Advertisement

Sashakt Nari-Viksit Bharat ; ಸ್ತ್ರೀಯರಿಗೆ 1000 ಡ್ರೋನ್‌ ಹಸ್ತಾಂತರಿಸಿದ ಮೋದಿ

01:14 AM Mar 12, 2024 | Team Udayavani |

ಹೊಸದಿಲ್ಲಿ: ನನ್ನ ಮೂರನೇ ಅಧಿಕಾರಾವಧಿ ಮಹಿಳಾ ಶಕ್ತಿ ಬೆಳವಣಿಗೆಯ ಹೊಸ ಅಧ್ಯಾಯ ಬರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಅದಮ್ಯ ವಿಶ್ವಾಸವನ್ನು ಹೊರಹಾಕಿದ್ದಾರೆ.

Advertisement

ಸಶಕ್ತ ನಾರಿ-ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಹಿಂದಿನ ಸರಕಾರಗಳ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ಅವರಿಗೆ ಮಹಿಳೆಯರ ಜೀವನ, ಕಷ್ಟದಾಯಕ ಬದುಕು ಸರಿಪಡಿಸುವುದು ಆದ್ಯತೆ ಆಗಿರಲಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿವಿಧ ಯೋಜನೆಗಳ ಮೂಲಕ ಮಹಿಳೆಯರನ್ನು ಮೇಲೆತ್ತಲು ಪ್ರತಿ ಹಂತದಲ್ಲೂ ಸಹಾಯ ಮಾಡಿತು ಎಂದರು.

ಇದೇ ವೇಳೆ, ಮೋದಿ ಸ್ವಸಹಾಯ ಸಂಘಗಳಿಗೆ 8 ಸಾವಿರ ಕೋಟಿ ರೂ. ಬ್ಯಾಂಕ್‌ ಸಾಲವನ್ನು ವಿತರಿಸಿದರು. ಕೃಷಿ ಮತ್ತಿತರ ಉದ್ದೇಶಗಳಿಗೆ ಡ್ರೋನ್‌ ಬಳಕೆಯ ತರಬೇತಿ ಪಡೆದಿರುವ ಒಂದು ಸಾವಿರ “ನಮೋ ಡ್ರೋನ್‌ ದೀದಿಗಳಿಗೆ’ ಡ್ರೋನ್‌ಗಳನ್ನು ಹಸ್ತಾಂತರಿಸಿದರು. ಜತೆಗೆ, ಲಖ್‌ಪತಿ ದೀದಿ ಸಾಧಕರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕದ ಲಖ್‌ಪತ್‌ ದೀದಿಯರೂ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next