Advertisement
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಸ್ಪತ್ರೆ ಉದ್ಘಾಟಿಸಿ ಮಾತನಾಡಿ, ಇಂದು ಭಾರತೀಯ ಆರೋಗ್ಯ ಪದ್ಧತಿಗಳಾದ ಯೋಗ, ಆಯುರ್ವೇದ,ಪ್ರಕೃತಿ ಚಿಕಿತ್ಸೆಗೆ ವಿಶ್ವ ಮಾನ್ಯತೆ ದೊರಕಿದೆ ಹಾಗೂ ಭವಿಷ್ಯದಲ್ಲಿ ವಿದೇಶಿಯರು ತಮ್ಮ ಆರೋಗ್ಯಕ್ಕಾಗಿ ಭಾರತೀಯ ಈ ಪದ್ಧತಿಯ ಕಡೆಗೆ ಮುಖ ಮಾಡಲಿದ್ದಾರೆ ಹಾಗೂ ವಿವೇಕಾನಂದರ ಆದರ್ಶವನ್ನು ಹೊಂದಿದ ಸರ್ವಕ್ಷೇಮ ಆಸ್ಪತ್ರೆ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುವ ಎಲ್ಲಾ ಅರ್ಹತೆ ಹೊಂದಿದೆ ಎಂದರು.
Related Articles
Advertisement
ಸಾಲಿಗ್ರಾಮದ ಡಿವೈನ್ಪಾರ್ಕ್ ಟ್ರಸ್ಟ್ನ ಆಡಳಿತ ನಿರ್ದೇಶಕ ಡಾ.ಎ.ಚಂದ್ರಶೇಖರ ಉಡುಪ (ಡಾಕ್ಟರ್ಜೀ)ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸ್ವಾಮಿ ವಿವೇಕಾನಂದರ ಜಗತ್ತಿನ ಅತೀ ಎತ್ತರದ ಪ್ರತಿಮೆಯನ್ನು ಬೆಂಗಳೂರು ಜಿಗಣಿ ಸ್ವಾಮಿ ವಿವೇಕಾನಂದ ಯೋಗ ವಿವಿಯ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಜೀ ಅವರು ಅನಾವರಣಗೊಳಿಸಿದರು.ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಯುಎಸ್ಎ ಯೋಗಭಾರತಿ ಛೇರ್ಮನ್ ರಘುರಾಮ್ ಜೀ, ಮಂಗಳೂರು ಕರ್ಣಾಟಕ ಬ್ಯಾಂಕ್ನ ಜನರಲ್ ಮೇನೆಜರ್ ನಾಗರಾಜ್ ರಾವ್ , ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಸ್.ಯಡಪಡಿತ್ತಾಯ, ಬೆಂಗಳೂರಿನ ಆರೋಗ್ಯಧಾಮ ವೆಲ್ನೆಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ಡಾ.ವೈ.ರುದ್ರಪ್ಪ, ಉಜರೆ ಶ್ರೀಕ್ಷೇತ್ರ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ಮಣಿಪಾಲ ವಿವಿಯ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನಲ್ಸ್ ಡೀನ್ ಡಾ.ಜಿ.ಅರುಣ್ ಮಯ್ಯ, ಭಾರತೀಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಪದವೀಧರರ ಸಂಘದ ಅಧ್ಯಕ್ಷ ಡಾ.ನವೀನ್ ಕೆ.ವಿ., ನವದೆಹಲಿಯ ಕೇಂದ್ರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರಾಘವೇಂದ್ರ ರಾವ್ ಎಂ., ಸ್ವಾಮಿ ವಿವೇಕಾನಂದ ಯೋಗ ವಿವಿಯ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಮಂಜುನಾಥ ಎನ್.ಕೆ., ಕೋಟ ಗ್ರಾ.ಪಂ. ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕ ಡಾ.ಎ.ವಿವೇಕ ಉಡುಪ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.