Advertisement
ಧಾರ್ಮಿಕ ಕಾರ್ಯಕ್ರಮವಾಗಿ ಪೂರ್ವಾಹ್ನ 10 ರಿಂದ ಗಣಹೋಮ, ಸಂಜೆ 4.30ರಿಂದ ಕಲಶ ಪ್ರತಿಷ್ಠೆ, ಅಲಂಕಾರ ಪೂಜೆ, ಸಂಜೆ 5 ರಿಂದ ಅರಸಿನ ಕುಂಕುಮ, ಆನಂತರ ಶ್ರೀ ಕೃಷ್ಣ ಪ್ರಸಾದಿತ ಸ್ವಾಮಿ ನಿತ್ಯಾನಂದ ಭಜನ ಮಂಡಳಿ ಭಾಂಡೂಪ್ ಇವರಿಂದ ಭಜನ ಕಾರ್ಯಕ್ರಮ ನಡೆಯಿತು. ಸಂಜೆ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅನಂತರ ಧಾರ್ಮಿಕ ಪೂಜಾ ಕಾರ್ಯಕ್ರಮವಾಗಿ ಬಲಿ ಉತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತಾದಿಗಳು, ಸಮಾಜ ಬಾಂಧವರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಭಕ್ತಾದಿಗಳು ಹೂವಿನ ಪೂಜೆಯನ್ನು ನೀಡಿ ಸಹಕರಿಸಿದರು.
ಅತಿಥಿಗಳಾಗಿ ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ವಿದ್ಯಾನಿಧಿ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ಕೆ., ಹಿರಿಯ ನಿಷ್ಠಾ
ವಂತ ಕಾರ್ಯಕರ್ತ ಜಯ ಎಂ. ಕೋಟ್ಯಾನ್ ದಂಪತಿ ಮೊದಲಾದವರು ಉಪಸ್ಥಿತ
ರಿದ್ದರು. ಲಾಜರ್ ಟಿ. ಎಂ. ಕೋಟ್ಯಾನ್ ಅವರು ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ಸಕ್ರಿಯ ಸದಸ್ಯ, ಯಕ್ಷಗಾನ ಕಲಾವಿದ ರಾಜ ತುಂಬೆ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ರಮೇಶ್ ಬಿ. ಸಾಲ್ಯಾನ್ ವಂದಿಸಿದರು. ಪ್ರಧಾನ ಅರ್ಚಕ ಸದಾಶಿವ ಡಿ. ಕುಂದರ್ ಹಾಗೂ ಪುರೋಹಿತ ವರ್ಗದವರ ಕೂಡುವಿಕೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರಗಿತು. ಪ್ರಧಾನ ಅರ್ಚಕ ಸದಾಶಿವ ಡಿ. ಕುಂದರ್ ಅವರ ಮುಂದಾಳತ್ವದಲ್ಲಿ ಬಳಿ ಉತ್ಸವ ನೆರವೇರಿತು. ದಿನೇಶ್ ಕೋಟ್ಯಾನ್ ಮತ್ತು ಬಳಗದವರು ವಾದ್ಯದಲ್ಲಿ, ಕೆ. ಕೆ. ದೇವಾಡಿಗ ಮತ್ತು ಬಳಗದವರು ಚೆಂಡೆ-ಮದ್ದಳೆಯಲ್ಲಿ ಸಹಕರಿಸಿದರು. ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು, ಭಕ್ತಾದಿಗಳು ಉಪಸ್ಥಿತರಿದ್ದರು.