Advertisement
ಐದು ವರ್ಷಗಳಿಗೊಮ್ಮೆ ಜರಗುವ ದೈವದ ಧರ್ಮಕೋಲೋತ್ಸವ, ಅಷ್ಟೋತ್ತರ ಪಂಚಶತ ಸೀಯಾಳಭಿಷೇಕ, ಲೋಕ ಕಲ್ಯಾಣಾರ್ಥವಾಗಿ ಸಗ್ರಹ ಮುಖ ಶನೈಶ್ವರ ಶಾಂತಿ ಮಹಾಯಾಗವು ಎ. 26, 27 ಹಾಗೂ 28 ರಂದು ಜರಗಲಿದೆ. ಎ. 26 ರಂದು ಸಂಜೆ 4 ಗಂಟೆಗೆ ದೀಪ ಪ್ರತಿಷ್ಠೆ , ಮಂತ್ರಮೂರ್ತಿ ಗುಳಿಗ ದೈವದ ಭಂಡಾರ ಇಳಿಯುವುದು, ವಿಶೇಷ ತಂಬಿಲ ಸೇವೆ, ಸಾಮೂಹಿಕ ಪ್ರಾರ್ಥನೆ, 5 ಗಂಟೆಗೆ ಕುಂಟಾಲುಮೂಲೆ ಶ್ರೀ ಆದಿಶಕ್ತಿ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಉಗ್ರಾಣ ಮುಹೂರ್ತ, ಮಂತ್ರಮೂರ್ತಿ ಗುಳಿಗ ದೈವಕ್ಕೆ ದ್ವಾದಶ ತಂಬಿಲ ಸೇವೆ, ಸಂಜೆ 6.30 ಕ್ಕೆ ಧಾರ್ಮಿಕ ಸಮಾರಂಭದ ಉದ್ಘಾಟನೆ, ರಾತ್ರಿ 8 ರಿಂದ ಯಕ್ಷಗಾನ ಬಯಲಾಟ, 10.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಎ.27 ರಂದು ಪ್ರಾತಃಕಾಲ 6.15 ಕ್ಕೆ ದ್ವಾದಶ ನಾಳಿಕೇರ ಅಷ್ಟದ್ರವ್ಯ ಸಹಿತ ಗಣಪತಿ ಹೋಮ, ದೈವಕ್ಕೆ ಸೀಯಾಳಭೀಷೇಕ, ಭಜನೆ, 10 ಗಂಟೆಗೆ ಲೋಕ ಕಲ್ಯಾಣಾರ್ಥವಾಗಿ ಸಮಸ್ತ ಜನರ ದುರಿತ ನಿವಾರಣೆ, ಕಂಟಕ ದೋಷ, ಸಮಯದೋಷ, ಶತ್ರುದೋಷ, ಶನಿಸಂಕಷ್ಟ ಪರಿಹಾರಕ್ಕಾಗಿ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಗ್ರಹಮುಖ ಶನೈಶ್ವರ ಶಾಂತಿ ಮಹಾಯಾಗ, ಮಧ್ಯಾಹ್ನ 12 ಗಂಟೆಗೆ ಮಹಾ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಸರ್ವಧರ್ಮ ಮಾತೃಸಂಗಮದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲ ಅಧ್ಯಕ್ಷೆ ಶ್ರೀಮಾತಾ ಪ್ರಶಸ್ತಿ ಪುರಸ್ಕೃತರಾದ ಈಶ್ವರಿ ಶ್ಯಾಮ ಭಟ್ ಅಧ್ಯಕ್ಷತೆಯಲ್ಲಿ ಬಪ್ಪನಾಡು ಸಹಕಾರಿ ಬ್ಯಾಂಕ್ ನಿರ್ದೇಶಕಿ ಕಸ್ತೂರಿ ಪಂಜ ಉದ್ಘಾಟಿಸುವರು. ಸಂಜೆ 4 ಗಂಟೆಗೆ ನೃತ್ಯ ವೈವಿಧ್ಯ, ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜ್ಯೋತಿಷ್ಯ ತಿಲಕಂ ದೈವಜ್ಞ ಶಶಿಧರ ಮಾಂಗಾಡ್ ಉದ್ಘಾಟಿಸುವರು. ಕಾರ್ಕಳದ ಮುದ್ರಾಡಿ ಆದಿಶಕ್ತಿ ದೇವಸ್ಥಾನದ ಶ್ರೀ ಧರ್ಮಯೋಗಿ ಮೋಹನ್ ಸ್ವಾಮೀಜಿ ಆಶೀರ್ವಚನ ನೀಡುವರು. ರಾತ್ರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಎ. 28 ರಂದು ಬೆಳಗ್ಗೆ 6.30 ಕ್ಕೆ ಸೀಯಾಳಭೀಷೇಕ, ಕ್ಷೀರಾಭೀಷೇಕ, 10 ಗಂಟೆಗೆ ಮಂತ್ರಮೂರ್ತಿ ಗುಳಿಗ ದೈವದ ಕೋಲೋತ್ಸವ ಆರಂಭ, ಮಧ್ಯಾಹ್ನ ತುಲಾಭಾರ ಸೇವೆ, ದೈವದ ಪ್ರಸಾದ ವಿತರಣೆ ನಡೆಯಲಿದೆ.