Advertisement
ದಕ್ಷಿಣ ಭಾರತದ ಶೈಲಿಇಲ್ಲಿ ಕಾಂಜಿವರಂ ಮತ್ತು ಜರಿ ಸೀರೆಗಳು ಹೆಚ್ಚು ಸೂಕ್ತ. ಸೀರೆಯ ಅಂಚು ಇರುವಷ್ಟೇ ನೆರಿಗೆ ಹಿಡಿದು ಸೆರಗು ಹಾಕಿ ಸೊಂಟಕ್ಕೊಂದು ಡಾಬು ಹಾಕಿದರೆ ಹೆಣ್ಣಿನ ಸೌಂದರ್ಯವನ್ನು ವರ್ಣಿಸಲು ಪದಗಳು ಸಿಗದು. ಅವರವರಿಗೆ ಒಪ್ಪುವಂತಹ ಬಣ್ಣಗಳ ಸೀರೆ ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಸಾಮಾನ್ಯ ನೆರಿಗೆಯಲ್ಲೂ ಸುಂದರವಾಗಿ ಕಾಣುವಂತೆ ಸೀರೆ ಉಡಬಹುದು. ಪಲ್ಲು ಭಾಗವನ್ನು ಒಂದು ಅಂದಾಜಿನಲ್ಲಿ ತೆಗೆದುಕೊಂಡು ಬಣ್ಣದ ಸೀರೆ ಪಿನ್ ಹಾಕಿಕೊಂಡರೆ ಸಾಕು. ಇದಕ್ಕೆ ಡಾಬಿನ ಆವಶ್ಯಕತೆ ಇರುವುದಿಲ್ಲ . ಹಾಗೆಯೇ ಹೆಚ್ಚಿನ ಆಭರಣಗಳು ಬೇಕಿಲ್ಲ. ಫ್ಯಾನ್ಸಿ ಸೀರೆಗಳಿಗೆ ಈ ವಿನ್ಯಾಸ ಒಪ್ಪುವಂತದ್ದು ಮತ್ತು ಕ್ಯಾಶುವಲ್ ಸಮಾರಂಭಗಳಿಗೆ ಇಂತಹ ಶೈಲಿ ತುಂಬಾ ಸೂಕ್ತವಾಗಿದೆ. ದೂರ ದೂರ ನೆರಿಗೆ ವಿನ್ಯಾಸ
ಸೀರೆಯ ಪಲ್ಲುವನ್ನು ದೊಡ್ಡದಾಗಿ ನೆರಿಗೆ ಹಿಡಿದು ಪಿನ್ ಹಾಕಿಕೊಂಡು ಸಿಂಪಲ್ ಆಭರಣ ತೊಟ್ಟರೆ ತುಂಬಾ ಚೆನ್ನಾಗಿ ಕಾಣಬಹುದು. ಈ ಶೈಲಿಯನ್ನು ಹೆಚ್ಚಾಗಿ ಸಾಮಾನ್ಯ ಸಮಾರಂಭಗಳಲ್ಲಿ ಕಾಲೇಜಿನ ವಿಶೇಷ ಸಮಾರಂಭಕ್ಕೆ ಹೆಚ್ಚು ಸೂಕ್ತವಾಗಿದೆ ಮತ್ತು ಮಧ್ಯಮ ಇದು ಎಲ್ಲರಿಗೂ ಒಪ್ಪುವಂತಹದ್ದು.
Related Articles
ನಿಮ್ಮ ಬಳಿ ಲೆಹೆಂಗಾ, ಗಾಗ್ರ ಚೋಲಿ ಇಲ್ಲವೆಂದು ಕೊರಗಬೇಡಿ. ಉತ್ತಮ ಬಣ್ಣದ ಕಾಂಜೀವರಂ ಸೀರೆಯನ್ನು ಗುಜರಾತಿ ಶೈಲಿಯಲ್ಲಿ ಉಟ್ಟುಕೊಂಡು, ಸೀರೆಯ ಅಂಚು ಸೊಂಟದ ಸುತ್ತ ಮತ್ತು ಹೆಗಲ ಮೇಲೆ ಬರುವಂತೆ ಮಾಡಿದರೆ ಲೆಹೆಂಗಾ ಮಾದರಿಯಂತೆ ಸೀರೆಯನ್ನುಡಬಹುದು. ಈ ಶೈಲಿಯ ಸೀರೆಗೆ ಬೋಟ್‌ನೆಕ್ ರವಿಕೆ ಧರಿಸಿದರೆ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.
Advertisement
ಸಿಂಗಲ್ ಪಿನ್, ಫ್ರೀ ಸ್ಟೈಲ್ ಶೈಲಿಎಲ್ಲರೂ ಈ ಶೈಲಿಯನ್ನು ಇಷ್ಟಪಡುವುದು ಸಹಜ. ಹಾಗೆಯೇ ಇದು ಶೀಘ್ರದಲ್ಲಿ ಉಡಬಹುದಾದ ಶೈಲಿ ಇದಾಗಿದೆ. ಈ ಶೈಲಿಗೆ ಕಾಟನ್ ಸಿಲ್ಕ್, ಫ್ಯಾನ್ಸಿ ಸೀರೆಗಳು ಈ ವಿನ್ಯಾಸಕ್ಕೆ ಹೆಚ್ಚು ಒಪ್ಪುತ್ತದೆ. - ವಿಜಿತಾ ಬಂಟ್ವಾಳ