Advertisement

ಹಸ್ತಶಿಲ್ಪಿಯ ಸೀರೆ ಹಾಡು

01:47 PM Jun 29, 2019 | Vishnu Das |

ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ದೇಶ ನಮ್ಮದು. ಭಾರತದ ಪ್ರಮುಖ ನಾಲ್ಕು ಪ್ರಭೇದದ ರೇಷ್ಮೆಗಳಾದ ತಸ್ಸರ್‌, ಎರಿ, ಮಲ್‌ಬರಿ ಮತ್ತು ಮುಗಾ ರೇಷ್ಮೆಗೆ ವಿಶ್ವಾದ್ಯಂತ ವ್ಯಾಪಕ ಬೇಡಿಕೆಯಿದೆ. ಈಗ ಮೈಸೂರಿನ “ಹಸ್ತಶಿಲ್ಪಿ’ ಸಂಸ್ಥೆಯು ಈ ನಾಲ್ಕೂ ಬಗೆಯ ರೇಷ್ಮೆ ವಸ್ತ್ರಗಳನ್ನು ಒಂದೇ ಅಂಗಳದಲ್ಲಿ ತಂದಿದ್ದು, “ಸಿಲ್ಕ್ ಇಂಡಿಯಾ’ ರೇಷ್ಮೆ ಮೇಳವನ್ನು ಆಯೋಜಿಸಿದೆ. ಕುಶಲಕರ್ಮಿಗಳ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದು ಈ ಮೇಳದ ಉದ್ದೇಶ.
ಒಂಬತ್ತು ದಿನಗಳ ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಜೀಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 50ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆದಿದ್ದಾರೆ.

Advertisement

ಸರ್ವ ಬಗೆಯ ಸೀರೆ
ತಸ್ಸರ್‌ ರೇಷ್ಮೆ ಸೀರೆ, ಕ್ರೇಪ್‌, ಶಿಫಾನ್‌ ಮತ್ತು ಜಾರ್ಜೆಟ್‌ ಸಿಲ್ಕ್ ಸೀರೆ, ಅರಿಣಿ ರೇಷ್ಮೆ ಸೀರೆ, ಧರ್ಮಾವರಂ, ಕಾಂಜೀಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ರಾ ಸಿಲ್ಕ್ ಮತ್ತು ಕೋಸಾ ಸೀರೆ, ಕೊಲ್ಕತ್ತಾ ಗಣಪತಿ ಸೀರೆ, ಢಾಕ ಸೀರೆ, ಡಿಸೈನರ್‌ ಎಂಬಾಯxರಿ ಸೀರೆ ಮತ್ತು ಡ್ರೆಸ್‌, ಬಲ್‌ಚೂರಿ ರೇಷ್ಮೆ, ಮಟ್ಕಾ ಸೀರೆ, ಪ್ರಿಂಟೆಡ್‌ ಸೀರೆ, ಪಶ್ಮೀನಾ ಸೀರೆ, ಡಿಸೈನರ್‌ ಡ್ರೆಸ್‌ ಮೆಟೀರಿಯಲ್ಸ್‌ ಮತ್ತು ಸೀರೆ, ಬಾಗಲ್‌ಪುರ್‌ ರೇಷ್ಮೆ ಸೀರೆ ಮತ್ತು ಡ್ರೆಸ್‌, ಉಪ್ಪಡಾ ಮತ್ತು ಗೊಡ್ವಾಲ್‌ ಸೀರೆ, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಕೊಲ್ಕತ್ತಾ ರೇಷ್ಮೆ ಸೀರೆ, ಬನಾರಸ್‌ ಮತ್ತು ಜಮ್‌ದಾನಿ ರೇಷ್ಮೆ, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿದೆ.
ಅಷ್ಟೇ ಅಲ್ಲದೆ, ಕುರ್ತಾ, ಶಾಲುಗಳು, ಸಲ್‌ವಾರ್‌ ಕಮೀಜ್‌ ಮತ್ತು ಉಡುಪಿನ ಬಟ್ಟೆಗಳು, ಕುಶನ್‌ ಕವರ್‌ಗಳು ಮತ್ತು ಬೆಡ್‌ಶೀಟ್‌ಗಳು ಕೂಡಾ ಲಭ್ಯ. ಉತ್ಪಾದಕರು ಮತ್ತು ಗ್ರಾಹಕರ ನಡುವಿನ ನೇರ ವ್ಯವಹಾರವಾದ್ದರಿಂದ ವಸ್ತುಗಳು ನ್ಯಾಯಯುತ ಬೆಲೆಗಳಲ್ಲಿ ಲಭ್ಯ. .

ಯಾವಾಗ?: ಜೂ. 29- ಜುಲೈ 6ರವರೆಗೆ ಬೆಳಗ್ಗೆ 10.30- 8.30
ಎಲ್ಲಿ?: ವೈಟ್‌ ಪೆಟಲ್ಸ್‌, ಬಿಎಂಟಿಸಿ ಬಸ್‌ ಡಿಪೋ, ಮಾರುತಿ ಮಂದಿರದ ಹತ್ತಿರ, ವಿಜಯನಗರ

Advertisement

Udayavani is now on Telegram. Click here to join our channel and stay updated with the latest news.

Next