ಪುಂಜಾಲಕಟ್ಟೆ : ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಕರೆಂಕಿ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ಸರಪಾಡಿ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ, ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಲಾ ವಾಸ್ತವ್ಯ,ಮನೆ ಭೇಟಿ ಕಾರ್ಯಕ್ರಮ ಹಾಗೂ ಶಿಕ್ಷಣಾಭಿಮಾನಿಗಳ ಸಭೆ ಜ.27ರಂದು ನಡೆಯಿತು.
ರವಿವಾರ ಸಂಜೆ ಸರಪಾಡಿ ಹಾಗೂ ಮಣಿನಾಲ್ಕೂರು ಗ್ರಾಮ ವ್ಯಾಪ್ತಿಯ ಮನೆಗಳಿಗೆ ತೆರಳಿ ಸರಕಾರಿ ಶಾಲೆ ಉಳಿಸಿ ಬೆಳೆಸುವ ಅನಿವಾರ್ಯತೆಯ ಬಗ್ಗೆ ಜನಜಾಗೃತಿ ಮೂಡಿಸಲಾಯಿತು. ರಾತ್ರಿ ಸರಪಾಡಿ ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ ತಂಡ ಸೋಮವಾರ ಬೆಳಗ್ಗೆ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಗ್ರಾಮದ ಪ್ರಮುಖರ ಮನೆಗಳಿಗೆ ಭೇಟಿ ನೀಡಿ ಸಮಿತಿಯ ಕಾರ್ಯಚಟುವಟಿಕೆ, ಶಾಲೆ ಉಳಿಸುವ ಅಗತ್ಯದ ಬಗ್ಗೆ ಸಮಾಲೋಚನೆ ನಡೆಸಿತು.
ಬಳಿಕ ಪ್ರಕಾಶ್ ಅಂಚನ್ ಅಧ್ಯಕ್ಷತೆ ಯಲ್ಲಿ ಶಿಕ್ಷಣಾಭಿಮಾನಿಗಳ ಸಭೆ ನಡೆ ಯಿತು. ಈ ಸಂದರ್ಭ ಮಾತನಾಡಿದ ಪ್ರಕಾಶ್ ಅಂಚನ್ ಅವರು, ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಸಾಕಷ್ಟು ಸವಲತ್ತುಗಳು ದೊರೆಯುತ್ತದೆ. ಆದರೆ ವಿದ್ಯಾರ್ಥಿಗಳೇ ಇಲ್ಲದಿದ್ದರೆ ಪ್ರಯೋಜ ನವಿಲ್ಲ. ಆದುದರಿಂದ ಸಮಿ ತಿಯ ಜತೆ ಗ್ರಾಮಸ್ಥರು ಕೈಜೋಡಿಸಿದಾಗ ಶಾಲೆಯನ್ನು ಉಳಿಸಿ ಬೆಳೆಸಲು ಸಾಧ್ಯವಿದೆ ಎಂದರು.
ರಾಜ್ಯ ಸಮಿತಿ ಕಾರ್ಯದರ್ಶಿ ಪುರು ಷೋತ್ತಮ ಅಂಚನ್, ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಪೂಜಾರಿ ಹೆಗ್ಗಡೆ ಕೋಡಿ, ಗ್ರಾ.ಪಂ. ಸದಸ್ಯರಾದ ನಾಣ್ಯಪ್ಪ ಪೂಜಾರಿ, ಪ್ರೇಮಾ, ಸರಪಾಡಿ ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಉದಯ ಕುಮಾರ್ ಜೈನ್, ಮಣಿ ನಾಲ್ಕೂರು ಸಹಕಾರಿ ಸಂಘದ ಸಿಇಒ ಸುಧಾಕರ ಶೆಟ್ಟಿ, ಪ್ರಮುಖರಾದ ಪದ್ಮಪ್ಪ ಪೂಜಾರಿ, ಇಸ್ಮಾಯಿಲ್, ಸುಂದರ ಶೆಟ್ಟಿ ಕಲ್ಲೊಟ್ಟೆ, ಶಿವರಾಮ ಭಂಡಾರಿ, ಸುರೇಂದ್ರ ಪೈ, ಸುದರ್ಶನ ಬಜ, ರಾಜ್ಯ ಸಮಿತಿ ಕೋಶಾಧಿಕಾರಿ ಸಂದೀಪ್ ಸಾಲ್ಯಾನ್, ರಾಮಚಂದ್ರ ಪೂಜಾರಿ, ನವೀನ್ ಸೇಸಗುರಿ, ದಿಲೀಪ್ ಡೆಚ್ಚಾರ್, ಅಶ್ವಥ್ ಉಪಸ್ಥಿತರಿದ್ದರು.
ಸರಪಾಡಿ ಗ್ರಾ.ಪಂ. ಸದಸ್ಯ ಧನಂಜಯ ಶೆಟ್ಟಿ ಪ್ರಾಸ್ತವಿಸಿದರು. ಸ.ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ಗಣೇಶ್ ರಾವ್ ನಿರೂಪಿಸಿ, ವಂದಿಸಿದರು.
ನೂತನ ಸಮಿತಿ ರಚನೆ
ಸರಪಾಡಿ ಶಾಲೆ ಉಳಿಸುವ ನಿಟ್ಟಿನಲ್ಲಿ ನೂತನ ಸರಕಾರಿ ಶಾಲೆ ಉಳಿಸಿ ಬೆಳಸಿ ಸರಪಾಡಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಧನಂಜಯ ಶೆಟ್ಟಿ ಸರಪಾಡಿ, ಉಪಾಧ್ಯಕ್ಷರಾಗಿ ಪದ್ಮಪ್ಪ ಪೂಜಾರಿ, ಡಾ. ಬಾಲಚಂದ್ರ ಶೆಟ್ಟಿ, ಕರುಣಾಕರ ಪೂಜಾರಿ ಕೊಡಂಗೆ, ಸುಂದರ ಶೆಟ್ಟಿ ಹೊಳ್ಳರಗುತ್ತು, ಪುರುಷೋತ್ತಮ ಪೂಜಾರಿ ಮಜಲು, ವಿಶ್ವನಾಥ ನಾಯ್ಕ ಕಾಣೆಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪರಾಜ್ ಹಲ್ಲಂಗಾರು, ಕಾರ್ಯದರ್ಶಿಯಾಗಿ ಸಾಂತಪ್ಪ ಪೂಜಾರಿ, ಕೋಶಾಧಿಕಾರಿ ಯಾಗಿ ದಿನೇಶ್ ಗೌಡ ನಿರೊಲೆº ಹಾಗೂ 15 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.