Advertisement

ಸರ್ವಜ್ಞ ನಿಗಮ ಸ್ಥಾಪನೆಗೆ ಮನವಿ: ಶಾಸಕ ರೇವೂರ್‌

10:26 AM Feb 21, 2018 | Team Udayavani |

ಕಲಬುರಗಿ: ವಿಶ್ವಕ್ಕೆ ತ್ರಿಪದಿಯ ಬ್ರಹ್ಮನೆಂದೇ ಖ್ಯಾತಿಯಾಗಿರುವ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ ಅವರ ಹೆಸರಿನಲ್ಲಿ ನಿಗಮವನ್ನು ಸ್ಥಾಪಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ದತ್ತಾತ್ರೇಯ ಪಾಟೀಲ ರೇವೂರ್‌ ಹೇಳಿದರು.

Advertisement

ಇಲ್ಲಿನ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾ ಮನವತಾವಾದಿ ಕನ್ನಡ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
 
ಸಾಮಾನ್ಯ ಮನುಷ್ಯನಾಗಿರುವ ಭಕ್ತ ಕುಂಬಾರ ಭಕ್ತಿಯಿಂದ ಭಗವಂತನ್ನು ಪಡೆದುಕೊಂಡ. ಕಾಯಕವೇ ಕೈಲಾಸ ಎಂದುಕೊಂಡ ಕುಂಬಾರ ಸಮಾಜದ ದಿನೇ-ದಿನೇ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.

ನಿವೃತ್ತ ಗ್ರಂಥಪಾಲಕ ಹಾಗೂ ಸಾಹಿತಿ ಬನ್ನಪ್ಪ ಬಿ.ಕೆ ಉಪನ್ಯಾಸ ನೀಡಿ, ಡಾ| ಬಿ.ಆರ್‌ ಅಂಬೇಡ್ಕರ್‌, ನಿಜ ಶರಣ ಅಂಬಿಗರ ಚೌಡಯ್ಯ, ಕನಕದಾಸ ಇಂತಹ ಹಲವು ಮಹ್ಮಾತರ ಜಯಂತಿಗಳು ಯಾವ ರೀತಿ ವಿಜೃಂಭಣೆಯಿಂದ
ಆಚರಣೆ ಮಾಡಲಾಗುವುದೋ ಅದೇ ರೀತಿ ಮಹಾ ಮಾನವತಾವಾದಿ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜಯಂತಿ ಆಚರಣೆಯಾಗಬೇಕು ಎಂದರು.

ಹಲವು ಮಹಾತ್ಮರ ಜಯಂತಿ ಆಚರಣೆ ಮಾಡುವುದರ ಉದ್ದೇಶ ಆ ಮಹಾತ್ಮರ ಗುಣಗಳನ್ನು ಸಾಮಾನ್ಯ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನುಗ್ಗಲಿ ಎನ್ನುವುದೇ ಆಗಿದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಸಾಧನೆಗೆ ಗಟ್ಟಿ ಮನಸ್ಸು ಅವಶ್ಯಕ. ಕುಂಬಾರ ಸಮಾಜದ ಜನರಲ್ಲಿ ಒಗಟ್ಟಿನ ಕೊರತೆಯಿದೆ ಎಂದರು. 

ಆಡು ಮುಟ್ಟದ ಗಿಡವಿಲ್ಲ ಕವಿ ಸರ್ವಜ್ಞ ಬರೆಯದ ವಿಷಯವಿಲ್ಲ ಎನ್ನುವಂತೆ ಶತಮಾನಗಳ ಹಿಂದೆ ಕವಿ ಸರ್ವಜ್ಞ ಹಲವಾರು ವಿಷಯಗಳ ಕುರಿತು ವಚನಗಳನ್ನು ರಚಿಸಿದರು.  ಸದ್ಯ ಅವರು ಬರೆದ ಎರಡು ಸಾವಿರ ವಚನಗಳು ಲಭ್ಯ ಇವೆ ಎಂದು ತಿಳಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಯಕ ಜೀವಿಗಳಿಗೆ ಸನ್ಮಾನ ಮಾಡಲಾಯಿತು. ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಶಿವಶರಣಪ್ಪ ಕುಂಬಾರ, ಜಿಲ್ಲಾ ಕುಂಬಾರ ಸಂಘದ ಮಹಿಳಾ ಘಟಕ ಅಧ್ಯಕ್ಷೆ ರೇಖಾ ಕುಂಬಾರ, ದತ್ತಪ್ಪ ಸಾಗನೂರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Advertisement

ಮೆರವಣಿಗೆ ವಿವಿಧ ಕಲಾ ತಂಡಗಳ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರದ ಭವ್ಯ ಮೆರವಣಿಗೆ ನಗರದ ಸೂಪರ್‌ ಮಾರ್ಕೆಟ್‌ ಜನತಾ ಬಜಾರದಿಂದ ಜಗತ್‌ ವೃತ್ತದ ಮೂಲಕ ಡಾ| ಎಸ್‌. ಎಂ ಪಂಡಿತ ರಂಗಮಂದಿರವರೆಗೆ ಜರುಗಿತು. 

Advertisement

Udayavani is now on Telegram. Click here to join our channel and stay updated with the latest news.

Next