ್ರೀನಿವಾಸ‌ ಪೂಜಾರಿ

06:49 PM Nov 03, 2020 | sudhir |

ಸಸಿಹಿತ್ಲು: ಸಸಿಹಿತ್ಲು ಬೀಚ್‌ ಅಭಿವೃದ್ಧಿಗೆ 10 ಕೊ.ರೂ. ಯೋಜನೆಯನ್ನು ರೂಪಿಸಲಾಗುತ್ತಿದೆ. ಜಿಲ್ಲಾಡಳಿತ, ಸರಕಾರ, ಪ್ರವಾಸೋದ್ಯಮ ಇಲಾಖೆಯ ಮೂಲಕ ಸರ್ಫಿಂಗ್‌ ಪ್ರದೇಶವನ್ನಾಗಿ ರೂಪಿಸುವ ಯೋಜನೆಯಲ್ಲಿ ಸ್ಥಳೀಯ ಮೀನುಗಾರರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡೇ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಸಸಿಹಿತ್ಲು ಬೀಚ್‌ನಲ್ಲಿ ಕಾರ್ಯಗತಗೊಳ್ಳಲಿರುವ ಯೋಜನೆಗಾಗಿ ಸ್ಥಳ ಸಮೀಕ್ಷೆಯನ್ನು ಶಾಸಕರ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾತನಾಡಿದರು.

ಕಡಲಿನ ಒತ್ತಡ ಹೆಚ್ಚಾಗಿ ಕೊರತೆ ಉಂಟಾಗುತ್ತದೆ ಎಂಬ ಕಾರಣಕ್ಕೆ 4.15 ಕೊ.ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ ರಚನೆ, ಸರ್ಫಿಂಗ್‌ನ ಪ್ರದೇಶಕ್ಕಾಗಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವ ಯೋಜನೆಗಳು ಕಾರ್ಯಗತಗೊಳ್ಳಲಿದೆ. ಪ್ರವಾಸೋದ್ಯಮಕ್ಕೆ ಆಕರ್ಷಣೆ ಮಾಡುವ ಉದ್ದೇಶದೊಂದಿಗೆ ಇಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಯೋಜನೆ ರೂಪಿಸಲಾಗುತ್ತದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್‌ ಅವರು ಸಚಿವರ ಗಮನ ಸೆಳೆದು, ಸ್ಥಳೀಯ ಮೀನುಗಾರರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಯೋಜನೆ ರೂಪಿಸಬೇಕು, ನಾಡ ದೋಣಿಗಳನ್ನು ತಂಗಲು ನಿರ್ಮಿಸಿರುವ ಜೆಟ್ಟಿಯ ವಿಸ್ತರಣೆ ನಡೆಯಲಿ, ಹೆಜಮಾಡಿಯಲ್ಲಿ ನಿರ್ಮಾಣವಾಗುವ ಬಂದರಿನ ಯೋಜನೆಯಿಂದ ಸಸಿಹಿತ್ಲುವಿಗೂ ಅನುಕೂಲವಾಗಲಿ ಎಂದು ಸಲಹೆಗಳನ್ನು ನೀಡಿದರು.

ಇದನ್ನೂ ಓದಿ;ಇತಿಹಾಸದ ಪುಟ ಸೇರಿದ ವಿಶ್ವದ ಅತಿ ದೊಡ್ಡ “ಪಿಂಕ್ ಡೈಮಂಡ್” ಗಣಿ ಸ್ಥಗಿತ

ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಯೋಜನೆಯ ಬಗ್ಗೆ ಮಾಹಿತಿ ನೀಡಿ, ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ಹಾಗೂ ಸ್ಥಳೀಯರಿಗೂ ತೊಂದರೆಯಾಗದ ರೀತಿಯಲ್ಲಿ ಯೋಜನೆ ಕಾರ್ಯಗತಗೊಳಿಸುವ ಜವಬ್ದಾರಿ ಜಿಲ್ಲಾಡಳಿತದ್ದಾಗಿದೆ. ಸರ್ಫಿಂಗ್‌ನ ಯೋಜನೆಯು ಸಹ ಪುನರ್‌ ಪರಿಶೀಲಿಸಲಾಗುವುದು, ಸಸಿಹಿತ್ಲುವಿನ ಸ್ಥಳೀಯ ಸಮಸ್ಯೆಗಳಾದ ಕುಡಿಯುವ ನೀರು, ಹಕ್ಕು ಪತ್ರ ಸಮಸ್ಯೆ, ಕೈಗಾರಿಕೆಗಳಿಂದ ಪರಿಸರ ಮಾಲಿನ್ಯದ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Advertisement

ಜಿ.ಪಂ. ಸದಸ್ಯ ವಿನೋದ್‌ಕುಮಾರ್‌ ಬೊಳ್ಳೂರು , ತಾ.ಪಂ. ಸದಸ್ಯ ಜೀವನ್‌ಪ್ರಕಾಶ್‌, ಮೀನುಗಾರಿಕಾ ಪ್ರಕೋಷ್ಠದ ಶೋಭೇಂದ್ರ ಸಸಿಹಿತ್ಲು, ಯುವಜನ ಸೇವಾ ಇಲಾಖೆಯ ಅಧಿಕಾರಿ ವಿನೋದ್‌ ಅವರು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಚಿವರಲ್ಲಿ ಮಾಹಿತಿ ನೀಡಿ, ಸಮಸ್ಯೆಗಳಿಗೆ ಸ್ಪಂದಿಸಿ ಯೋಜನೆಯನ್ನು ರೂಪಿಸಿರಿ ಎಂದು ಮನವಿ ಮಾಡಿಕೊಂಡರು.

ಪಿಸಿಎ ಬ್ಯಾಂಕ್‌ನ ಅಧ್ಯಕ್ಷ ಸತೀಶ್‌ ಭಟ್‌, ಉಪಾಧ್ಯಕ್ಷ ಶ್ಯಾಮ್‌ ಪ್ರಸಾದ್‌, ಹಳೆಯಂಗಡಿ ಪಂ.ನ ಮಾಜಿ ಸದಸ್ಯರಾದ ವಿನೋದ್‌ಕುಮಾರ್‌ ಕೊಳುವೈಲು, ಆಶೋಕ್‌ ಬಂಗೇರ, ಪಡುಪಣಂಬೂರು ಪಂ.ನ ಮಾಜಿ ಅಧ್ಯಕ್ಷ ಮೋಹನ್‌ದಾಸ್‌, ಮಾಜಿ ಸದಸ್ಯರಾದ ಮಂಜುಳಾ, ವಿಶೇಷ ತಹಶೀಲ್ದಾರ್‌ ಮಾಣಿಕ್ಯ, ವಿವಿಧ ಇಲಾಖೆಯ ಅಧಿಕಾರಿಗಳು, ಇಂಜಿನಿಯರ್‌ಗಳು, ಬಿಜೆಪಿಯ ಸುನಿಲ್‌ ಆಳ್ವಾ ಮತ್ತಿತರರು ಉಪಸ್ಥಿತರಿದ್ದರು.

ಹಳೆಯಂಗಡಿ ಪಿಡಿಒಗೆ ಸೂಚನೆ
ಬೀಚ್‌ ಪ್ರದೇಶಕ್ಕೆ ಪಡೆಯುವ ಶುಲ್ಕದ ಬಗ್ಗೆ ಕ್ರಮ, ಬೀಚ್‌ ಪರಿಸರದಲ್ಲಿ ನೀರಿಗೆ ಸೇರಿರುವ ಪಂಚಾಯತ್‌ನ ಕಟ್ಟಡದ ಅವಶೇಷಗಳು ಹಾಗೂ ಬೀಚ್‌ನಲ್ಲಿ ಸತ್ತಿರುವ ಪ್ರಾಣಿಗಳ ತೆರವು, ಪರಿಸರದಲ್ಲಿ ನ ಕೈಗಾರಿಕೆಗಳಿಂದ ಆಗುತ್ತಿರುವ ಸಮಸ್ಯೆಗಳು, ಶುಚಿತ್ವದೊಂದಿಗೆ ಸಮುದ್ರ ಸೇರಿರುವ ಅಂಗಡಿ ಕೋಣೆಗಳ ನಿರ್ಮಾಣದ ಬಗ್ಗೆ ಕೂಡಲೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳು ಹಳೆಯಂಗಡಿ ಪಂಚಾಯತ್‌ನ ಪಿಡಿಒ ಅವರಿಗೆ ಸ್ಥಳದಲ್ಲಿಯೇ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next