Advertisement

Sarvasva: ಹಾಡಲ್ಲಿ ʼಸರ್ವಸ್ವʼ ಕನಸು; ನವತಂಡದ ಪ್ರಯತ್ನ

06:44 PM Sep 16, 2024 | Team Udayavani |

ಈ ಹಿಂದೆ ಲೈಫ್ 360 ಚಿತ್ರದಲ್ಲಿ ನಟಿಸಿದ್ದ ಅರ್ಜುನ್‌ ಕಿಶೋರ್‌ ಚಂದ್ರ ನಟಿಸಿ, ನಿರ್ದೇಶಿಸಿ ರುವ ಹಾಗೂ ರಾಜಶೇಖರ್‌ ಎಸ್‌ ನಿರ್ಮಿಸಿರುವ ಸರ್ವಸ್ವ ಮ್ಯೂಸಿಕ್‌ ವಿಡಿಯೋ ಸಾಂಗ್‌ ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಸೋಮಶೇಖರ್‌, ತಾರಾ ಅನುರಾಧಾ, ಸುಚೇಂದ್ರ ಪ್ರಸಾದ್‌, ಲಹರಿ ವೇಲು ಮುಂತಾದವರು ಹಾಡು ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.

Advertisement

ಈ ವೇಳೆ ಮಾತನಾಡಿದ ಅರ್ಜುನ್‌ ಕಿಶೋರ್‌ ಚಂದ್ರ, “ನಾನು ಪುನೀತ್‌ ರಾಜಕುಮಾರ್‌ ಅಭಿಮಾನಿ. ಈ ಹಾಡನ್ನು ಪಿ.ಆರ್‌.ಕೆ ಆಡಿಯೋದವರು ಬಿಡುಗಡೆ ಮಾಡುತ್ತಿರುವುದು ಸಂತೋಷವಾಗಿದೆ. ನಾನೇ ಬರೆದಿರುವ ಈ ಹಾಡನ್ನು ಸೆಪ್ಟೆಂಬರ್‌ 20ರಿಂದ ಪಿ.ಆರ್‌.ಕೆ ಆಡಿಯೋ ಯೂಟ್ಯೂಬ್‌ ನಲ್ಲಿ ವೀಕ್ಷಿಸಬಹುದು. ಈ ಹಾಡಿನ ಚಿತ್ರೀಕರಣ ಯೂರೋಪ್‌ ನಲ್ಲಿ ನಡೆದಿದೆ. ಇದು ಬರೀ ಹಾಡಲ್ಲ. ಕಮರ್ಷಿಯಲ್‌ ಚೌಕಟ್ಟಿನೊಳಗೆ ಒಂದೊಳ್ಳೆ ಸಂದೇಶವನ್ನು ಈ ಹಾಡಿನ ಮೂಲಕ ಕೊಡುವ ಪ್ರಯತ್ನ ಮಾಡಿದ್ದೇವೆ. ಸರ್ವಸ್ವ ಹಾಡು ಸರ್ವರ ಮನಸ್ಸಿಗೂ ಹತ್ತಿರವಾಗಲಿದೆ’ ಎಂದರು.

ತಾಯಿ – ಮಗುವಿನ ಮಹತ್ವ ಸಾರುವ ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಎನ್ನುವುದು ನಿರ್ಮಾಪಕ ರಾಜಶೇಖರ್‌ ಮಾತು. ಸರ್ವಸ್ವಗೆ ಚೇತನ್‌ ರಾವ್‌ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.