Advertisement

ಭಾರತ ಹಾಕಿ ಮಾಜಿ ನಾಯಕ ಸರ್ದಾರ್‌ಗೆ ಜೀವದಾನ

06:40 AM Feb 21, 2018 | |

ಹೊಸದಿಲ್ಲಿ: ಮಲೇಶ್ಯದ ಇಪೋನಲ್ಲಿ ಮಾ. 3ರಿಂದ ಆರಂಭವಾಗುವ 27ನೇ ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಕೂಟದಲ್ಲಿ ಭಾರತೀಯ ತಂಡವನ್ನು ಸರ್ದಾರ್‌ ಸಿಂಗ್‌ ಮುನ್ನಡೆಸಲಿದ್ದಾರೆ.

Advertisement

ಆರನೇ ರ್‍ಯಾಂಕಿನ ಭಾರತ ಸಹಿತ ವಿಶ್ವದ ನಂಬರ್‌ ವನ್‌ ಆಸ್ಟ್ರೇಲಿಯ, ದ್ವಿತೀಯ ರ್‍ಯಾಂಕಿನ ಆರ್ಜೆಂಟೀನ, ಇಂಗ್ಲೆಂಡ್‌, ಅಯರ್‌ಲ್ಯಾಂಡ್‌ ಮತ್ತು ಆತಿಥೇಯ ಮಲೇಶ್ಯ ಈ ಕೂಟದಲ್ಲಿ ಆಡಲಿದೆ. ಫೈನಲ್‌ ಪಂದ್ಯ ಮಾ. 10ರಂದು ನಡೆಯಲಿದೆ.

2018ರಲ್ಲಿ ಸಾಕಷ್ಟು ಹಾಕಿ ಕೂಟಗಳಲ್ಲಿ ಭಾಗವಹಿಸುವ ಕಾರಣಕ್ಕೆ ಸರ್ದಾರ್‌ ಸಿಂಗ್‌ ಅವರಿಗೆ ಕೆಲವೊಂದು ಕೂಟಗಳಿಗೆ ವಿಶ್ರಾಂತಿ ನೀಡಲಾಗಿತ್ತು ಮತ್ತು ಯುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಸರ್ದಾರ್‌ ಅವರು ತಂಡಕ್ಕೆ ಮರಳಿದ್ದು ಸುಲ್ತಾನ್‌ ಅಜ್ಲಾನ್‌ ಶಾ ಕೂಟದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದರಿಂದ ಸರ್ದಾರ್‌ ಅವರನ್ನು ತಂಡಕ್ಕೆ 
ಸೇರಿಸಿಕೊಳ್ಳಲಾಗಿದೆ.

ಕೋರ್‌ ಬಣದ ನಾಯಕರಲ್ಲಿ ಸರ್ದಾರ್‌ ಒಬ್ಬರಾಗಿದ್ದಾರೆ. ಮನ್‌ಪ್ರೀತ್‌ ಸಿಂಗ್‌ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲು ಅವರನ್ನು ಆಯ್ಕೆ ಮಾಡಲಾಗಿದೆ. ಅವರೊಬ್ಬ ಅತ್ಯಂತ ಅನುಭವಿ ಆಟಗಾರ. ಈ ಹಿಂದಿನ ಎರಡು ಕೂಟಗಳನ್ನು ತಪ್ಪಿಸಿಕೊಂಡಿರುವ ಅವರಿಗೆ ತನ್ನ ಸಾಮರ್ಥ್ಯ ಪ್ರದರ್ಶಿಸಲು ಇದೊಂದು ಒಳ್ಳೆಯ ಅವಕಾಶ ಎಂದು ಕೋಜ್‌ ಜೋರ್ಡ್‌ ಮರಿನೆ ಹೇಳಿದ್ದಾರೆ.

ರಮಣದೀಪ್‌ ಸಿಂಗ್‌ ಅವರನ್ನು ತಂಡದ ಉಪನಾಯಕರನ್ನಾಗಿ ಹೆಸರಿಸಲಾಗಿದೆ. ತಂಡದಲ್ಲಿ ಮೂವರು (ಮನ್‌ದೀಪ್‌ ಮೋರ್‌, ಸುಮಿತ್‌ ಕುಮಾರ್‌ ಮತ್ತು ಶಿಲಾನಂದ್‌ ಲಾಕ್ರ) ಹೊಸಬರಿದ್ದಾರೆ. ಸುಮಿತ್‌ ಸದ್ಯ ಸಾಗುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.  ಈ ಮೂವರು ಕಳೆದ ವರ್ಷ ನಡೆದ ಸುಲ್ತಾನ್‌ ಆಫ್ ಜೊಹೋರ್‌ ಕಪ್‌ ಹಾಕಿ ಕೂಟದಲ್ಲಿ ಭಾರತೀಯ ತಂಡ ಕಂಚಿನ ಪದಕ ಗೆಲ್ಲಲು ನೆರವಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next